BIGG BOSS 8 : ಜೈಲು ಸೇರಿದ ಮೊದಲ ಸ್ಪರ್ಧಿ ಧನುಶ್ರೀ..! ಕೇವಲ ಗಂಜಿ ಕುಡಿಯುವ ಶಿಕ್ಷೆ..!
ಸೋಷಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಸದ್ಯ ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಜೈಲು ಸೇರಿದ ಮೊದಲ ಸ್ಪರ್ಧಿಯಾಗಿದ್ದಾರೆ. ವಾರ ಪೂರ್ತಿ ಟಾಸ್ಕ್ ಗಳಲ್ಲಿ ಕಳಪೆ ಪ್ರದರ್ಶನ ತೋರಿದಕ್ಕೆ ಮನೆ ಮಂದಿಯಲ್ಲಾ ಸೇರಿ ಆಕೆಯನ್ನ ನಾಮಿನೇಟ್ ಮಾಡಿ ಕಳಪೆ ಬೋರ್ಡ್ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.
ಬಿಗ್ ಬಾಸ್ 8 : ನಿರ್ಮಲಾ ಮನೆ ಮಂದಿ ಎಲ್ಲರಿಂದಲೂ ಡಿಸ್ ಲೈಕ್ ಆದ್ರೂ ಆ ಒಬ್ಬ ಸ್ಪರ್ಧಿ ಮಾತ್ರವೇ ಲೈಕ್ ಮಾಡಿದ್ರು..!
ಮುಖ್ಯವಾಗಿ ನಾಮಿನೇಷನ್ ವರ್ಗಾವಣೆ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನದಿಂದಾಗಿ ಈಕೆಗೆ ಕಳಪೆ ಟ್ಯಾಗ್ ಕೊಡಲು ಇತರೇ ಸ್ಪರ್ಧಿಗಳು ನಿರ್ಧರಿಸಿದ್ದರು. ಇನ್ನೂ ಜೈಲಿಗೆ ಸೇರಿರುವ ಧನುಶ್ರೀ ಮನೆಯ ಸೌಲಭ್ಯಗಳನ್ನ ಬಳಸಿಕೊಳ್ಳದಂತೆ, ಕೇವಲ ಗಂಜಿ ಕುಡಿಯುವಂತೆ ಬಿಗ್ ಬಾಸ್ ಆರ್ಡರ್ ಮಾಡಿದ್ದಾರೆ. ಬಿಗ್ ಬಾಸ್ ನ ಮುಂದಿನ ಆದೇಶದ ವರೆಗೂ ಧನುಶ್ರೀ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.







