ಸುಶಾಂತ್ ಸಿಂಗ್ ಕೇಸ್ : 33 ಜನರ ವಿರುದ್ಧ 12 ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್..!

1 min read

ಸುಶಾಂತ್ ಸಿಂಗ್ ಕೇಸ್ : 33 ಜನರ ವಿರುದ್ಧ 12 ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್..!

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಿಗೂಢತೆ ಬೆನ್ನತ್ತಿ ಹೋದಾಗ ಟ್ವಿಸ್ಟ್ ಗಳ ಮೇಲೆ ಟಟ್ವಿಸ್ಟ್ ಪಡೆದು ಈಗ ಡ್ರಗ್ ಕೇಸ್ ನಲ್ಲಿ ಬಂದು ನಿಂತಿದೆ. ಸದ್ಯ ಇದೇ ಪ್ರಕರಣಕ್ಕೆ ಸಂಭಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಸುಮಾರು 12 ಸಾವಿರ ಪುಟಗಳಷ್ಟಿರುವ ಚಾರ್ಜ್ ಶೀಟನ್ನು ಎನ್ ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಸ್ವತಃ ಸಲ್ಲಿಕೆ ಮಾಡಲಿದ್ದಾರೆ.

2011ರ ಜಪಾನ್ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಅವಶೇಷ ದಶಕದ ಬಳಿಕ ಪತ್ತೆ..!

30 ಜನರ ಮೇಲೆ ಸುಮಾರು 12 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇದರಲ್ಲಿ ಸುಸಾಂತ್ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿ ಹೆಸರು ಕೂಡ ಇದೆ. ಅಂದ್ಹಾಗೆ ಇದೇ ಕೇಸ್ ನಲ್ಲಿ ರಿಯಾ ಹಾಗೂ ಆಕೆಯ ಸಹೋದರ ಸೆರೆವಾನಸವನ್ನೂ ಅನುಭವಿಸಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ.

NDPS Act ಪ್ರಕಾರದೊಳಗೆ ಪೊಲೀಸರು ಚಾರ್ಜ್ಶೀಟ್ ಫೈಲ್ ಮಾಡಿದ್ದರು. ಫೋನ್ ಕರೆ ಡಾಟಾಗಳು, ವಾಟ್ಸಪ್ ಚಾಟ್, ಹೇಳಿಕೆಗಳು ಸೇರಿವೆ. ಡ್ರಗ್ಸ್ ವಿಚಾರದಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ನಟ-ನಟಿ, ನಿರ್ದೇಶಕರು ಸೇರಿದಂತೆ 20 ಜನ ಆರೋಪಿಗಳ ಹೇಳಿಕೆಯನ್ನು ಎನ್ ಸಿಬಿ ಪಡೆದಿದೆ. ನಟ ಅರ್ಜುನ್ ರಾಮಪಾಲ್ ಅವರ ಪಾರ್ಟ್ನರ್ನ ಸಹೋದರ ಅಗಿಸಿಲಾವೊಸ್ ಡೆಮೆಟ್ರಿಯಾಡೆಸ್ ಸೇರಿದಂತೆ ಇಬ್ಬರು ವಿದೇಶಿಗರು ಹಾಗೂ ಅವರೊಂದಿಗೆ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆರೋಪಪಟ್ಟಿಯಲ್ಲಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರು 2020, ಜೂನ್ 14ರಂದು ತಮ್ಮ ಮುಂಬೈ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೊದಲು ನಮ್ಮ ದೇಶದವರಿಗೆ ಲಸಿಕೆ , ನಂತರ ವಿದೇಶಗಳಿಗೆ ರಫ್ತು : ದೆಹಲಿ ಹೈಕೋರ್ಟ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd