ಬೆಂಗಳೂರು: ರಾಜ್ಯದ (Karnataka) ಐಟಿ ಉದ್ಯೋಗಿಗಳಿಗೆ (IT Employees) ದೊಡ್ಡ ಶಾಕ್ ಎದುರಾಗಿದ್ದು, ಇನ್ಮುಂದೆ 14 ಗಂಟೆಗಳ ಕಾಲ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಸರ್ಕಾರ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತಂದರೆ, ಐಟಿ ಕೆಲಸಗಾರರು ಇನ್ನು ಮುಂದೆ 9 ಗಂಟೆಯಲ್ಲ, 14 ಗಂಟೆ ಕೆಲಸ ಮಾಡಬೇಕಾಗಬಹುದು.
ಕರ್ನಾಟಕ ಶಾಪ್ಸ್ ಕಮರ್ಷಿಯಲ್ ಎಸ್ಟಾಬ್ಲಿಶ್ಮೆಂಟ್ 2024 ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತರಲು ಸರ್ಕಾರದ ಮೇಲೆ ಕಂಪನಿಗಳು ಒತ್ತಡ ಹೇರುತ್ತಿವೆ. ಕಾರ್ಮಿಕ ಇಲಾಖೆಯೂ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಐಟಿ ಕಾರ್ಮಿಕರ ಅಸೋಸಿಯೇಷನ್ ಜೊತೆ ಸಭೆ ನಡೆಸಿದೆ. ಆದರೆ, ಈ ಪ್ರಸ್ತಾವನೆಗೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. 14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಜೊತೆಗೆ ಅದೇ ಸಂಬಳಕ್ಕೆ ಹೆಚ್ಚು ಸಮಯ ದುಡಿಯಬೇಕು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಹೀಗಾಗಿಯೇ ಸರ್ಕಾರ ಬುಧವಾರ ಐಟಿ ಉದ್ಯೋಗಿಗಳ ಸಭೆ ಕರೆದಿದ್ದು, ಕಾಯ್ದೆ ಜಾರಿಯಾದರೆ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಪ್ರತಿಕ್ರಿಯಿಸಿ, ಯಾವುದೋ ಇಂಡಸ್ಟ್ರಿ ಕಡೆಯಿಂದ ಬೇಡಿಕೆ ಬಂದಿದೆ. ಈ ವಿಚಾರಕ್ಕೆ ಪರ-ವಿರೋಧ ಚರ್ಚೆಯಾಗುತ್ತಿದೆ. ಇದು ಅಂತಿಮ ತೀರ್ಮಾನ ಅಲ್ಲ ಎಂದು ಹೇಳಿದ್ದಾರೆ.