ಕನ್ನಡ ಬಿಗ್ ಬಾಸ್ ಸೀಸನ್ 8 : ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ..?
ಕನ್ನಡಿಗರು ಹೊಸ ವರ್ಷ ಯಾವಾಗ ಬರುತ್ತೆ ಅಂತ ಕಾದು ಕುಳಿತಿದ್ದಾರೆ. ನ್ಯೂ ಯಿಯರ್ ಅನ್ನೋ ಖುಷಿಗಿಂತ ಜನವರಿಯಿಂದ ಎಲ್ಲರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಲಿದೆ ಅನ್ನೋ ವಿಚಾರ ಜನರ ನಿದ್ದೆ ಗೆಡಿಸಿದೆ. ಮತ್ತೊಮ್ಮೆ ಯಾವಾಗ ಬಿಗ್ ಬಾಸ್ ಬರುತ್ತೆ ಅಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇತ್ತ ಜನವರಿ ಮೂರನೇ ವಾರ ಅಂದ್ರೆ ಸಂಕ್ರಾಂತಿ ಕಳೆದ ಬಳಿಕ ಶೋ ಸ್ಟಾರ್ಟ್ ಆಗಬಹುದು ಎನ್ನಲಾಗ್ತಿದೆ. ಇನ್ನೂ ಬಿಗ್ ಬಾಸ್ ನ ಸೆಂಟರ್ ಆಫ್ ದ ಅಟ್ರ್ಯಾಕ್ಷನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಿನಿಮಾದ ಜೊತೆಗೆ ಬಿಗ್ ಬಾಸ್ ತಯಾರಿಯಲ್ಲೂ ತೊಡಗಿರುವ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಹೀಗಾಗಿ ಕಿಚ್ಚನ ಅಭಿಮಾನಿಗಳು ಬಿಗ್ ಬಾಸ್ ಪ್ರಿಯರು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.
ಮತ್ತೊಂದೆಡೆ ಸೀಸನ್ 8ಕ್ಕೆ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರಬಹುದು ಎಂಬ ಲೆಕ್ಕಾಚಾರಗಳು ಪ್ರಾರಂಭವಾಗಿವೆ. ಮೂಲಗಳ ಪ್ರಕಾರ ಈ ಬಾರಿಯ ಬಿಗ್ ಬಾಸ್ ಸಿಕ್ಕಾಪಟ್ಟೆ ಡ್ರಾ,ಮಾಟಿಕ್ ಆಗಿ ಇರಲಿದೆ. ಯಾಕಂದ್ರೆ ವದಂತಿಗಳ ಲಿಸ್ಟ್ ನಲ್ಲಿರುವ ಸ್ಪರ್ಧಿಗಳು ನಿಜಜೀವನದಲ್ಲೂ ಡ್ರಮಾಟಿಕ್ ಆಗಿಯೇ , ಟ್ರೋಲ್ ಗಗಳಾಗಿಯೇ ಗುರುತಿಸಿಕೊಂಡಿರೋದು ಹೆಚ್ಚು. ಹೀಗಾಗಿ ವೀಕ್ಷಕರಿಗಂತೂ ಈ ಬಾರಿಯ ಬಿಗ್ ಬಾಸ್ ನಿಂದ ಭರಪೂರ ಮನರಂಜನೆ ಸಿಗೋದ್ರಲ್ಲಿ ನೋ ಡೌಟ್..
ಹಾಗಾದ್ರೆ ಯಾರೆಲ್ಲಾ ಬಿಗ್ ಬಾಸ್ ಬಾಸ್ ಮನೆಗೆ ಬರಬಹುದು…?
ಅಧಿಕೃತವಾಗಿ ಇನ್ನೂ ಯಾರ ಹೆಸರುಗಳು ಸಹ ಫೈನಲ್ ಆಗಿಲ್ಲ.. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡ್ತಿರುವ ಕೆಲವರ ಹೆಸರುಗಳಲ್ಲಿ ಮುಂಚೂಣಿಯಲ್ಲಿರೋದು ಮಹಾನ್ ವಿಜ್ಞಾನಿ… ಅಲ್ಲಾ ಹಾಗಂತ ಹೇಳಿಕೊಂಡು ಕಲರ್ ಕಲರ್ ಕಾಗೆ ಹಾರಿಸಿ ಜನರ ಕಣ್ಣಿಗೆ ಬೂದಿ ಎರಚಿದ್ದ ಡ್ರೋಣ್ ಪ್ರತಾಪ… ಎಸ್ ನನಗೆ ಬ್ರಿಟನ್ ಸರ್ಕಾರ ಪೌರತ್ವ ಕೊಡ್ತೇನೆ ಅಂದಿತ್ತು. ನನಗೆ ರಷ್ಯ ಪೌರತ್ವ ಕೊಡೊದಾಗಿ ಕರೆದಿತ್ತು ಅಂತೆಲ್ಲಾ ಬ್ಯುಲ್ಡ್ ಅಪ್ ಮೇಲೆ ಬ್ಯುಲ್ಡ್ ಅಪ್ ಕೊಟ್ಟು ಕೊನೆಗೆ ತನ್ನನ್ನ ಹಾಡಿ ಹೊಗಳಿದ್ದ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದ ಡ್ರೋಣ್.. ಆದ್ರೆ ಆತನ ಮೇಲಿದ್ದ ಆರೋಪಗಳು ಯಾವುದು ಸಾಬೀತಗದೇ ಹೋಯಿತು. ಇವೆಲ್ಲಾ ಕೇವಲ ಆರೋಪಗಳಾಗಿಯೇ ಉಳಿದಿದೆ. ಆದ್ರೂ ಕೂಡ ಡ್ರೋಣ್ ಪ್ರತಾಪ್ ಟ್ರೋಲಿಗರ ಪಾಲಿ ಫೇವರೇಟ್ ಟಾಪಿಕ್ ಆಗಿಯೇ ಉಳಿದುಕೊಂಡ್ರು. ಸದ್ಯ ಇದೀಗ ಅವರು ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡ್ತಿದ್ದಾರೆ ಎಂಬ ಗುಮಾನಿ ಎದ್ದಿದೆ. ಆದ್ರೆ ಇದು ಕೇವಲ ಊಹಾಪೋಹವಷ್ಟೇ. ಒಂದು ವೇಳೆ ಇವರು ಬಂದಿದ್ದು ನಿಜಾನೇ ಆದ್ರೆ ಈ ಸೀಸನ್ ನ ಬಿಗ್ ಬಾಸ್ ಮನೆಯಲ್ಲಿ ಡ್ರಾಮಾಗೆ ಕೊರೆತೆಯೇ ಇರೋದಿಲ್ಲ. 
ಮಚಾ… ನೀನ್ ಬದುಕ್ ಬೇಕಾ..? ಈ ಡೈಲಾಗ್ ಯಾರಿಗೆ ತಾನೆ ಗೊತ್ತಿಲ್ಲಾ. ಅದ್ರಲ್ಲೂ ಟಿಕ್ ಟಾಕ್ ಪ್ರಿಯರಿಗೆ, ಟ್ರೋಲ್ ಪೇಜ್ ಫಾಲೋವರ್ಸ್ ಗಂತೂ ಗೊತ್ತೇ ಗೊತ್ತಿರುತ್ತೆ. ಈ ಡೈಲಾಗ್ ಹೊಡೆಯುತ್ತಲೇ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಟಿಕ್ ಟಾಕ್ ಸ್ಟಾರ್ ಅಂದ್ರೆ ಅದು ಟಿಕ್ ಟಾಕರ್ ಬಿಂದು ಗೌಡ… ಅಲ್ಲ ಮೋಟಿವೇಷನಲ್ ಬಿಂದು ಗೌಡ.. ಮೋಟಿವೇಷನಲ್ ಡೈಲಾಗ್ ಗಳನ್ನ ಹೊಡೆಯುತ್ತಲೇ ಸಾಕಷ್ಟು ಫಾಲೋವರ್ಸ್ ಗಳನ್ನ ಸಂಪಾದಿಸಿದ್ದ ಬಿಂದು ಗೌಡ ಸಹ ಪಾಸಿಟಿವ್ ಆಗಿ ಹೆಸರು ಗಳಿಸಿರೋದಕ್ಕಿಂತ ನೆಗೆಟಿವ್ ಆಗಿ ಟ್ರೋಲ್ ಆಗಿರೋದೆ ಹೆಚ್ಚು.. ಇನ್ನೂ ಇವರ ಟಿಕ್ ಟಾಕ್ ವಿಡಿಯೋಸ್ ಗೆ ಎಷ್ಟು ಜನ ಫ್ಯಾನ್ಸ್ ಇದ್ದಾರೋ ಅಷ್ಟೇ ವಿರೋಧ ಮಾಡೋರು ಇದ್ದಾರೆ.. ಇದೀಗ ಇವರು ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ.
6 ವರ್ಷದ ಮಗನ ಆ್ಯಪ್ ಖರೀದಿ – ತಾಯಿಯ ಖಾತೆಯಿಂದ 11ಲಕ್ಷ ರೂಪಾಯಿ ಕಡಿತ – ಹಣ ಹಿಂತಿರುಗಿಸಲು ಆಪಲ್ ನಿರಾಕರಣೆ
ಇನ್ನೂ ಮತ್ತೊಬ್ಬ ಟಿಕ್ ಟಾಕರ್… ಲಕ್ಷಾಂತರಗಟ್ಟಲೆ ಫಾಲೋವರ್ಸ್ ನ ಸಂಪಾದಿಸಿದ್ದ ಟಿಕ್ ಟಾಕ್ ಸ್ಟಾರ್… ಜಾತಿ ವಿಚಾರವಾಗಿ, ಕನ್ನಡದ ವಿಚಾರವಾಗಿ ಹೀಗೆ ಮಾತನಾಡಬಾರದನ್ನೇ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸೋನು ಗೌಡ… ಎಸ್ ಹುಚ್ಚುಚ್ಚಾಗಿ ಎಕ್ಸ್ ಪ್ರೆಶನ್ ಕೊಡುತ್ತಲೇ ಫ್ಯಾನ್ಸ್ ಗಳನ್ನ ಸಂಪಾದಿಸಿದ್ದ ಸೋನು ಗೌಡ ಕೇವಲ ನೆಗೆಟಿವ್ ಆಗೇ ಫೇಮಸ್ ಆಗಿದ್ದು ಹೆಚ್ಚು. ಅತಿ ಹೆಚ್ಚು ಟ್ರೋಲ್ ಗಳಿಗೆ ಗುರಿಯಾದ ಟಿಕ್ ಟಾಕರ್ ಕೂಡ ಹೌದು. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ತೆಗಳಿ, ತೆಲುಗು ಇಂಡಸ್ಟ್ರಿ ಹೊಗಳಿ ಟ್ರೋಲ್ ಆಗಿದ್ದು ಒಂದೆಡೆ. ಫ್ರೆಂಡ್ ಶಿಪ್ ಗಲಾಟೆಯನ್ನ ಬೀದಿ ರಂಪಾಟ ಮಾಡಿಕೊಂಡು , ಜಾತಿ ವಿಚಾರವಾಗಿ ಕೀಳಾಗಿ ಮಾತಾಡಿ ಟ್ರೋಲ್ ಆಗಿದ್ದು ಮತ್ತೊಂದೆಡೆ. ಇನ್ನೂ ಲೈವ್ ನಲ್ಲಿರೋವಾಗಲೇ ಕೆಟ್ಟ ಪದ ಬಳಕೆ ಮಾಡಿ ಹೀಗೆ ಬರಿ ನೆಗೆಟಿವ್ ಇಮೇಜ್ ನಿಂದಲೇ ಖ್ಯಾತಿ ಗಳಿಸಿರುವ ಸೋನು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗ್ತಾಯಿದೆ.
ಕ್ರಿಸ್‌ಮಸ್ ಸಂತೋಷ ಹರಡಲು ಬಂದ ಸಾಂತಾ ಕ್ಲಾಸ್ ವೇಷಧಾರಿಯಿಂದ 75 ವೃದ್ಧರಿಗೆ ಸೋಂಕು
ಇನ್ನೂ ಕನ್ನಡ ಸುದ್ದಿ ಮಾಧ್ಯಮದ ಖ್ಯಾತ ನಿರೂಪಕಿ ಸಹ ಈ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿಯಾಗೋದು ಪಕ್ಕಾ ಎನ್ನಲಾಗ್ತಿದೆ. ಮತ್ತೊಂದೆಡೆ ಸರಿಗಮಪ ಖ್ಯಾತಿಯ ಹನುಮಂತ ಸಹ ಬಿಗ್ ಬಾಸ್ ಮನೆ ಸೇರಲಿದ್ದಾರೆ ಎನ್ನಲಾಗ್ತಿದೆ. ಹೀಗೆ ಇನ್ನೂ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಆದರೆ ಅಧಿಕೃತವಾಗಿ ಬಿಗ್ ಬಾಸ್ ಕಡೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಒಟ್ಟಾರೆ ಊಹಾಪೋಹಗಳ ಲಿಸ್ಟ್ ನಲ್ಲಿ ಇರುವ ಹೆಸರುಗಳನ್ನ ಕೇಳ್ತಿದ್ರೆ ಜನರಲ್ಲಿ ಈ ಬಿಗ್ ಬಾಸ್ ಸೀಸನ್ ಬಗ್ಗೆ ಮತ್ತಷ್ಟು ಕುತೂಹಲಗಳು ಹೆಚ್ಚಾಗ್ತಿವೆ. ಮೂಲಗಳ ಪ್ರಕಾರ ಜನವರಿ 3ನೇ ವಾರದಿಂದ ಬಿಗ್ ಬಾಸ್ ಸಿಸನ್ 8 ಕನ್ನಡ ಪ್ರಾರಂಭವಾಗಲಿದ್ದು, ಶೀಘ್ರವೇ ಸ್ಪರ್ಧಾರ್ಥಿಗಳು ಹೆಸರುಗಳು ರಿವೀಲ್ ಆಗಿಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








