ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಪೊಲೀಸ್ ದಾಳಿ
ಬೆಂಗಳೂರು : ಡ್ರಗ್ಸ್ ಡೀಲ್ ಪ್ರಕರಣ ಸಂಬಂಧ ಇಂದು ಬೆಳ್ಳಂ ಬೆಳಿಗ್ಗೆ ಬಿಗ್ ಬಾಸ್ ಖ್ಯಾತಿ ಮಸ್ತಾನ ಚಂದ್ರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಡ್ರಗ್ ಡೀಲಿಂಗ್ ಪ್ರಕರಣದ ಸಂಬಂಧ ನಗರದ ಗೋವಿಂದಪುರ ಪೊಲೀಸರು ಸಂಜಯ್ ನಗರದಲ್ಲಿರುವ ಮಸ್ತಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪದಡಿ ಮಸ್ತಾನ್ ಚಂದ್ರ ಮನೆ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಬಂಧಿಸಿ ವಿಚಾರಣೆ ನಡೆಸಿದ್ದರು.
ಈ ವೇಳೆ ಆತ ಮಸ್ತಾನ್ ಕೇಶವ್ ಹೆಸರು ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಪೊಲೀಸರ ದಾಳಿ ನಡೆಸಿದ್ದಾರೆ.
ಅಂದಹಾಗೆ ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರು ಉದ್ಯಮಿಗಳು ಅಪಾರ್ಟ್ ಮೆಂಟ್ ವೊಂದರಲ್ಲಿ ಸಿಕ್ಕಿಬಿದ್ದಿದ್ರು.
ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಮುಂದುವರಿದ ಭಾಗವಾಗಿ ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.