ಧೋನಿ, ಟೀಮ್ ಇಂಡಿಯಾ ನಾಯಕನಾಗಿ ಆಯ್ಕೆಯಾಗಲು ಕಾರಣ ಸಚಿನ್ & ದ್ರಾವಿಡ್ – ಶರದ್ ಪವಾರ್

1 min read
M.S. dhoni sachin tendulkar saakshatv

ಧೋನಿ, ಟೀಮ್ ಇಂಡಿಯಾ ನಾಯಕನಾಗಿ ಆಯ್ಕೆಯಾಗಲು ಕಾರಣ ಸಚಿನ್ & ದ್ರಾವಿಡ್ – ಶರದ್ ಪವಾರ್

 sachin, dravid dhoni saakshatv2007… ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆಗ ಟೀಮ್ ಇಂಡಿಯಾದ ನಾಯಕನಾಗಿದ್ದದ್ದು ರಾಹುಲ್. ಬಿಸಿಸಿಐ ಅಧ್ಯಕ್ಷರಾಗಿದ್ದು ಶರದ್ ಪವಾರ್.
ರಾಹುಲ್ ದ್ರಾವಿಡ್ ಗೆ ಟೀಮ್ ಇಂಡಿಯಾದ ನಾಯಕನಾಗಿ ಮುಂದುವರಿಯುವುದು ಇಷ್ಟವಾಗಿರಲಿಲ್ಲ. ನಾಯಕತ್ವದ ಒತ್ತಡ ರಾಹುಲ್ ಅವರ ಬ್ಯಾಟಿಂಗ್ ಮೇಲೂ ಪರಿಣಾಮ ಬೀರುತ್ತಿತ್ತು. ಹೀಗಾಗಿ 2007ರ ಇಂಗ್ಲೆಂಡ್ ಪ್ರವಾಸದ ವೇಳೆ ಶರದ್ ಪವಾರ್ ಅವರನ್ನು ಇಂಗ್ಲೆಂಡ್ ನಲ್ಲೇ ರಾಹುಲ್ ದ್ರಾವಿಡ್ ಭೇಟಿ ಮಾಡಿದ್ದರು. ಆಗ ನಾಯಕತ್ವವನ್ನು ತ್ಯಜಿಸುವ ವಿಚಾರವನ್ನು ರಾಹುಲ್ ದ್ರಾವಿಡ್ ಶರದ್ ಪವಾರ್ ಬಳಿ ಹೇಳಿಕೊಂಡ್ರು. ಇದಕ್ಕೆ ಕಾರಣವನ್ನೂ ಹೇಳಿದ್ದರು.
ಆಗ ಶರದ್ ಪವಾರ್ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಶರದ್ ಪವಾರ್ ಸಚಿನ್ ತೆಂಡುಲ್ಕರ್ ಬಳಿ ಹೇಳಿದ್ರು. ಇದಕ್ಕೆ ಸಚಿನ್ ತೆಂಡುಲ್ಕರ್ ಸಹ ಒಪ್ಪಿಗೆ ನೀಡಿರಲಿಲ್ಲ. ಆಗ ಪವಾರ್ ಇಬ್ಬರೂ ನಾಯಕತ್ವ ಬೇಡ ಅಂದ್ರೆ ಮುಂದೆ ಹೇಗೆ ಎಂಬ ಪ್ರಶ್ನೆಯನ್ನು ಸಚಿನ್ ಬಳಿ ಪವಾರ್ ಹೇಳಿದ್ದರಂತೆ.
ಅದಕ್ಕೆ ಸಚಿನ್ ಟೀಮ್ ಇಂಡಿಯಾದ ನಾಯಕ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಒಬ್ಬನಿದ್ದಾನೆ. ಆತನ ಹೆಸರು ಮಹೇಂದ್ರ ಸಿಂಗ್ ಧೋನಿ ಅಂತ ಶರದ್ ಪವಾರ್ ಗೆ ಸಚಿನ್ ಹೇಳಿದ್ದರು. ಈ ವಿಷ್ಯವನ್ನು ಸ್ವತಃ ಶರದ್ ಪವಾರ್ ಅವರೇ ಈಗ ಬಹಿರಂಗಪಡಿಸಿದ್ದಾರೆ.

dhoni sharad pawar sachin saakshatvಇದೇ ಸಮಯದಲ್ಲಿ ಕೆರೆಬಿಯನ್ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲು ಕೂಡ ಅನುಭವಿಸಿತ್ತು. ಆದಾದ ಬಳಿಕ 2007ರ ಟಿ-ಟ್ವೆಂಟಿ ವಿಶ್ವಕಪ್ ಗೆ ಧೋನಿ ನಾಯಕತ್ವ ವಹಿಸಿದ್ದರು. ಅಲ್ಲದೆ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಕೂಡ ಗೆದ್ದಿದ್ದರು.
ಈ ಗೆಲುವಿನ ಬಳಿಕ ಧೋನಿ ಮೊದಲು ಟೀಮ್ ಇಂಡಿಯಾದ ಏಕದಿನ ತಂಡಕ್ಕೆ ಸಾರಥಿಯಾದ್ರು. ಹಾಗೇ ಟೆಸ್ಟ್ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕನಾಗಿದ್ದರು. ಅನಿಲ್ ಕುಂಬ್ಳೆ ವಿದಾಯ ಹೇಳಿದ ಬಳಿಕ ಧೋನಿ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. 2011ರ ಏಕದಿನ ವಿಶ್ವಕಪ್, ಐಸಿಸಿ ನಂಬರ್ ವನ್ ಟೆಸ್ಟ್ ತಂಡ ಹೀಗೆ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಯಶಸ್ಸಿನ ಉತ್ತುಂಗಕ್ಕೇರಿತ್ತು. ಇದೀಗ ಎಲ್ಲವೂ ಇತಿಹಾಸ.
ಅಂದ ಹಾಗೇ ಈ ಧೋನಿ ಟೀಮ್ ಇಂಡಿಯಾದ ನಾಯಕನಾಗಿ ಹೇಗೆ ಆಯ್ಕೆ ಯಾಗಿದ್ದರು ಎಂಬುದನ್ನು ಮಾಜಿ ಬಿಸಿಸಿಐ ಹಾಗೂ ಐಸಿಸಿ ಅಧ್ಯಕ್ಷ ಹಾಗೂ ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd