ಮೊದಲು ನಮ್ಮ ದೇಶದವರಿಗೆ ಲಸಿಕೆ , ನಂತರ ವಿದೇಶಗಳಿಗೆ ರಫ್ತು : ದೆಹಲಿ ಹೈಕೋರ್ಟ್..!
ನವದೆಹಲಿ: ಭಾರತದ ಮೇಡ್ ಇನ್ ಇಂಡಿಯಾ ಕೋವಿಡ್ ಲಸಿಕೆಗಳನ್ನ ಹೆಚ್ಚು ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗ್ತಿದೆ. ಆದ್ರೆ ಇದೀಗ ಈ ವಿಚಾರವಾಗೊ ಕೇಂದ್ರ ಸರ್ಕಾರಕ್ಕೆ ಖಡಕ್ ಸಂದೇಶ ನೀಡಿರುವ ದೆಹಲಿ ಹೈ ಕೋರ್ಟ್ ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಮೊದಲು ನಮ್ಮ ದೇಶದ ನಾಗರೀಕರಿಗೆ ಕೊರೊನಾ ಲಸಿಕೆ ನೀಡಿ ಎಂದು ನಿರ್ದೇಶಿಸಿದೆ.
2011ರ ಜಪಾನ್ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಅವಶೇಷ ದಶಕದ ಬಳಿಕ ಪತ್ತೆ..!
ಈ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ನಾವು ನಮ್ಮ ಲಸಿಕೆ ವಿತರಣೆಯ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳುತ್ತಿಲ್ಲ. ನಮ್ಮ ಜನರಿಗೆ ಲಸಿಕೆ ನೀಡುವ ಬದಲು ನಾವು ವಿದೇಶಗಳಿಗೆ ದಾನ ಮಾಡುತ್ತಿದ್ದೇವೆ. ಇಲ್ಲ ಮಾರಾಟ ಮಾಡುತ್ತಿದ್ದೇವೆ ಎಂದು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ನಿರ್ದಿಷ್ಟ ವಯೋಮಿತಿ ಮತ್ತು ಕೆಲವು ನಿಬಂಧನೆಗಳಿಗೆ ಒಳಪಟ್ಟವರಿಗೆ ಮಾತ್ರವೇ ಲಸಿಕೆ ವಿತರಣೆಯ ಹಿಂದಿನ ಉದ್ದೇಶ ಏನು ಎಂದು ಕೇಂದ್ರಕ್ಕೆ ಪ್ರಶ್ನಿಸಿದೆ.
ಅಷ್ಟೇ ಅಲ್ಲದೇ ನಿಮ್ಮ ದೈನಂದಿನ ಅಥವ ವಾರ ಇಲ್ಲವೇ ಮಾಸಿಕ ಲಸಿಕಾ ಉತ್ಪಾದನಾ ಸಾಮರ್ಥ್ಯ ಎಷ್ಟು. ಈಗ ಉತ್ಪಾದಿಸಿರುವ ಪ್ರಮಾಣ ಅಥವಾ ಸಂಗ್ರಹದಲ್ಲಿರುವ ಲಸಿಕೆಯ ಪ್ರಮಾಣ ಎಷ್ಟು ಎಂದು ಪುಣೆಯ ಸೀರಂ ಇನ್ಸಿಟ್ಯೂಟ್ ಮತ್ತು ಹೈದರಬಾದ್’ನ ಭಾರತ್ ಬಯೋಟೆಕ್ ಸಂಸ್ಥೆಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.