ಬಿಗ್ ಬಾಸ್ ನಿಂದ ನೇರವಾಗಿ ನಾಮಿನೇಟ್ ಆದ್ರೂ ಸೇಫ್ ಆದ್ರೂ ನಿರ್ಮಲಾ…!
ಬಿಗ್ ಬಾಸ್ 8 ನೇ ಆವೃತ್ತಿ ಆರಂಭದ ಮೊದಲನೇ ವಾರದಲ್ಲೇ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನ ಕೊಟ್ಟು ಸ್ಪರ್ಧಿಗಳಿಗೆ ಟೆನ್ಷನ್ ಕೊಡ್ತಿದ್ರೆ, ಹೊರಗಡೆ ಪ್ರೇಕ್ಷಕರ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡ್ತಿದ್ದಾರೆ. ಮೊದಲನೇ ದಿನವೇ 5 ಮಂದಿ ಎಲಿಮಿನೇಷನ್ ರೌಮಡ್ ಗೆ ನಾಮಿನೇಟ್ ಆದ್ರೂ 2ನೇ ದಿನಕ್ಕೆ ಇಬ್ಬರು ಸೇಫ್ ಝೋನ್ ಗೆ ಹೋದ್ರು, ಸೇಫ್ ಆಗಿದ್ದ ಇಬ್ಬರು ಡೇಂಜರ್ ಜೋನ್ ಗೆ ಶಿಫ್ಟ್ ಆಗಬೇಕಾಯಿತು.
ಮೊದಲಿಗೆ ಪ್ರಶಾಂತ್ ಸಂಬರಗಿ ವಿಶ್ವನಾಥ್ ಅವರನ್ನ ಸೋಲಿಸಿ ತಾವು ಸೇಫ್ ಆಗಿದ್ದರು. ಪಾವಗಡ ಮಂಜು ಕೂಡ ರಘು ಅವರನ್ನ ಡೇಂಜರ್ ಝೋನ್ ಗೆ ತಳ್ಳಿ ತಾವು ಬಚಾವಾಗಿದ್ದರು. ಬಳಿಕ ನಿಧಿ ಸುಬ್ಬಯ್ಯ ಕೂಡ ಶುಭಾ ಪುಂಜಾ ಅವರನ್ನ ಆಟದಲ್ಲಿ ಸೋಲಿಸಿ ತಮ್ಮ ಮೇಲಿದ್ದ ನಾಮಿನೇಷನ್ ತೂಗುಕತ್ತಿಯನ್ನ ಶುಭಾ ಪುಂಜಾಗೆ ಗೆ ವರ್ಗಾವಣೆ ಮಾಡಿದ್ದರು. ಮೊದಲನೇ ವಾರ ನಾಮಿನೇಟ್ ಆಗಿದ್ದ ಐವರ ಪೈಕಿ ಆಟದಲ್ಲಿ ಕಳಪೆ ಪ್ರದರ್ಶನ ತೋರಿದ ನಿರ್ಮಲಾರನ್ನ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದರು. ಆದ್ರೂ ನಿರ್ಮಲಾ ಈಗ ನಾಮಿನೇಷನ್ ತೂಗುಕತ್ತಿಯಿಂದ ಬಚಾವಾಗಿದ್ದಾರೆ.
ಬಿಗ್ ಬಾಸ್ 8 : 2ನೇ ವಾರವೂ ಮನೆಯ ಕ್ಯಾಪ್ಟನ್ ಆದ ಬ್ರೋ ಗೌಡ..!
ಹೌದು ಬಿಗ್ ಬಾಸ್ ನೀಡಿದ ಟ್ವಿಸ್ಟ್ ನಿಂದಾಗಿ ನಿರ್ಮಲಾ ನಾಮಿನೇಷನ್ ರೌಂಡ್ ನಿಂದ ಬಚಾವಾಗಿದ್ದಾರೆ. ಪ್ರಶಾಂತ್ ಸಂಬರ್ಗಿ, ನಿರ್ಮಲಾ ಅವರನ್ನು ಸೇಫ್ ಮಾಡಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರಿಗೆ ಬಿಗ್ ಬಾಸ್ ಎರಡು ಆಯ್ಕೆಗಳನ್ನು ನೀಡಿತ್ತು. ಒಂದು ಕಡೆ ಕಾಫಿ ಪುಡಿ ಪ್ಯಾಕ್ ಗಳು ಮತ್ತೊಂದು ಕಡೆ ನಿರ್ಮಲಾ ಅವರ ಲಗೇಜ್. ಎರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಬಿಗ್ ಬಾಸ್ ಕೇಳಿದಾಗ ಪ್ರಶಾಂತ್ ಸಂಬರ್ಗಿ, ನಿರ್ಮಲಾ ಅವರ ಲಗೇಜ್ ಅನ್ನು ಆಯ್ಕೆ ಮಾಡಿಕೊಂಡರು. ಈ ಮೂಲಕ ನಿರ್ಮಲಾ ಅವರನ್ನು ಸೇಫ್ ಮಾಡಿದ್ದಾರೆ. ಇದೀಗ ಮೊದಲ ವಾರ ಮನೆಯಿಂದ ಹೊರಹೋಗಲು 4 ಮಂದಿ ಎಲಿಮಿನೇಷನ್ ರೌಂಡ್ ಗೆ ಸೆಲೆಕ್ಟ್ ಆಗಿದ್ದಾರೆ. ರಘು ಗೌಡ, ಧನುಶ್ರೀ, ವಿಶ್ವ, ಶುಭ ಪೂಂಜಾ ಡೇಂಜರ್ ಝೋನ್ ನಲ್ಲಿದ್ದು, ಈ ನಾಲ್ವರಲ್ಲಿ ಯಾರು ಮೊದಲನೇ ವಾರವೇ ಬಿಗ್ ಬಾಸ್ ಗೆ ವಿದಾಯ ಹೇಳಲಿದ್ದಾರೆ ಎನ್ನುವುದು ನಾಳೆ ಗೊತ್ತಾಗಲಿದೆ.