ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ಧನುಶ್ರೀ… ಯಾರೀಕೆ , ಹಿನ್ನೆಲೆ ಏನು..!

1 min read

ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ಧನುಶ್ರೀ… ಯಾರೀಕೆ , ಹಿನ್ನೆಲೆ ಏನು..!

ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ ಮನೆಗೆ ಎಂಟ್ರಿಯಾದ ಮೊದಲ ಸ್ಪರ್ಧಿ ಟಿಕ್ ಟಾಕ ಸ್ಟಾರ್ ಧನುಶ್ರೀ. ಯಾರೀಕೆ… ಹಿನ್ನೆಲೆ ಏನು..?

ಧನುಶ್ರೀ… ದೊಡ್ಮನೆಗೆ ಮೊದಲ ಸ್ಪರ್ಧಿಯಾಗಿ ಪ್ರವೇಶ ಮಾಡಿದ ಧನುಶ್ರೀ ಯಾರಂತಾನೇ ಜನರಿಗೆ ಗೊತ್ತಿರಲಿಲ್ಲ. ಆದ್ರೆ ರಾತ್ರೋರಾತ್ರಿ ಟಿಕ್ ಟಾಕ್ ನ ಒಂದು ವಿಡಿಯೋ ಅವರನ್ನ ಫೇಮಸ್ ಮಾಡಿ ಟಿಕ್ ಟಾಕ್ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಇದೇ ಟಿಕ್ ಟಾಕ್ ಮೂಲಕ ಧನುಶ್ರೀ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈಕೆ ಥೇಟ್ ನಿತ್ಯಾ ಮೆನನ್ ಹಾಗೆಯೇ ನೋಡುವುದಕ್ಕೆ ಇರೋ ಕಾರಣಕ್ಕೆ ಜ್ಯೂನಿಯರ್ ನಿತ್ಯಾ ಮೆನನ್ ಎಂದೇ ಫೇಮಸ್ ಆಗಿದ್ದಾರೆ. ಹಾಸನದ ಈ ಹುಡುಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟ :  ರಿಷಬ್ ಶೆಟ್ಟಿಗೆ ಗಾಯ

ಈಕೆಗೆ ಇನ್ ಸ್ಟಾಗ್ರಾಮ್ ನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಚರ್ಮ, ಕೂದಲು, ಸೌಂದರ್ಯದ ಟಿಪ್ಸ್ಗಳನ್ನು ಅವರು ನೀಡುತ್ತಿರುತ್ತಾರೆ. ಸಾಲದಕ್ಕೆ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿರುತ್ತಾರೆ. ಅಲ್ದೇ ಈಕೆ ನೋಡಲು ಗೊಂಬೆಯಂತೆ ಕಾಣುತ್ತಾರೆ ಅನ್ನೋದು ಅನೇಕರ ಅಭಿಪ್ರಾಯ. ಹೀಗಾಗಿ ಡಾಲ್ ಎಂದೂ ಅಫಿಮಾನಿಗಳು ಈಕೆಯನ್ನ ಕರೆಯುತ್ತಾರೆ.

ಬಿಗ್ ಬಾಸ್ 8 : 100 ದಿನಗಳ ಆಟ ಇಂದಿನಿಂದ ಶುರು..! ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd