ತಾಳಿ ಕಟ್ಟುವ ಶುಭ ವೇಳೆ.. ಕಾದಿತ್ತು ವರನಿಗೆ ಬಿಗ್ ಶಾಕ್..
wedding Tamil nadu
ನೀಲಗಿರಿ, ನವೆಂಬರ್02: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ ಮದುವೆಯ ಸಮಯದಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ವರನಿಗೆ ಮತ್ತು ನೆರೆದಿದ್ದ ಜನ ಸಮೂಹಕ್ಕೆ ದೊಡ್ಡ ಶಾಕ್ ನೀಡಿದ್ದಾಳೆ. wedding Tamil nadu
ಇನ್ನೇನು ತಾಳಿ ಕಟ್ಟಿ ಸತಿ-ಪತಿಗಳಾಗಿ ಬಿಟ್ಟರು ಎನ್ನುತ್ತಿದ್ದವರಿಗೆ ದೊಡ್ಡ ಅಚ್ಚರಿಯನ್ನು ನೀಡಿದ್ದಾಳೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿ ನಿವಾಸಿ ಪ್ರಿಯದರ್ಶಿನಿ ಎಂಬ ವಧುವಿನ ವಿವಾಹದಲ್ಲಿ ಈ ಘಟನೆ ನಡೆದಿದೆ. ಮದುವೆ ಕಾರ್ಯಗಳೆಲ್ಲಾ ಸರಾಗವಾಗಿ ಮುಗಿದು ತಾಳಿ ಕಟ್ಟಲು ವರ ಸಿದ್ಧನಾಗುತ್ತಿದ್ದಂತೆ ವಧು ಕೈ ಅಡ್ಡ ಹಿಡಿದು ಒಂದು ಗಂಟೆ ಕಾಯುವಂತೆ ಹೇಳಿದ್ದಾಳೆ.
ಉತ್ತರ ಪ್ರದೇಶ – ಇಲ್ಲಿ ಹುಡುಗರು ಸಹ ಸಾರ್ವಜನಿಕವಾಗಿ ಹಾಫ್ ಪ್ಯಾಂಟ್ ಧರಿಸುವಂತಿಲ್ಲ
ಏಕೆ ಎಂಬುದಾಗಿ ಪ್ರಶ್ನಿಸಿದವರಿಗೆ, ನಾನು ಪ್ರೀತಿಸಿದ ಹುಡುಗ ಅರ್ಧ ಗಂಟೆಯಲ್ಲಿ ಬರಲಿದ್ದಾನೆ. ನನ್ನ ಮದುವೆ ಅವನೊಂದಿಗೆ ಇಲ್ಲಿಯೇ ನಡೆಯಲಿದೆ ಎಂದು ಹೇಳಿ ವರನಿಗೆ ಮತ್ತು ಮದುವೆಯಲ್ಲಿ ನೆರೆದವರಿಗೆ ಶಾಕ್ ನೀಡಿದ್ದಾಳೆ.
ಹೀಗೆ ಹೇಳಿ ಹಸೆಮಣೆಯಿಂದ ಎದ್ದು ನಿಂತ ವಧುವನ್ನು ಹಿರಿಯರು ಯಾಕೆ ಎದ್ದೆ, ಕುಳಿತುಕೊಳ್ಳುವಂತೆ ಹೇಳಿದಾಗ ಆಕೆ ತನಗೆ ಇವರೊಂದಿಗೆ ಮದುವೆಯಾಗಲು ಇಷ್ಟವಿಲ್ಲ. ನಾನು ಪ್ರೀತಿಸಿದ ಹುಡುಗ ಇನ್ನೊಂದು ಅರ್ಧಗಂಟೆಯಲ್ಲಿ ಬರುವುದಾಗಿ ಹಿರಿಯರು, ಕುಟುಂಬಸ್ಥರಿಗೆ ತಿಳಿಸಿದ್ದಾಳೆ.
ಇದರಿಂದಾಗಿ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೇ, ವಧುವಿನ ಕಪಾಳಕ್ಕೆ ಬಾರಿಸಿದ್ದಾರೆ. ಇದೆಲ್ಲವನ್ನು ಮೂಕ ವಿಸ್ಮಿತನಾಗಿ ಕುಳಿತಲ್ಲಿಯೇ ನೋಡುತ್ತಿದ್ದ ವರ ಕೊನೆಗೆ ಆತನ ಕುಟುಂಬಸ್ಥರು ಎದ್ದೇಳು ಎಂದಾಗ ಎದ್ದು, ಹೊರಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ