BIGG BOSS 8 : ನಾನು ಸೆಲೆಬ್ರಿಟಿ ಅಲ್ಲದೇ ಇರುವುದೇ ನನ್ನ ಸೋಲಿಗೆ ಕಾರಣ – ಧನುಶ್ರೀ..!

1 min read

BIGG BOSS 8 : ನಾನು ಸೆಲೆಬ್ರಿಟಿ ಅಲ್ಲದೇ ಇರುವುದೇ ನನ್ನ ಸೋಲಿಗೆ ಕಾರಣ – ಧನುಶ್ರೀ..!

ಬಿಗ್ ಬಾಸ್ 8 ಆವೃತ್ತಿಯಲ್ಲಿ ಮನೆಯಿಂದ ಮೊದಲ ವಾರವೇ ಹೊರಗಡೆ ಬಂದಿರುವ ಟಿಕ್ ಟಾಕ್ ಸ್ಟಾರ್ ಧನುಶ್ರೀ, ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವ, ತಮ್ಮ ಸೋಲಿಗೆ ಏನು ಕಾರಣವಿರಬಹುದು ಎಂಬುದನ್ನ ರಾಷ್ಟ್ರೀಯ ಸುದ್ದಿವಾಹಿನಿಯ ಜೊತೆಗೆ ನಡೆಸಿರುವ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಹೌದು ನಾನು ಇಷ್ಟು ಬೇಗ ಆಚೆ ಬರುತ್ತೇನೆ ಎಂದು ನಾನು ಊಹೆ ಮಾಡಿಕೊಂಡಿರಲಿಲ್ಲ. ನಾನು ಅಸಲಿ ಆಟ ಶುರು ಮಾಡುವ ಮುನ್ನವೇ ಮನೆಯಿಂದ ಆಚಚೆ ಬಂದೆ. ತುಂಬಾ ಬೇಜಾರಾಗಿದೆ. ಆದ್ರೆ ಬಿಗ್ ಬಾಸ್ ನ ಹೈಲೆಟ್ ಸುದೀಪ್ ಸರ್ ನ ನೇರವಾಗಿ ಭೇಟಿ ಮಾಡಿದ್ದು ಎಂದಿದ್ದಾರೆ.

ಸೋಲಿಗೆ ಕಾರಣ

ಸೋಲಿಗೆ ಕಾರಣ ಬಿಚ್ಚಿಟ್ಟಿರುವ ಹಾಸನದ ಹುಡುಗಿ ನಾನು ಸೆಲೆಬ್ರಿಟಿ ಅಲ್ಲದೇ ಇರುವುದೇ ಸೋಲಿಗೆ ಕಾರಣ, ನಮ್ಮ ತಂದೆ ತಾಯಿ ಲೈಮ್ ಲೈಟ್ ನಲ್ಲಿ ಇಲ್ಲದೇ ಇರುವುದೇ ಸೋಲಿಗೆ ಕಾರಣವಿರಬಹುದು. ಯಾಕಂದ್ರೆ ಮನೆಯಲ್ಲಿ ನಾನು ದೈಹಿಕವಾಗಿ ದುರ್ಬಲ ಸ್ಪರ್ಧಿಯಾಗಿರಲಿಲ್ಲ. ಏನೇ ಟಾಸ್ಕ್ ಗಳನ್ನ ಕೊಟ್ಟರೂ ನಾನೂ 100% Efforts ಹಾಕ್ತಿದ್ದೆ. ಅಲ್ದೇ ನೀವು ಒಬ್ಬರ ಶಕ್ತಿಯನ್ನ ಅಥವಾ ಅವರ ಎಬಿಲಿಟಿಯನ್ನ ಕೇವಲ ಒಂದೆರೆಡು ಟಾಸ್ಕ್ ಗಳಿಂದ ಜಡ್ಜ್ ಮಾಡಲು ಸಾಧ್ಯವಿಲ್ಲ. ಅಲ್ಲಿ ನನಗಿಂತಲೂ ತುಂಬ ದುರ್ಬಲರಾಗಿರುವವರು ಇದ್ದಾರೆ.Vaishnavi

ಇದೇ ವೇಳೆ ವೈಷ್ಣವಿಯತ್ತ ಬೊಟ್ಟು ತೋರಿಸಿ ಮಾತನಾಡಿರುವ ಧನುಶ್ರೀ, ವೈಷ್ಣವಿ ಬಲಶಾಲಿಯಂತೆ ಕಾಣ್ತಾರೆ ಆದ್ರೆ ಅಸಲಿಗೆ ಆಕೆ ತುಂಬಾನೆ ವೀಕ್. ಅಷ್ಟೇ ಯಾಕೆ ಚಂದ್ರಕಲಾ ಮೇಡಂ, ಶಂಕರ್ ಅಶ್ವಥ್ ಸರ್ ಕೂಡ ಸ್ಟ್ರಾಂಗ್ ಆಗಿ ಕಾಣ್ತಾರೆ ಅಷ್ಟೇ ಆದ್ರೆ ಅವರುಗಳು ತುಂಬಾನೆ ವೀಕ್. ಆದ್ರೆ ವೈಷ್ಣವಿ ಅವರು ಬಹಳ ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ. ಅವರ ಬ್ಯಾಕ್ ಗ್ರೌಂಡ್ ಉತ್ತಮವಾಗಿದೆ ಅಷ್ಟೇ. ಹೀಗಾಗಿ ನನ್ನನ್ನ ಸುಲಭವಾಗಿ ಡಾಮಿನೇಟ್ ಮಾಡಲಾಗಿದೆ, ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ.

ಇದೇ ವೇಳೆ ಮನೆಯಲ್ಲಿ ದೊಡ್ಡ ಸವಾಲಾಗಿದ್ದ ಏನು ಎಂಬ ಬಗ್ಗೆ ಮಾತನಾಡಿದ ಧನುಶ್ರೀ ಜನರನ್ನ ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಳಲಾದೆ. ಇದೇ ನನ್ನ ದೊಡ್ಡ ತಪ್ಪು. ಇನ್ನೂ ಮನೆಯಲ್ಲಿರುವವರಲ್ಲಿ ಕೆಲವರು ತುಂಬಾನೆ ಫೇಕ್ ಆಗಿದ್ದಾರೆ ಅಂತ ನನಗನ್ನಿಸುತ್ತೆ. ಅಲ್ದೇ ತುಂಬ ಒಳ್ಳೆಯ ಸ್ಪರ್ಧಿಗಳು ಸಹ ಮನೆಯೊಳಗಡೆ ಇದ್ದಾರೆ. ಆದ್ರೆ ಸೋಷಿಯಲ್ ಮೀಡಿಯಾಗಳಲ್ಲಿ ಜನ ಫೇಕ್ ಆಗಿರೋರನ್ನ ಹೊಗಳುತ್ತಾ , ಒಳ್ಳೆವರನ್ನ ಟ್ರೋಲ್ ಮಾಡುತ್ತಿದ್ದಾರೆ ಎಂದಿರುವ ಧನುಶ್ರೀ, ನೀವು ಜನರನ್ನ 1 ಗಂಟೆ ಅಥವ ಒಂದು ವಾರದಲ್ಲಿ ಅವರ ವ್ಯಕ್ತಿವವನ್ನ ಜಡ್ಜ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ : ಯಶ್ ಗರಂ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd