ಬಿಗ್ ಬಾಸ್ 8 : 3ನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ಅಶ್ವತ್ಥ್ ಶಂಕರ್..!
ಬೆಂಗಳೂರು: ಖ್ಯಾತ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ನ ಗ್ಯಾಂಡ್ ಓಪನಿಂಗ್ ಶುರುವಾಗಿದೆ. ಈಗಾಗಲೇ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಟಿಕ್ ಟಾಕ್ ಸ್ಟಾರ್ ಧನುಶ್ರೀ ಸದ್ಯ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. 2ನೇ ಸ್ಪರ್ಧಿಯಾಗಿ ಸ್ಯಾಂಡಲ್ ವುಡ್ ನಟಿ ಶುಭಾ ಪುಂಜಾ ಎಂಟ್ರಿಯಾಗಿದ್ದಾರೆ. ಇದೀಗ 3ನೇ ಸ್ಪರ್ಧಿಯಾಗಿ ಕನ್ನಡದ ಖ್ಯಾತ ನಟ ಅಶ್ವತ್ಥ್ ಶಂಕರ್ ಅವರು ಮನೆಗೆ ಪಾದಾರ್ಪಣೆ ಮಾಡಿದ್ದಾರೆ. ಈ ಸಲ ದೊಡ್ಮನೆಗೆ 17 ಸ್ಪರ್ಧಿಗಳು ಪ್ರವೇಶ ಮಾಡಲಿದ್ದು, ಯಾರೆಲ್ಲ ಇರಲಿದ್ದಾರೆ ಎಂಬ ಕತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ. ಅದರಂತೆ ಈಗಾಗಲೇ ಮೂವರು ದೊಡ್ಮನೆ ಸೇರಾಗಿದೆ. ಉಳಿದ ಸ್ಪರ್ಧಿಗಳು ಯಾರು ಎಂಬುದು ಹಂತಹಂತವಾಗಿ ಗೊತ್ತಾಗಬೇಕಾಗಿದೆ.
ಬಿಗ್ ಬಾಸ್ 8 : ಮೊದಲ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ಟಿಕ್ ಟಾಕ್ ಸ್ಟಾರ್..!
ಮೊದಲಿಗೆ ಅಂದ್ರೆ ಶೋ ಆರಂಭವಾಗ್ತಿದ್ದಂತೆ ಪ್ರತಿ ಸಲದಂತೆ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆಯೊಳಗೆ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ಮನೆಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ ಸುದೀಪ್ ಮೊದಲ ಸ್ಪರ್ಧಿಯನ್ನು ಪರಿಚಯಿಸಿದ್ದಾರೆ. ಬಿಗ್ ಬಾಸ್ ಹಳೆ ಸ್ಪರ್ಧಿ ನಿವೇದಿತಾ ಮೊದಲ ಸ್ಪರ್ಧಿಯನ್ನು ಡಾನ್ಸ್ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ. ಮೊದಲ ಸ್ಪರ್ಧಿ ಟಿಕ್ ಕಾಟ್ ಸ್ಟಾರ್ ಧನುಶ್ರೀ. ಹೌದು ಮೊದಲ ಸ್ಪರ್ಧಿಯಾಗಿ ಧನುಶ್ರೀ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಮತ್ತೆ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಹೋಸ್ಟಿಂಗ್ , ಆಡಿಯನ್ಸ್ ಗಳ ಚಪ್ಪಾಳೆಗಳ ಸಪ್ಪಳ, ಬಿಗ್ ಸ್ಕ್ರೀನ್ ನಲ್ಲಿ ಸುದೀಪ್ ಜೊತೆ ಸ್ಪರ್ಧಿಗಳ ಇಂಟರ್ಯಾಕ್ಷನ್, ಕಾಮಿಡಿ, ಕಾಂಟ್ರವರ್ಸಿ , ಫೈಟ್ಸ್, ಎಂಟರ್ ಟೈನ್ ಮೆಂಟ್, ಗಲಾಟೆ, ಗದ್ದಲ ಇವೆಲ್ಲಾ ಸ್ಕ್ರೀನ್ ಮೇಲೆ ಪ್ರೇಕ್ಷಕರು ಕಣ್ತುಂಬಿಕೊಳ್ಳೋ ಟೈಮ್ ಶುರುವಾಗಿದೆ.