Biggboss kannadda – ಹೊಸ ಬಿಗ್ ಬಾಸ್ ನಲ್ಲಿ ಹೊಸ ಲವ್ ಸ್ಟೋರಿ…
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ನ ಮೊದಲ ಅವತರಣಿಕೆ ಸಾಕಷ್ಟು ವಿಶೇಷ ಮತ್ತು ಹೊಸತನದೊಂದಿಗೆ ಪ್ರಸಾರವಾಗ್ತಿದೆ. 16 ಕಂಟೆಸ್ಟೆಂಟ್ ಗಳು ಮನೆ ಪ್ರವೇಶ ಮಾಡಿದ್ದು, ಸಿನಿಮಾ ನಟರು , ಕಾಂಟ್ರವರ್ಸಿ ಪರ್ಸನ್ ಗಳು , ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಪತ್ರಕರ್ತರು , ಉದ್ಯಮಿಗಳು ಸೇರಿದಂತೆ ಭಿನ್ನ ಭಿನ್ನ ವ್ಯಕ್ತಿತ್ವದವರು ಭಾಗವಹಿಸಿದ್ದಾರೆ.
ಅಂದ್ಹಾಗೆ ಪ್ರತಿ ಬಾರಿ ಬಿಗ್ ಬಾಸ್ ನಲ್ಲಿ ಯಾವುದಾದರೂ ಒಂದು ಲವ್ ಗಾಸಿಪ್ ಹರಿದಾಡುತ್ತಲೇ ಇರುತ್ತೆ.. ಇದೇ ಬಿಗ್ ಬಾಸ್ ನಿಂದ ಅನೇಕರು ಪ್ರೀತಿಯ ಬಂಧನದಲ್ಲಿ ಒಂದಾಗಿ ಅಷ್ಟೇ ಬೇಗ ಮುಗಿದ್ದಿದ್ದೂ ಇದೆ, ಮದುವೆ ಹಂತಕ್ಕೆ ತಲುಪಿದ ಉದಾಹರಣೆಯೂ ಇದೆ..
ಇದೀಗ ಬಿಗ್ ಬಾಸ್ ಒಟಿಟಿಯಲ್ಲಿಯೂ ಒಂದು ಹೊಸ ಲವ್ ಕಹಾನಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣ್ತಿದೆ.. ರಾಕೇಶ್ ಹಾಗೂ ಸ್ಫೂರ್ತಿ ನಡುವೆ ಕೊಂಚ ಆತ್ಮೀಯತೆ ಬೆಳೆಯುತ್ತಿರುವಂತೆ ಕಾಣುತ್ತಿದೆ.. ರಾಕೇಶ್ ಸ್ಪೂರ್ತಿಗೆ ಬಹಳ ಪ್ರೀತಿಯಿಂದ ಚಪಾತಿ ತಿನ್ನಿಸಿದ್ಧಾರೆ..
ಈ ವೇಳೆ ಅಲ್ಲಿಗೆ ಆರ್ಯವರ್ಧನ್ ಗುರೂಜಿ ಬಂದಿದ್ದಾರೆ.. ಅಲ್ಲದೇ ಇಲ್ಲೇನ್ ನಡಿತಿದೆ ಎಂದು ಪ್ರಶ್ನೆ ಮಾಡಿದ್ದಾರೆ.. ಆಗ ಸ್ಪೂರ್ತಿ ನಮ್ಮಿಬ್ಬರ ಜೋಡಿ ಹೇಗಿದೆ ಎಂದಿದ್ದು ಅಚ್ಚರಿ ಮೂಡಿಸಿದೆ. ಈ ಹಿಂದೆ ರಾಕೇಶ್ ಸ್ಪೂರ್ತಿ ಪರಸ್ಪರ ಕೈ ಹಿಡಿದು ಭವಿಷ್ಯ ಹೇಳುವ ನಾಟಕ ಮಾಡಿದ್ದರು.. ಇದೀಗ ವರ ನಡುವಿನ ತ್ಮೀಯತೆ ಮತ್ತೊಂದು ಹಂತಕ್ಕೆ ತಲುಪುತ್ತಿದೆಯ ಎಂಬ ಅನುಮಾನ ಮೂಡುತ್ತಿದೆ..
ರಾಕೇಶ್ ಅಡಿಗ ಚಪಾತಿ ತಿನ್ನುತ್ತಾ ಕೂತಿದ್ದರು. ಈ ವೇಳೆ ಬಂದ ಸ್ಫೂರ್ತಿ ಅವರು, ಒಬ್ಬನೇ ತಿನ್ನುತ್ತಾ ಇದ್ದೀಯಾ. ನನಗೆ ಕೊಡಬೇಕು ಎಂದು ನಿನಗೆ ಅನಿಸಲಿಲ್ವಾ ಎಂದು ಪ್ರಶ್ನೆ ಮಾಡಿದರು. ಈ ವೇಳೆ ರಾಕೇಶ್ ಅವರು ಸ್ಫೂರ್ತಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದರು. ಇದೇ ಸಮಯಕ್ಕೆ ಆರ್ಯವರ್ಧನ್ ಗುರೂಜಿ ಬಂದಿದ್ದು ಇಲ್ಲೇನ್ ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದಾಗ ನಮ್ಮಿಬ್ಬರ ಜೋಡಿ ಹೇಗೆ ಕಾಣುತ್ತಿದೆ ಗುರೂಜಿ ಎಂದು ಮರು ಪ್ರಶ್ನೆ ಹಾಕಿದ್ದಾರೆ…
ಇದಕ್ಕೆ ಉತ್ತರಿಸಿರುವ ಆರ್ಯವರ್ಧನ್ ಗುರೂಜಿ ಈಗಲೇ ಹೇಳೋಕೆ ಆಗಲ್ಲ. ಇದು ನಿಮ್ಮ ಮೊದಲನೇ ಲವ್ವಾ ಎಂದು ಪ್ರಶ್ನೆ ಮಾಡಿದ್ದಾರೆ.. ಅದಕ್ಕೆ ಉತ್ತರ ನೀಡಿರೋ ಸ್ಪೂರ್ತಿ ಹೌದು ಎಂದಿದ್ದರು.. ತಕ್ಷಣವೇ ಲವ್ ಏನೂ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.








