ಬಿಗ್ ಬಾಸ್ ನಲ್ಲಿ ಮೋಡಿ ಮಾಡ್ತಾರಾ ಅಗ್ನಿಸಾಕ್ಷಿಯ ಚೆಂದುಳ್ಳಿ ಚೆಲುವೆ..!
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ ಮನೆಗೆ ಎಂಟ್ರಿಯಾದ 5ನೇ ಸ್ಪರ್ಧಿ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಹಿನ್ನೆಲೆ ಏನು..? ಯಲ್ಲಿಯವರು..?
ವೈಷ್ಣವಿ ಗೌಡ ಎನ್ನುವುದಕ್ಕಿಂತ ಸನ್ನಿಧಿ ಅಂದ್ರೆ ಸಾಕಷ್ಟು ಜನರಿಗೆ ಗೊತ್ತಾಗಿಬಿಡುತ್ತೆ ಯಾರೀ ಚೆಲುವೆ ಅಂತ. ಯಾಕಂದ್ರೆ ಅಗ್ನಿಸಾಕ್ಷಿ ಧಾರವಾಹಿ ಮೂಲಕ ತಮ್ಮ ಅಭಿನಯದ ಮೂಲಕ ಕಿರುತೆರೆ ಪ್ರೇಕ್ಷಕರನ್ನ ರಂಜಿಸಿ ಮನೆಮಾತಾಗಿದ್ದಾರೆ ವೈಷ್ಣವಿ. ಇವರು ಕನ್ನಡ ಕಿರುತೆರೆ ಪ್ರಿಯರಿಗೆ ಅತಿ ಹೆಚ್ಚು ಚಿರಪರಿಚಿತರು. ಅಗ್ನಿಸಾಕ್ಷಿಗೂ ಮುನ್ನ ದೇವಿ ಸೇರಿ ಹಲವು ಧಾರವಾಹಿಗಳಲ್ಲಿ ನಟಿಸದ್ರೂ ಅಗ್ನಿಸಾಕ್ಷಿ ವೈಷ್ಣವಿಗೆ ತಕ್ಕ ನೇಮ್ ಫೇಮ್ ತಂದುಕೊಟ್ಟ ಧಾರಾವಾಹಿ ಎನ್ನಬಹುದು.ಗುಳಿ ಕೆನ್ನೆಯ ಚೆಲುವೆ ವೈಷ್ಣವಿ ತನ್ನ ಗಾಂಭೀರ್ಯತೆ ಜೊತೆಗೆ , ತನ್ನ ಸ್ಮೈಲ್ ನಿಂದಲೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಗಿರಗಿಟ್ಲೆ, ಡ್ರೆಸ್ ಕೋಡ್ ಸಿನಿಮಾಗಳಲ್ಲೂ ವೈಷ್ಣವಿ ನಟಿಸಿದ್ದಾರೆ.
#modi_rojgar_do | `ಪ್ರಧಾನ್ ಸೇವಕ್’ ವಿರುದ್ಧ ಡಿಜಿಟಲ್ ಸ್ಟ್ರೈಕ್
ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದು ರಿಯಾಲಿಟಿ ಶೋನಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಕಮಾಲಾ ಮಾಡ್ತಾರಾ, 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸ್ಥಾನ ಉಳಿಸಿಕೊಳ್ತಾರಾ ಎನ್ನೋದನ್ನ ಕಾದು ನೋಡ್ಬೇಕಿದೆ.