ಬಿಗ್ ಬಾಸ್ 8 : ಬಿಗ್ ಬಾಸ್ ಮನೆ ಪ್ರವೇಶಿಸುತ್ತಿರುವ ಸ್ಪರ್ಧಿಗಳ ಸಂಪೂರ್ಣ ಪಟ್ಟಿ..!
ಬೆಂಗಳೂರು: ಖ್ಯಾತ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ನ ಗ್ಯಾಂಡ್ ಓಪನಿಂಗ್ ಶುರುವಾಗಿದೆ. ಈಗಾಗಲೇ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಟಿಕ್ ಟಾಕ್ ಸ್ಟಾರ್ ಧನುಶ್ರೀ ಸದ್ಯ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. 2ನೇ ಸ್ಪರ್ಧಿಯಾಗಿ ಸ್ಯಾಂಡಲ್ ವುಡ್ ನಟಿ ಶುಭಾ ಪುಂಜಾ ಎಂಟ್ರಿಯಾಗಿದ್ದಾರೆ. ಇದೀಗ 3ನೇ ಸ್ಪರ್ಧಿಯಾಗಿ ಕನ್ನಡದ ಖ್ಯಾತ ನಟ ಅಶ್ವತ್ಥ್ ಶಂಕರ್ ಅವರು ಮನೆಗೆ ಪಾದಾರ್ಪಣೆ ಮಾಡಿದ್ದಾರೆ. 4ನೇ ಸ್ಪರ್ಧಿಯಾಗಿ ಹಾಡು ಕರ್ನಾಟಕ ರಿಯಾಲಿಟಿ ಶೋ ನ ಸ್ಪರ್ಧಿ ವಿಶ್ವನಾಥ್ ಹಾವೇರಿ , 5ನೇ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಧಾರವಾಹಿಯ ವೈಷ್ಣವಿ , 6ನೇ ಸ್ಪರ್ಧಿಯಾಗಿ ಬೈಕ್ ರೇಸರ್ ಅರವಿಂದ್ ಎಂಟ್ರಿಕೊಟ್ಟಿದ್ದಾರೆ.
ಬಿಗ್ ಬಾಸ್ 8 : 3ನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ಅಶ್ವತ್ಥ್ ಶಂಕರ್..!
ಈ ಸಲ ದೊಡ್ಮನೆಗೆ 17 ಸ್ಪರ್ಧಿಗಳು ಪ್ರವೇಶ ಮಾಡಲಿದ್ದು, ಯಾರೆಲ್ಲ ಇರಲಿದ್ದಾರೆ ಎಂಬ ಕತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ. ಅಂದ್ಹಾಗೆ ಇನ್ಮುಂದೆ ಯಾರೆಲ್ಲಾ ಎಂಟ್ರಿ ಕೊಡಬಹುದು ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ. ಸದಾ ಕಾಂಟ್ರವರ್ಸಿಗಳಿಂದಲೇ ಸುದ್ದಿಯಲ್ಲಿರುವ ಪ್ರಶಾಂತ್ ಸಂಬರ್ಗಿ, ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಾರತಿ ಭಟ್, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಅಜ್ಜಮ್ಮ ಆಗಿ ಮಿಂಚಿದ್ದ ಚಂದ್ರಕಲಾ, ಸಿಸಿಎಲ್ ಕ್ರಿಕೆಟರ್ ರಾಜೀವ್, ಕಿರುತೆರೆ ನಟಿ ದಿವ್ಯಾ, ನಟಿ ನಿಧಿ ಸುಬ್ಬಯ್ಯ, ಟಿಕ್ ಟಾಕರ್ ರಘು ಗೌಡ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ದೀಪಿಕಾ, ಅಗ್ನಿಸಾಕ್ಷಿಯ ನಟ ಅರವಿಂದ್, ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಸೀಸನ್ 8 | ಆರನೇ ಸ್ಪರ್ಧಿ.. ಬೈಕ್ ರೇಸರ್ ಅರವಿಂದ್
ಮೊದಲಿಗೆ ಅಂದ್ರೆ ಶೋ ಆರಂಭವಾಗ್ತಿದ್ದಂತೆ ಪ್ರತಿ ಸಲದಂತೆ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ಮುಂದೆ ಮತ್ತೆ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಹೋಸ್ಟಿಂಗ್ , ಆಡಿಯನ್ಸ್ ಗಳ ಚಪ್ಪಾಳೆಗಳ ಸಪ್ಪಳ, ಬಿಗ್ ಸ್ಕ್ರೀನ್ ನಲ್ಲಿ ಸುದೀಪ್ ಜೊತೆ ಸ್ಪರ್ಧಿಗಳ ಇಂಟರ್ಯಾಕ್ಷನ್, ಕಾಮಿಡಿ, ಕಾಂಟ್ರವರ್ಸಿ , ಫೈಟ್ಸ್, ಎಂಟರ್ ಟೈನ್ ಮೆಂಟ್, ಗಲಾಟೆ, ಗದ್ದಲ ಇವೆಲ್ಲಾ ಸ್ಕ್ರೀನ್ ಮೇಲೆ ಪ್ರೇಕ್ಷಕರು ಕಣ್ತುಂಬಿಕೊಳ್ಳೋ ಟೈಮ್ ಶುರುವಾಗಿದೆ.








