ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್..! ಬ್ರೋ ಗೌಡ ಪ್ರೀತಿಗೆ ಬಂಡೆಯಾದ್ರಾ ಮಂಜು..!

1 min read

ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್..! ಬ್ರೋ ಗೌಡ ಪ್ರೀತಿಗೆ ಬಂಡೆಯಾದ್ರಾ ಮಂಜು..!

ಬಿಗ್ ಬಾಸ್ ಸೀಸನ್ 8 ಆರಂಭವಾಗಿ ಇನ್ನೂ 3 ದಿನಗಳಷ್ಟೇ ಕಳೆದಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ್ ಕಹಾನಿ ಶುರುವಾಗಿದೆ. ಹೌದು ಈ ವಾರದ ಕ್ಯಾಪ್ಟನ್ ಆಗಿರೋ ಬ್ರೋ ಗೌಡ ಮನೆಯಲ್ಲಿ ಒಂದು ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಬ್ರೋ ಗೌಡ ಈ ಬಗ್ಗೆ ಹಲವರ ಬಳಿ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಶಮಂತ್ ಇಷ್ಟಪಟ್ಟ ಹುಡುಗಿ ಯಾರಿರಬಹುದು ಎಂಬ ಕುತೂಹಲ ಸದ್ಯ ಎಲ್ಲರಲ್ಲಿಯೂ ಮನೆ ಮಾಡಿತ್ತು. ಆದರೆ ಇದೀಗ ಬ್ರೋ ಗೌಡ ಆ ಹುಡುಗಿ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ.
ಹೌದು. ಶಮಂತ್ ಅವರು ತಾವು ಇಷ್ಟ ಪಟ್ಟ ಹುಡುಗಿ ದಿವ್ಯಾ ಸುರೇಶ್ ಎಂದು ಹೇಳಿಕೊಂಡಿದ್ದು, ನಿರಾಸೆಯನ್ನೂ ಕೂಡ ವ್ಯಕ್ತಪಡಿಸಿದ್ದಾರೆ. ನಾನು ಆಕೆಯನ್ನ ಪ್ರೀತಿಸುತ್ತಿದ್ದೆ. ಆದರೆ ಮಂಜು ಪಾವಗಡ ಬಂಡೆಯಾಗಿ ಅಡ್ಡಿಯಾದ್ರು ಎಂದು ಹೇಳಿಕೊಂಡಿದ್ದಾರೆ.

ಗೀತಾ ಭಟ್, ಚಂದ್ರಕಲಾ ಮೋಹನ್, ಧನುಶ್ರೀ ಹಾಗೂ ಶಮಂತ್ ನಾಲ್ಕು ಜನ ಕಿಚನ್ ನಲ್ಲಿರುವಾಗ ಶಮಂತ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆ ವಿಷಯ ನಿರ್ಮಲಾ ಮತ್ತು ಗೀತಾ ಭಟ್ ಇಬ್ಬರಿಗೆ ಮಾತ್ರ ತಿಳಿದಿತ್ತು. ಆದರೆ ಹುಡುಗಿ ಯಾರೆಂದು ಗೊತ್ತಾಗದೆ ಗೀತಾ ಅವರು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದರು. ಇದೀಗ ಕಿಚನ್ ನಲ್ಲಿ ನಡೆದ ಚರ್ಚೆಯಲ್ಲಿ ಶಮಂತ್ ತಾನು ಇಷ್ಟ ಪಡುತ್ತಿರುವ ಹುಡುಗಿ ದಿವ್ಯ ಸುರೇಶ್ ಎಂದು ಬಹಿರಂಗಪಡಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಪಾವಗಡ ಮಂಜು ಬಿಗ್ ಬಾಸ್ ಆರoಭವಾದ ಮೊದಲ ದಿನದಿಂದಲೇ ದಿವ್ಯಾ ಜೊತೆಗೆ ಫ್ಲರ್ಟ್ ಮಾಡಲು ಆರಂಭಿಸಿದ್ದಾರೆ. ದಿವ್ಯಾ ಹಾಗೂ ಮಂಜು ನಡುವಿನ ಕನೆಕ್ಷನ್ ಸಹ ದಿನೇ ದಿನೇ ಬಲವಾಗ್ತಿದೆ. ಇದು ಸಾಕಷ್ಟು ಗಾಸಿಫ್ ಗಳಿಗೂ ಎಡೆ ಮಾಡಿಕೊಟ್ಟಿದೆ. ಇವರಿಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎಂದೇ ಬಿಂಬಿಸಲಾಗ್ತಿದೆ.
ಸದ್ಯ ಈ ಸೀಸನ್ ನಲ್ಲಿ ತ್ರಿಕೋನ ಲವ್ ಸ್ಟೋರಿಯೊಂದು ಶುರುವಾಗ್ತಿದ್ದು, ಮುಂದಿನ ದಿನಗಳಲ್ಲಿ ಸಾಕಷ್ಟು ಟ್ವಿಸ್ಟ್ ಗಳನ್ನ ಪಡೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಬ್ರೋ ಗೌಡ ಒನ್ ಸೈಡ್ ಲವ್ ಸಕ್ಸಸ್ ಆಗುತ್ತಾ. ದಿವ್ಯಾ ಸುರೇಶ್ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡ್ತಾರಾ. ಅಥವಾ ಬ್ರೋ ಗೌಡ ಲವ್ ಸ್ಟೋರಿಗೆ ಮಂಜು ಫುಲ್ ಸ್ಟಾಪ್ ಇಡ್ತಾರಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡ್ಬೇಕಾಗಿದೆ.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಟ್ರಯಾಂಗಲ್ ಲವ್ ಸ್ಟೋರಿಗಳು, ಪ್ರೇಮಕಥೆಗಳು ಬೆಳಕಿಗೆ ಬಂದಿವೆ. ಅಷ್ಟೇ ಅಲ್ಲ ಬಿಗ್ ಬಾಸ್ ನಲ್ಲಿ ಹುಟ್ಟಿದ ಪ್ರೀತಿ ಮದುವೆಯಲ್ಲಿಯೂ ಅಂತ್ಯಗೊಂಡಿದೆ. ಅದಕ್ಕೆ ಉದಾಹರಣೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಇನ್ನೂ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಪ್ರಚಾರಕ್ಕೆ ಬಂದಿದ್ದ ಟ್ರಯಾಂಗಲ್ ಲವ್ ಸ್ಟೋರಿ ಬಗ್ಗೆಯೂ ಎಲ್ರಿಗೂ ಗೊತ್ತೇ ಇದೆ. ಭುವನ್ ಸಂಜನಾ ಹಾಗೂ ಪ್ರಥಮ್ ಒಂದು ಟೈಮ್ ನಲ್ಲಿ ಸಿಕ್ಕಾಪಟ್ಟೆ ಗಾಸಿಪ್ ಗಳಿಗೆ ಕಾರಣರಾಗಿದ್ದರು.

ಬಿಗ್ ಬಾಸ್ ನಿಂದ ನೇರವಾಗಿ ನಾಮಿನೇಟ್ ಆದ್ರೂ ಸೇಫ್ ಆದ್ರೂ ನಿರ್ಮಲಾ…!  

ಬಿಗ್ ಬಾಸ್ 8 : 2ನೇ ವಾರವೂ ಮನೆಯ ಕ್ಯಾಪ್ಟನ್ ಆದ ಬ್ರೋ ಗೌಡ..!

ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಬಂಗಾಳದಲ್ಲಿ ಶುರುವಾಯ್ತು ‘ಮಾ’ ಕ್ಯಾಂಟೀನ್..!

ಅಕ್ಷರಸಃ ನರಕವಾದ ಮ್ಯಾನ್ಮಾರ್, ಅಸಹಾಯಕತೆಯಿಂದ ಭಾರತಕ್ಕೆ ಓಡಿ ಬಂದ ಮ್ಯಾನ್ಮಾರ್ ಪೊಲೀಸರು..!

ಸುಶಾಂತ್ ಸಿಂಗ್ ಕೇಸ್ : 33 ಜನರ ವಿರುದ್ಧ 12 ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd