‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..? 

1 min read

‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..?

ಕೆಜಿಎಫ್ 2…. ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾದುಕುಳಿತಿರುವ ಸಿನಿಮಾ. ಸ್ಯಾಂಡಲ್ ವುಡ್ ಹಾಗೂ ಭಾರತೀಯ ಸಿನಿಮಾರಂಗದ ಒನ್ ಆಫ್ ದ ಹೈ ವೋಲ್ಟೇಜ್ ಹೈಲೀ ಎಕ್ಸ್ ಪೆಕ್ಟೆಡ್, ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ. ಇನ್ ಫ್ಯಾಕ್ಟ್ ಕೆಜಿಎಫ್ ಹವಾ ಸಾಗರದಾಚೆಗೂ ಇದೆ. ರಾಖಿ ಭಾಯ್ ಅಬ್ಬರಕ್ಕೆ ವಿದೇಶಿಗರು ಮರುಳಾಗಿದ್ದಾರೆ.  ಎಸ್ ಸ್ಪೆಷಲಿ ಇತ್ತೀಚೆಗೆ ರಿಲೀಸ್ ಆದ ಕೆಜಿಎಫ್ 2 ಟೀಸರ್ ಬಗ್ಗೆ ಹೇಳೋದೇ ಬೇಡ. ಯಾಕಂದ್ರೆ ಯೂಟ್ಯೂಬ್ ನಲ್ಲಿ ದಾಖಲೆಗಳನ್ನ ಬ್ರೇಕ್ ಮಾಡಿ ವಿಶ್ವ ದಾಖಲೆ ಬರೆದ ಕೆಜಿಎಫ್ ಹಲವು ಸಿನಿಮಾಗಳ ರೆಕಾರ್ಡ್ ಗಳನ್ನ ಛಿದ್ರಗೊಳಿಸಿದೆ. ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿ  ಅಷ್ಟೇ ಅಲ್ಲ ಸೌತ್ ಸಿನಿಮಾ ಇಂಡಸ್ಟ್ರೀಯನ್ನ ಒಂದು ಎಕ್ಸ್ ಟ್ರೀಮ್ ಲೆವೆಲ್ ಗೆ ಕೊಂಡೊಯ್ದು ಬಡಾಯಿ ಕೊಚ್ಚಿಕೊಳ್ತಿದ್ದ ಬಾಲಿವುಡ್ ಮಂದಿಯ ಬಾಯಿಗೆ ಬೀಗ ಹಾಕಿದೆ. ಅಷ್ಟರ ಮಟ್ಟಿಗೆ ಕೆಜಿಎಫ್ ಖದರ್ ಕ್ರಿಯೇಟ್ ಮಾಡಿದೆ. ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರ ಆಕ್ಷನ್  ಕಟ್ ಹಾಗೂ ಯಶ್ ಡೆಡ್ಲಿ ಆಟಿಟ್ಯೂಡ್ ಒಂದು ಪರ್ಫೆಕ್ಟ್ ಕಾಂಬೋ. ಜೊತೆಗೆ ಯಶ್ ಮೇಲಿನ ಕ್ರೇಜ್ ಕೆಜಿಎಫ್ ಮೇಲಿನ ನಿರೀಕ್ಷೆ .. ದಿನೇ ದಿನೇ ಸಿನಿಮಾದ ರಿಲೀಸ್ ಗೆ ಫ್ಯಾನ್ಸ್ ಕಾತರತೆ ಹೆಚ್ಚಾಗ್ತಲೇ ಇದೆ. 

ಇದೆಲ್ಲಾ ಗೊತ್ತಿರುವ ವಿಚಾರವೇ. ಸಿನಿಮಾ   ಜುಲೈ 16ಕ್ಕೆ   ರಿಲೀಸ್ ಆಗುತ್ತೆ ಎನ್ನುವುದು ಗೊತ್ತಿದೆ. ಆದ್ರೆ ಹೊಸ ವಿಚಾರ ಏನು..? ಹೊಸ ಅಪ್ ಡೇಟ್ ಏನು..! ಸಿನಿಮಾದ ಅಪ್ ಡೇಟ್ಸ್ ಅನ್ನೋದಕ್ಕಿಂತ ಇದು ಕೆಜಿಎಫ್ ಲವರ್ಸ್ ಗೆ ಯಶ್ ಫ್ಯಾನ್ಸ್ ಗೆ ಬೇಸರವಾಗುವ ಸುದ್ದಿ ಅಂತಾನೆ ಹೇಳಬಹುದು. ಹೌದು… ಮೊದಲಿಗೆ ಕೆಜಿಎಫ್ ವಿಶ್ವಾದ್ಯಂತ ಸುಮಾರು 20,000 ಸಾವಿರ ಥಿಯೇಟರ್ ಗಳಲ್ಲಿ ಅಪ್ಪಳಿಸಲಿದೆ ಎನ್ನಲಾಗ್ತಿದೆ. ಇದು ಸಂತಸದ ವಿಚಾರವೇ. ಯಶ್ ಫ್ಯಾನ್ಸ್ ಸಂಭ್ರಮಿಸುವ ವಿಚಾರವೇ. ಆದ್ರೆ ಬೇಸರದ ವಿಚಾರ ಅಂದ್ರೆ ಈ 20,000 ಥಿಯೇಟರ್ ಗಳು 2ವಾರಕ್ಕೆ ಸೀಮಿತವಾಗಿರಲಿದೆ ಎನ್ನುವುದು. ಹೌದು ಅದು ಯಾಕೆ ಅಂತೀರಾ…

ಬಿಗ್‌ ಬಾಸ್ 8 : ಡೇಂಜರ್ ಝೋನ್ ನಲ್ಲಿ ಐವರು : ಮೊದಲ ವಾರ ಮನೆಯಿಂದ ಆಚೆ ಬರುವುದು ಯಾರು…?     

ಜುಲೈ 16 ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ಸಿನಿಮಾ ಹಾಲ್ ಗಳಲ್ಲಿ ಅಬ್ಬರಿಸಲಿದೆ. 2 ವಾರ ಏನೂ ಇದರ ಹವಾ 2 ತಿಂಗಳಾದ್ರೂ ಇದ್ದೇ ಇರುತ್ತೆ. ಆದ್ರೆ ಥಿಯೇಟರ್ ಗಳ ಸಂಖ್ಯೆ ಬರ ಬರತ್ತಾ ಕಮ್ಮಿಯಾಗುತ್ತೆ. 14 ದಿನಗಳ ಬಳಿಕ ಥಿಯೇಟರ್ ಗಳ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗುತ್ತೆ. ಕಾರಣ ಭಾರತದ ಮತ್ತೋರ್ವ ಬಿಗ್ ಸ್ಟಾರ್ ನನ್ ಅದರ್ ದ್ಯಾನ್ ಬಾಹುಬಲಿ ಪ್ರಭಾಸ್ ಅವರು  ತೂಫಾನ್ ( ಯಶ್ ) ಗೆ ಟಕ್ಕರ್ ಕೊಡೋಕೆ ಬರುತ್ತಿದ್ದಾರೆ. ಅಂದ್ರೆ ಭಾರತೀಯ ಸಿನಿಮಾರಂಗದ ಮತ್ತೊಂದು ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ರಾಧೆಶ್ಯಾಮ್ ತೆರೆಗಪ್ಪಳಿಸಲಿದೆ. ಅದು ಕೂಡ ಕೆಜಿಎಫ್ ರಿಲೀಸ್ ಆದ ಕೇವಲ 14 ದಿನಗಳಲ್ಲಿ. ಹೌದು. ಸೋ ಕೆಜೆಎಫ್ ಚಾಪ್ಟರ್ 2 ರಿಲೀಸ್ ಆದ ಕೇವಲ 2 ವಾರದ ಅಂತರದಲ್ಲಿ ರಾಧೆ ಶ್ಯಾಮ್ ತೆರೆಗಪ್ಪಳಿಸಲಿದೆ. ಇದು ಎಲ್ಲೋ ಒಂದ್ ಕಡೆ ಕೆಜಿಎಫ್ ಮೇಲೂ ಪರಿಣಾಮ ಬೀರೋದ್ರಲ್ಲಿ 100 % ನೋ ಡೌಟ್. ಇದ್ರಿಂದಾಗಿ ಯಶ್ ಫ್ಯಾನ್ಸ್ ಗೆ ಬೇಜಾರಾಗಬಹುದು. ರಾಧೆಶ್ಯಾಮ್ ಮಾಸ್ ಸಿನಿಮಾ ಅಲ್ಲ ಆದ್ರೆ ಪಕ್ಕಾ ಲವ್ ಸ್ಟೋರಿ. ಮಾಸ್ ಸಿನಿಮಾಗೆ ಇರೋ ಅಭಿಮಾನಿಗಳು ಲವ್ ಸ್ಟೋರಿಗೆ ಇರೋದಿಲ್ಲ ಅನ್ನ ಬಹುದು. ಆದ್ರೆ ರಿಲೀಸ್ ಆಗುತ್ತಿರುವ ಸಿನಿಮಾ ಪ್ರಬಾಸ್ ಅವರದ್ದು ಅನ್ನೋದನ್ನೂ ನಾವು ಇಲ್ಲಿ ಮರೆಯೋ ಹಾಗಿಲ್ಲ.

ಇತ್ತ ರಾಧೆ ಶ್ಯಾಮ್ ಅಬ್ಬರಕ್ಕೂ ಕೇವಲ 14 ದಿನಗಳಲ್ಲೇ ಬ್ರೇಕ್ ಬೀಳಲಿದೆ. ಹೌದು ರಾಧೆ ಶ್ಯಾಮ್ ರಿಲೀಸ್ ಆದ 14 ದಿನಗಳ ಬಳಿಕ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಮತ್ತೊಂದು ಬಿಗ್ ಬಿಜೆಟ್ ಸಿನಿಮಾ ಪುಷ್ಪ ಕೂಡ ತೆರೆಗಪ್ಪಳಿಸಲಿದೆ. ಆಗ ಪುಷ್ಪ ಅಬ್ಬರ ಕೂಡ ಜೋರಾಗಿರಲಿದೆ. ಈ ಎಲ್ಲಾ ಕಾರಣಗಳಿಂದ ಎಲ್ಲೋ ಒಂದ್ ಕಡೆ ಕೆಜಿಎಫ್ ರಾಖಿ ಬಾಯ್ ಫ್ಯಾನ್ಸ್ ಉಸಿರು ಬಿಗಿ ಹಿಡಿದು ಕಾಯುತ್ತಿರುವ ಚಾಪ್ಟರ್ 2  ಸಿನಿಮಾಗೆ  ಅನ್ಯಾಯವಾಗುತ್ತೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ನೀವೇಂತೀರಾ…

ಇಂದಿನಿಂದ ಅಧಿವೇಶನ : ಸಾವಿರಾರು ನೌಕರರಿಂದ ವಿಧಾನಸೌಧ ಮುತ್ತಿಗೆ

ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭ

ಪಾಕಿಸ್ತಾನದಲ್ಲಿ  ಭಾರತದ ಹತ್ತಿಗೆ ಬೇಡಿಕೆ !

ಆಂಗ್ಲೋ ಇಂಡಿಯಾ ನಾಲ್ಕನೇ ಟೆಸ್ಟ್ – ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಆಲೂಗಡ್ಡೆ ಸಮೋಸ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd