ವ್ಯಾಕ್ಸಿನ್ ಪಡೆದರೂ ವಕ್ಕರಿಸುತ್ತಿದೆ ಕೊರೊನಾ : ಇದರಲ್ಲಿ ಕೋವಿಶೀಲ್ಡ್ ಪಡೆದವರೇ ಹೆಚ್ಚು..! Corona vaccine saaksha tv
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ. ಸೋಂಕಿಗೆ ಕಡಿವಾಣ ಹಾಕಲು ರಾಜ್ಯದಾದ್ಯಂತ ಲಸಿಕಾ ಅಭಿಯಾನವೂ ಕೂಡ ಮುಂದುವರೆದಿದೆ.
ಈ ಮಧ್ಯೆ ಶಾಕಿಂಗ್ ನ್ಯೂಸ್ ಒಂದು ಎಲ್ಲರ ನಿದ್ದೆಗೆಡಿಸಿದ್ದು, ಕರ್ನಾಟಕದಲ್ಲಿ ಕೊರೊನಾ ಲಸಿಕೆ ಪಡೆದವರಲ್ಲಿ ಮತ್ತೆ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿದೆ.
ರಾಜ್ಯದಲ್ಲಿ ಈವರೆಗೂ ಲಸಿಕೆ ಪಡೆದ ಒಟ್ಟು 13,768 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಇದರಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ 11,150 ಜನರು ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆದ 2,618 ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ಈ ಪೈಕಿ ಕೋವಿಶೀಲ್ಡ್ ಮೊದಲ ಡೋಸ್ ಪಡೆದ 9,030 ಜನರಿಗೆ ಸೋಂಕು ಕಾಣಿಸಿಕೊಂಡಿದ್ದರೇ ಎರಡೂ ಡೋಸ್ ಪಡೆದ 2,120 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇತ್ತ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ 2,216 ಜನರು ಸೋಂಕಿತರಾಗಿದ್ದು, ಎರಡೂ ಡೋಸ್ ಪಡೆದ 402 ಜನರಿಗೆ ಸೋಂಕು ಪತ್ತೆಯಾಗಿದೆ.