ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಚಿತ್ರ ತಂಡದಿಂದ ಅಭಿಮನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಈಗ ಚಿತ್ರ ತಂಡವು ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, ಅಭಿಮಾನಿಗಳು ಭಾರೀ ಖುಷಿಯಾಗಿದ್ದಾರೆ. ಆ.15ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಆ ನಂತರ ಡಿ.6ರಂದು ಸಿನಿಮಾ ಬಿಡುಗಡೆ ಮಾಡಬಹುದು ಎನ್ನಲಾಗಿತ್ತು. ಆದರೆ, ಈಗ ಆ ದಿನದಂದೂ ಚಿತ್ರ ಬಿಡುಗಡೆಯಾಗುತ್ತಿಲ್ಲ.
ಬದಲಾಗಿ ಈ ವರ್ಷದ ಅಂತ್ಯ ಡಿಸೆಂಬರ್ 5ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಒಂದು ದಿನ ಮುಂಚಿತವಾಗಿ ಪುಷ್ಪರಾಜ್, ಶ್ರೀವಲ್ಲಿ ದರ್ಶನ ನೀಡಲಿದ್ದಾರೆ. ಈ ಕುರಿತು ಇಂದಿನ ಪ್ರೆಸ್ ಮೀಟ್ನಲ್ಲಿ ಚಿತ್ರತಂಡ ಅಧಿಕೃತವಾಗಿ ಹೇಳಿದೆ.
‘ಪುಷ್ಪ 2’ ಬಿಡುಗಡೆಯ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.