Bigg Boss 8 : ಮೊದಲ ವಾರವೇ ದೊಡ್ಮನೆಗೆ ವಿದಾಯ ಹೇಳಿದ ಧನುಶ್ರೀ..!
ಬಿಗ್ ಬಾಸ್ ಸೀಸನ್ 8 ಮೊದಲನೇ ವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವಾರದ ಅಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಜೊತೆಗೆ ಕಿಚ್ಚ ಸುದೀಪ್ ಪಂಚಾಯತಿ ಕೂಡ ನಡೆದಾಗಿದೆ. ಅಷ್ಟೇ ಅಲ್ಲ ಮೊದಲನೇ ವಾರವೇ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಯಿಂದ ಹೊರಗಡೆ ಹೋಗಿದ್ದಾರೆ. ಅದೇ ಟಿಕ್ ಸ್ಟಾರ್ ಧನುಶ್ರೀ. ಕೇವಲ ಒಂದೇ ವಾರಕ್ಕೆ ದೊಡ್ಮನೆಯಿಂದ ಹೊರಗೆ ಎಡಗಾಲಿಟ್ಟಿದ್ದಾರೆ. ಈ ಮೂಲಕ ಶುಭಾ ಪುಂಜಾ ಅಥವ ನಿರ್ಮಲಾ ಮನೆಯಿಂದ ಆಚೆ ಹೋಗಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ. ಮೊದಲ ವಾರ ಐದು ಮಂದಿ ನಾಮಿನೇಟ್ ಆಗಿದ್ದರು, ನಿರ್ಮಲಾ, ರಘು ಗೌಡ, ವಿಶ್ವ ಹಾಗೂ ಶುಭಾ ಪೂಂಜಾ. ಇದರಲ್ಲಿ ಶನಿವಾರದ ಎಪಿಸೋಡ್ ನಲ್ಲಿ ಶುಭಾ ಪೂಂಜಾ ಹಾಗೂ ವಿಶ್ವ ಅವರುಗಳು ಸೇಫ್ ಆಗಿದ್ದರು. ಭಾನುವಾರದ ಸಂಚಿಕೆ ಆರಂಭಿಸಿದ ಸುದೀಪ್ ಅವರು ಮೊದಲು ರಘು ಗೌಡ ಅವರನ್ನು ಸೇಫ್ ಮಾಡಿದರು. ಆ ನಂತರ ಉಳಿದ ಇಬ್ಬರಲ್ಲಿ ಧನುಶ್ರಿ ಅವರನ್ನು ಹೊರಗೆ ಹೋಗಲು ಬಿಗ್‌ಬಾಸ್ ಸೂಚಿಸಿದರು ಅಂತೆಯೇ ಧನುಶ್ರಿ ಮೊದಲ ಸ್ಪರ್ಧಿಯಾಗಿ ಹೊರಗೆ ಬಂದರು.
ಧೋನಿ, ಟೀಮ್ ಇಂಡಿಯಾ ನಾಯಕನಾಗಿ ಆಯ್ಕೆಯಾಗಲು ಕಾರಣ ಸಚಿನ್ & ದ್ರಾವಿಡ್ – ಶರದ್ ಪವಾರ್
ಇನ್ನೂ ಧನು ಮನೆಯಿಂದ ಆಚೆ ಬರುವಾಗ ಇತರರೂ ಭಾವುಕರಾಗಿ ಧನುಶ್ರೀಗೆ ವಿದಾಯ ಹೇಳಿದ್ರು. ಧನುಶ್ರೀ ಕೂಡ ತುಂಬಾ ಬೇಸರದಿಂದಲೇ ಆಚೆ ಬಂದರು. ಆದ್ರೆ ಮನೆಯಿಂದ ಆಚೆ ಬರುವುದಕ್ಕೂ ಮುನ್ನ ಧನುಶ್ರೀ ಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿತ್ತು. ಒಬ್ಬರನ್ನು ನಾಮಿನೇಷನ್ ನಿಂದ ಉಳಿಸುವ ಅಧಿಕಾರ ನೀಡಿದರು. ಆ ಅಧಿಕಾರವನ್ನು ಬಳಸಿಕೊಂಡ ಧನುಶ್ರಿ ಅವರು ರಘು ಗೌಡ ಅವರನ್ನು ನಾಮಿನೇಷನ್ ನಿಂದ ಉಳಿಸಿದರು.







