ಬಿಗ್ ಬಾಸ್ 8 : 100 ದಿನಗಳ ಆಟ ಇಂದಿನಿಂದ ಶುರು..! ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು..!

1 min read

ಬಿಗ್ ಬಾಸ್ 8 : 100 ದಿನಗಳ ಆಟ ಇಂದಿನಿಂದ ಶುರು..! ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು..!

ಯಾರಾಗಬಹುದು ಈ ಬಾರಿಯ ಬಿಗ್ ಬಾಸ್ ವಿನ್ನರ್ , ಜನರ ಮನಸ್ಸು ಗೆಲ್ಲೋರ್ಯಾರು..!

ಯಾರಿರೋದು ಇಷ್ಟವಾಯ್ತು..! ಯಾರಿರಬಾರದಿತ್ತು ಅಂತ ನಿಮ್ಮ ಅಭಿಪ್ರಾಯ..!

ಬೆಂಗಳೂರು: ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿಗೆ ಗ್ರ್ಯಾಂಡ್ ಓಪನಿಂಗ್ ಮೂಲಕ ತೆರೆಬಿದ್ದಿದೆ. ಸ್ಪರ್ಧಿಗಳನ್ನೂ ಅದ್ಧೂರಿಯಾಗಿ ವೆಲ್ ಕಮ್ ಮಾಡಿ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ ನಮ್ಮ ಕಿಚ್ಚ ಸುದೀಪ್. ಈ ಸೀಸನ್ ತುಂಬಾನೆ ಕುತೂಹಲಕಾರಿಯಾಗಿರುತ್ತೆ. ಯಾಕಂದ್ರೆ ಈ ಬಾರಿ ಟಿಕ್ ಟಾಕರ್ಸ್ , ಯೂಟ್ಯೂಬರ್ಸ್, ಪೊಲಿಟೀಷಿಯನ್ಸ್, ಸಿನಿಮಾ ಸ್ಟಾರ್ಸ್, ಕ್ರಿಕೆಟರ್, ಕಿರುತೆರೆ ಸ್ಟಾರ್ಸ್, ಮಾಡಲ್ಸ್ , ಸಿಂಗರ್ಸ್ ಎಲ್ಲಾ ಒಂಟಿ ಮನೆಗೆ ಸೇರಾಗಿದೆ. 100 ದಿನಗಳ ಕಾಲ ಸೆರೆಮನೆಯಲ್ಲಿ ಸ್ಪರ್ಧಿಗಳ ಸೆಣಸಾಟ ಶುರುವಾಗಿದೆ. ಪ್ರೇಕ್ಷಕರು ಈಗಿನಿಂದಲೇ ಯಾರಿಗೆ ಓಟ್ ಮಾಡ್ಬೇಕು ಯಾರು ತಮ್ಮ ನೆಚ್ಚಿನ ಸ್ಪರ್ಧಿ ಅನ್ನೋ ಲೆಕ್ಕಾಚಾರ ಶುರು ಮಾಡಿದ್ದಾರೆ. ಹಾಗಾದ್ರೆ ಯಾರಾಗ್ತಾರೆ ಈ ಬಾರಿಯ ಬಿಗ್ ಬಾಸ್ ವಿನ್ನರ್. 100  ದಿನಗಳ ವರೆಗೂ ಯಾರು ಮನೆಯಲ್ಲಿರಬಹುದು, ಯಾರು ಮೊದಲನೇ ವಾರಕ್ಕೆ ಮನೆಯಿಂದ ಗೆಟ್ ಔಟ್ ಆಗ್ತಾರೆ. ಈ ಎಲ್ಲಾ ಪ್ರಶ್ನೆಗಳಿಗೆ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಉತ್ತರ ಕೊಡ್ತಾ ಹೋಗ್ತಾರೆ.

ಹಾಗಾದ್ರೆ ನಿಮ್ಮ ಫೇವರೇಟ್ ಯಾರು, ನಿಮಗೆ ಇಷ್ಟವಾದ ಸ್ಪರ್ಧಿ ಯಾರು, ಯಾರಿರೋದು ಇಷ್ಟವಾಯ್ತು, ಯಾರು ಇರಬಾರದಿತ್ತು ಎನ್ನಿಸ್ತು. ಯಾರು ವಿನ್ನರ್ ಟ್ರೋಫಿಗೆ ಮುತ್ತಿಡ್ತಾರೆ ಯಾರು, ಹೆಚ್ಚು ದಿನಗಳ ಕಾಲ ಮನೆಯಲ್ಲಿ ಉಳಿಯಲ್ಲಾ ಎನ್ನಿಸುತ್ತೆ.. ನಿಮ್ಮ ಅಭಿಪ್ರಾಯವೇನು ಈ ಬಾರಿಯ ಬಿಗ್ ಬಾಸ್ ಬಗ್ಗೆ..!

ಅಂದ್ಹಾಗೆ ಮನೆಯಲ್ಲಿ 17 ಸ್ಪರ್ಧಿಗಳು ಎಂಟ್ರಿಯಾಗಾಗಿದೆ. ಇಂದಿನಿಂದ ಅಸಲಿ ಆಟವೂ ಶುರುವಾಗಿದೆ. ಅಂತಿಮವಾಗಿ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಟಿಕ್‍ಟಾಕ್ ಸ್ಟಾರ್ ಧನುಶ್ರೀ, ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಗಾಯಕ ವಿಶ್ವನಾಥ್ ಹಾವೇರಿ, ಬೈಕ್ ರೈಡರ್ ಅರವಿಂದ್, ಮೋಟಿವೇಷನಲ್ ಸ್ಪೀಚರ್ ಬ್ರೊ ಗೌಡ, ಹಾಸ್ಯ ಕಲಾವಿದ ಮಂಜುಪಾವಗಡ, ಪುಟ್ಟಗೌರಿ ಮದುವೆಯ ಅಜ್ಜಮ್ಮ ಚಂದ್ರಕಲಾ ಮೋಹನ್, ನಟಿ ದಿವ್ಯ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಯೂಟ್ಯೂಬರ್  ಕಾಮಿಡಿಯನ್ ರಘು, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ, ನಟಿ ದಿವ್ಯ ಉರುಡುಗ, CCL ಕ್ರಿಕೆಟಿಗ ರಾಜೀವ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿರ್ಮಿಲಾ ಚನ್ನಪ್ಪ ಎಂಟ್ರಿಕೊಟ್ಟಿದ್ದಾರೆ. ಇವರಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು.. ಇಂದಿನಿಂದ ಮತ್ತೆ ಮನೆಮಂದಿಯಲ್ಲಾ ಸಂಜೆ 9.30ಗೆ ಟಿವಿ ಮುಂದೆ ರಿಮೋಟ್ ಹಿಡಿದು ಕೂತು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯ್ತಾಯಿದ್ದಾರೆ.

ಭಾರತ ಸರ್ಕಾರ 1990 – 2021 ರ ನಡುವೆ ಕೆಲಸ ಮಾಡುವ ಸರ್ಕಾರಿ ನೌಕರರಿಗೆ 1 ಲಕ್ಷ 20 ಸಾವಿರ ರೂ ನೀಡಲಿದೆಯೇ?

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd