ಬಿಗ್ ಬಾಸ್ 8 : 2ನೇ ವಾರವೂ ಮನೆಯ ಕ್ಯಾಪ್ಟನ್ ಆದ ಬ್ರೋ ಗೌಡ..!
ಬಿಗ್ ಬಾಸ್ ಸೀಸನ್ 8ರಲ್ಲಿ ಮೊದಲ ವಾರದ ಕ್ಯಾಪ್ಟನ್ ಆಗಿದ್ದ ಬ್ರೋ ಗೌಡ ಇದೀಗ 2ನೇ ವಾರಕ್ಕೂ ಕ್ಯಾಪ್ಟನ್ ಆಗಿ ಮುಂದುವರೆದಿದ್ದಾರೆ. ಶಮಂತ್ ಅವರನ್ನೇ ಕ್ಯಾಪ್ಟನ್ ಆಗಿ ಮುಂದುವರೆಸಲು ಮನೆಯ ಸ್ಪರ್ಧಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಕಳೆದ ವಾರ ನಾಮಿನೇಷನ್ ನಿಂದ ಸೇಫ್ ಆಗಿದ್ದ ಬ್ರೋ ಗೌಡ ಈ ವಾರವೂ ಬಚಾವಾಗಲಿದ್ದಾರೆ. ಶಮಂತ್ ಎರಡನೇ ವಾರವೂ ಮನೆಯ ಕ್ಯಾಪ್ಟನ್ ಆಗಿ ಮುಂದುವರಿಯಬೇಕಾ ಬೇಡವ ಎಂಬ ಬಿಗ್ ಬಾಸ್ ಪ್ರಶ್ನೆಗೆ ಉತ್ತರಿಸಿದ ಸ್ಪರ್ಧಿಗಳು ಹೆಚ್ಚು ಮತಗಳನ್ನ ಶಮಂತ್ ಗೆ ನೀಡಿದ್ದಾರೆ.
ಹೀಗಾಗಿ 2ನೇ ವಾರವೂ ಬ್ರೋ ಗೌಡ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ. ಅಷ್ಟೇ ಅಲ್ಲ. ಶಮಂತ್ 2ನೇ ವಾರವೂ ಕ್ಯಾಪ್ಟನ್ ಆಗಿ ಮುಂದುವರಿದರೇ ನಾಮಿನೇಷನ್‌ನಿಂದಲೂ ಸೇಫ್ ಆಗಲಿದ್ದಾರೆ ಎಂದು ಬಿಗ್ ಬಾಸ್ ತಿಳಿಸಿದರು. ಬಳಿಕ ಶಮಂತ್ ನಾಯಕನಾಗಿ ಮುಂದುವರೆಯಲು ಮನೆಯ 9 ಮಂದಿ ಮತ ಹಾಕಿದರು. ಗೀತಾ ಭಟ್, ಚಂದ್ರಕಲಾ ಮೋಹನ್, ನಿಧಿ ಸುಬ್ಬಯ್ಯ, ಮಂಜು ಪಾವಗಡ, ಶಂಕರ್ ಅಶ್ವಥ್, ನಿರ್ಮಲಾ ಚೆನ್ನಪ್ಪ, ಅರವಿಂದ್, ಧನುಶ್ರೀ, ವೈಷ್ಣವಿ ಗೌಡ ಶಮಂತ್ ಪರ ಹಾಕಿದ್ದರು.
ಹಿಂದಿಗೆ ‘MAY I COME IN’ ಅಂತಿದ್ದಾರೆ ರಾಖಿ ಭಾಯ್..!
ಆದ್ರೆ ರಾಜೀವ್, ದಿವ್ಯಾ ಸುರೇಶ್, ಶುಭ ಪೂಂಜಾ, ಪ್ರಶಾಂತ್ ಸಂಬರ್ಗಿ, ದಿವ್ಯ ಉರುಡಗ, ರಘು ಗೌಡ, ವಿಶ್ವನಾಥ್ ಶಮಂತ್ ವಿರುದ್ಧ ಮತ ಚಲಾಯಿಸಿದರು. ಸದ್ಯ ಹೆಚ್ಚು ಮತಗಳು ಶಮಂತ್ ಮತ್ತೆ ಕ್ಯಾಪ್ಟನ್ ಆಗಬೇಕೆಂಬುದನ್ನ ಸೂಚಿಸಿದೆ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ಗಳಿಗೇನು ಕಡಿಮೆಯಿಲ್ಲ. ಮಮುಂದಿನ ವಾರದೊಳಗೆಬಿಗ್ ಬಾಸ್ ಏನೆಲ್ಲಾ ಟ್ವಿಸ್ಟ್ ಗಳನ್ನ ಕೊಡ್ತಾರೆ. ಅನ್ನೋದರ ಮೇಲೆಯೇ ಎಲ್ಲವೂ ನಿರ್ಧಾರವಾಗುತ್ತೆ.








