ಬಿಗ್ ಬಾಸ್ ಸೀಸನ್ 8 | 13ನೇ ಸ್ಪರ್ಧಿ…  ಹಾಸ್ಯ ಕಲಾವಿದ ರಘು..!

1 min read

ಬಿಗ್ ಬಾಸ್ ಸೀಸನ್ 8 | 13ನೇ ಸ್ಪರ್ಧಿ…  ಹಾಸ್ಯ ಕಲಾವಿದ ರಘು..!

ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮದ 13ನೇ ಸ್ಪರ್ಧಿಯಾಗಿ ವೈನ್‌ ಸ್ಟೋರಿ ಖ್ಯಾತಿಯ ಹಾಸ್ಯ ಕಲಾವಿದ ರಘು ಅವರು  ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಕಿರುತೆರೆಯ ಬ್ಲಾಕ್ ಬಸ್ಟರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಇಂದಿನಿಂದ ಆರಂಭವಾಗಿದೆ. ಈಗಾಗಲೇ 12 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದು, ಹಾಸ್ಯ ಕಲಾವಿದ ರಘು 13ನೇ ಸ್ಪರ್ಧಿಯಾಗಿ ಬಿಗ್ ಹೌಸ್ ಗೆ ಕಾಲಿಟ್ಟಿದ್ದಾರೆ.

ಸದ್ಯ ದೊಡ್ಮನೆಗೆ ಎಂಟ್ರಿ ಕೊಟ್ಟವರಿಗೆ ಒಂದು ಟಾಸ್ಕ್ ನೀಡಲಾಗಿದ್ದು, ವಿಶೇಷ ಬಾಲ್ ಗಳನ್ನು ಹುಡುಕುತ್ತಿದ್ದಾರೆ.

ಇನ್ನು ಬಿಗ್ ಬಾಸ್ ನ ಮೊದಲ ಸ್ಪರ್ಧಿಯಾಗಿ ಧನುಶ್ರೀ ಹಾಗು ಎರಡನೇ ಸ್ಪರ್ಧಿಯಾಗಿ ಶುಭಪೂಂಜಾ, ಮೂರನೇ ಸ್ಪರ್ಧಿಯಾಗಿ ಹಿರಿಯ ನಟ ಅಶ್ವತ್, ನಾಲ್ಕನೇ ಸ್ಫರ್ಧಿಯಾಗಿ ಯುವ ಗಾಯಕ ವಿಶ್ವ, ಐದನೇ ಸ್ಪರ್ಧಿಯಾಗಿ ಕಿರುತೆರೆ ನಟಿ ವೈಷ್ಣವಿ, ಆರನೇ ಸ್ಪರ್ಧಿಯಾಗಿ ಬೈಕ್ ರೇಸರ್ ಅರವಿಂದ್ 7ನೇ ಸ್ಪರ್ಧಿಯಾಗಿ ನಿಧಿ ಸುಬ್ಬಯ್ಯ, 8ನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾ ಸ್ಟಾರ್ ಬ್ರೋ ಗೌಡ, 9ನೇ ಸ್ಪರ್ಧಿಯಾಗಿ ಬ್ರಹ್ಮಗಂಟು ಗೀತಾ ಭಾರತಿ,  ಇದೀಗ ಹತ್ತನೇ ಸ್ಪರ್ಧಿಯಾಗಿ ಪಾವಗಡ ಮಂಜು, 11 ನೇ ಸ್ಪರ್ಧಿಯಾಗಿ ದಿವ್ಯಾ ರಾವ್, 12ನೇ ಸ್ಪರ್ಧಿಯಾಗಿ ಚಂದ್ರಕಲಾ,  13ನೇ ಸ್ಪರ್ಧಿಯಾಗಿ ಹಾಸ್ಯ ಕಲಾವಿದ ರಘು ಅವರು ಮನೆಯೊಳಗೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್ ಸೀಸನ್ 8 | 11ನೇ ಸ್ಪರ್ಧಿ…  ದಿವ್ಯಾ ರಾವ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd