ಬಿಗ್ ಬಾಸ್ ಸೀಸನ್ 8 | ನಾಲ್ಕನೇ ಸ್ಪರ್ಧಿ ಇವರೇ
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಕಿರುತೆರೆಯ ಬ್ಲಾಕ್ ಬಸ್ಟರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಇಂದಿನಿಂದ ಆರಂಭವಾಗಿದೆ.
ಈಗಾಗಲೇ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದು, ನಾಲ್ಕನೇ ಸ್ಪರ್ಧಿಯಾಗಿ ಯುವ ಗಾಯಕ ವಿಶ್ವ ಎಂಟ್ರಿ ಕೊಟ್ಟಿದ್ದಾರೆ.
ವಿಶ್ವ ಕನ್ನಡದ ಖಾಸಗಿ ಮಾಧ್ಯಮವೊಂದರಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸದ್ಯ ದೊಡ್ಮನೆಗೆ ಎಂಟ್ರಿ ಕೊಟ್ಟವರಿಗೆ ಒಂದು ಟಾಸ್ಕ್ ನೀಡಲಾಗಿದ್ದು, ವಿಶೇಷ ಬಾಲ್ ಗಳನ್ನು ಹುಡುಕುತ್ತಿದ್ದಾರೆ.
ಇನ್ನು ಬಿಗ್ ಬಾಸ್ ನ ಮೊದಲ ಸ್ಪರ್ಧಿಯಾಗಿ ಧನುಶ್ರೀ ಹಾಗು ಎರಡನೇ ಸ್ಪರ್ಧಿಯಾಗಿ ಶುಭಪೂಂಜಾ, ಮೂರನೇ ಸ್ಪರ್ಧಿಯಾಗಿ ಹಿರಿಯ ನಟ ಅಶ್ವತ್ ಅವರು ಮನೆಯೊಳಗೆ ಕಾಲಿಟ್ಟಿದ್ದಾರೆ.









