ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಚಿತ್ರದ ಕುರಿತು ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ.
ಸ್ವತಃ ಸಿನಿಮಾದ ನಿರ್ದೇಶಕ ಸುಕುಮಾರನ್ (Sukumaran) ಅಪ್ಡೇಟ್ ನೀಡಿದ್ದು, ಸಿನಿಮಾದ ಬಜೆಟ್ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಫಹಾದ್ ಫಾಸಿಲ್ (Fahadh Faasil) ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯ ಮತ್ತೊಂದು ಲೆವಲ್ ನಲ್ಲಿದೆ ಎಂದು ಹೇಳಿದ್ದಾರೆ.
ಒಂದೆಡೆ ಚಿತ್ರದ ಚಿತ್ರೀಕರಣ ನಡೆಯುತಿದ್ದರೆ, ಚಿತ್ರದ ಆಡಿಯೋ ಹಕ್ಕು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ. ಈ ಮೂಲಕ ಇಲ್ಲಿಯವರೆಗೆ ದಾಖಲಾಗಿದ್ದ ಎಲ್ಲ ಆಡಿಯೋ ಹಕ್ಕನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದೆ. ಟಿ ಸೀರಿಸ್ ಕಂಪೆನಿಯು 65 ಕೋಟಿ ರೂ. ಗೆ ಆಡಿಯೋ ಹಕ್ಕು ಖರೀದಿಸಿದೆ ಎಂದು ತಿಳಿದು ಬಂದಿದೆ.
ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಬಿಡುಗಡೆಯಾಗುವ ಎಲ್ಲ ಭಾಷಗಳ ಹಕ್ಕನ್ನು ಆ ಕಂಪನಿ ಖರೀದಿಸಿದೆ ಎನ್ನಲಾಗುತ್ತಿದೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ರೂ.ಗೆ ಮಾರಾಟವಾಗಿತ್ತು. ಅಲ್ಲದೇ, ಆರ್.ಆರ್.ಆರ್ 25 ಕೋಟಿ ರೂ. ಸಾಹೋ 22 ಕೋಟಿ ರೂ. ಗೆ ಮಾರಾಟವಾಗಿತ್ತು. ಈಗ ಎಲ್ಲ ಚಿತ್ರಗಳ ದಾಖಲೆಯನ್ನು ಪುಷ್ಪ 2 ಮುರಿದಿದೆ.