ಸಿನಿಮಾಗಳಲ್ಲಿ ಅವಕಾಶಗಳ ಕೊರತೆ : ಚಾಮಯ್ಯ ಮೇಷ್ಟ್ರು ಮಗ ಶಂಕರ್ ಅಶ್ವಥ್ ಬಿಗ್ ಬಾಸ್ -8 ಸ್ಪರ್ಧಿ..!
ರಾಮಾಚಾರಿ ಚಾಮಯ್ಯ ಮೇಷ್ಟ್ರು ನಿಮಗೆಲ್ಲಾ ನೆನಪಿದ್ದಾರೆ ಅಲ್ವಾ.. 370 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ದಿಗ್ಗಜ ನಟ ಕೆ ಎಸ್ ಅಶ್ವಥ್ ಚಾಮಯ್ಯ ಮೇಷ್ಟ್ರು ಪಾತ್ರಕ್ಕೆ ಫೇಮಸ್. ಇಂತಹ ಕೆ ಎಸ್ ಅಶ್ವಥ್ ಅವರ ಮಗ ನಟ ಶಂಕರ್ ಅಶ್ವಥ್ ಅವರು. ಇವರ ನಟನೆಯ ಇತ್ತೀಚೆಗಿನ ಸಿನಿಮಾ ಅಂದ್ರೆ ಅದು ಧ್ರುವ ಸರ್ಜಾ ಅಭಿನಯದ ಪೊಗರು. ಈ ಸಿನಿಮಾದಲ್ಲಿ ನಾಯಕಿ ರಶ್ಮಿಕಾ ಳ ತಂದೆಯ ಪಾತ್ರದಲ್ಲಿ ಅಶ್ವಥ್ ಅವರು ಕಾಣಿಸಿಕೊಂಡಿದ್ದಾರೆ.
‘ಮೊಗ್ಗಿನ ಮನಸ್ಸಿ’ನ ಹುಡುಗಿ ಶುಭಾ ಬಿಗ್ ಬಾಸ್ ನಲ್ಲಿ ಕಮಾಲ್ ಮಾಡ್ತಾರಾ..!
ಇವರು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ 3ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಅದ್ಧೂರಿಯಾಗಿ ಎಂಟ್ರಿಕೊಟ್ಟಿದ್ದರು. ಈ ಬಾರಿಯ ಸೀಸನ್ ನಲ್ಲಿ ಎಲ್ಲರಿಗಿಂತಲೂ ಹಿರಿಯರೂ ಹೌದು. ಅಶ್ವಥ್ ಅವರು ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಕ್ಯಾಬ್ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಹೌದು ಬಣ್ಣದ ಲೋಕದ ಕಷ್ಟಗಳು , ಅವಕಾಶಗಳ ಕೊರತೆ ಅರಿತಿದ್ದ ಅಶ್ವಥ್ ಅವರು ಅವಕಾಶಗಳಿಲ್ಲದಾಗ ಮನೆಯಲ್ಲಿಯೇ ಕೂರದೇ ಕ್ಯಾಬ್ ಓಡಿಸುತ್ತಾ ಜೀವನ ನಡೆಸುತ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ಧನುಶ್ರೀ… ಯಾರೀಕೆ , ಹಿನ್ನೆಲೆ ಏನು..!
ಈ ಹಿಂದೆ ಮೆಡಿಕಲ್ ವ್ಯಾಪಾರ ಶುರು ಮಾಡಿದ್ದ ಅಶ್ವಥ್ ಅವರು ಅಲ್ಲಿಯೂ ಸೋಲುಂಡಿದ್ದರು. ನಷ್ಟ ಅನುಭವಿಸಿದ್ದರು. ಆದ್ರು ಸುದೀಪ್, ದರ್ಶನ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ , ಈಗಿನ ಕೆಲ ನಟರ ಸಾಮಾಜಿಕ ಕಾರ್ಯಗಳು, ಅವರ ಮಾನವೀಯತೆಯ ಗುಣಗಾನ ಮಾಡುತ್ತಾ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ತಾರೆ ಅಶ್ವಥ್.








