BIGGBOSS 8 – ಮಂಜು ಮುಖಕ್ಕೆ ಉಗಿದಿದ್ಯಾಕೆ ದಿವ್ಯಾ ಸುರೇಶ್..?
ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ , ಒಟ್ಟಾಗಿಯೇ ಇರುವ ಜೋಡಿ ಒಂದೊಳ್ಳೆ ಸ್ನೇಹಿತರು ಅಂದ್ರೆ ಅದು ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್.. ಮಧ್ಯಮಧ್ಯದಲ್ಲಿ ಇವರಿಬ್ಬರ ನಡುವೆ ಮನಸ್ಥಾಪಗಳು ಬಂದಿವೆ. ಆದ್ರೂ ಅವುಗಳನ್ನ ಸರಿ ಮಾಡಿಕೊಂಡು ಈ ಜೋಡಿ ಮತ್ತೆ ಅನ್ಯೋನ್ಯವಾಗಿಯೇ ಇದೆ. ಆದ್ರೆ ಆಗಾಗ ಕೆಲವರು ಇವರಿಬ್ಬರ ಬಾಂಧವ್ಯದ ನಡುವೆ ಹುಳಿ ಹಿಂಡುವ ಪ್ರಯತ್ನವೂ ಮಾಡಿ ಕೊಂಚ ಮಟ್ಟಿಗೆ ಸಕ್ಸಸ್ ಕೂಡ ಆಗಿದ್ದಾರೆ.
ಪ್ರಶಾಂತ್ ಸಂಬರ್ಗಿಯ ಮೈಂಡ್ ಗೇಮ್ ನಿಂದಾಗಿ ಈ ಜೋಡಿ ನಡುವೆ ಒಂದೆರೆಡು ಬಾರಿ ಬಿರುಕು ಉಂಟಾಗಿತ್ತು. ಕಿತ್ತಾಡಿಕೊಂಡು ಆಮೇಲೆ ಮತ್ತೆ ಒಂದಾಗಿದ್ದೂ ಉಮಟು.. ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿದ್ದ ಪ್ರಿಯಾಂಕಾ ತಿಮ್ಮೇಶ್ ಸಹ ಗೊತ್ತೋ ಗೊತ್ತಿಲ್ಲದೇ ಇವರಿಬ್ಬರ ಬಾಂಧವ್ಯದ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ರು. ಅದು ಹೇಗಂದ್ರೆ ದಿವ್ಯಾ ಸುರೇಶ್ ಹಾಗೂ ಮಂಜು ಸಂಬಂಧ ಅವರ ಕ್ಲೋಸ್ ನೆಸ್ ಬಗ್ಗೆ ಮಾತನಾಡಿ ದಿವ್ಯಾಗೆ ಬಕೆಟ್ ಕೊಟ್ಟು ದಿವ್ಯಾಗೆ ಸ್ವಲ್ಪ ಮಂಜು ಇಂದು ದೂರ ಇರಬೇಕೆನೋ ಇಲ್ಲ.. ಹೊರಗಡೆ ನೋಡೋರ ದೃಷ್ಟಿ ಬದಲಾಗಿಬಿಡುತ್ತೇನೋ ಅನ್ನೋ ಬಾವನೆ ಹುಟ್ಟುವಂತೆ ಮಾಡಿದ್ದರು.
ಈಗ ಮತ್ತೆ ಈ ಜೋಡಿಯ ನಡುವೆ ಬಿರುಕು ಮೂಡುತ್ತಿರುವಂತೆ ಕಾಣುತ್ತಿದೆ. ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಕೊನೆಯಲ್ಲಿ ಕೆಪಿ ಅರವಿಂದ್ ಹಾಗೂ ದಿವ್ಯಾ ಸುರೇಶ್ ಉಳಿದುಕೊಂಡಿದ್ದರು. ಆಗ ನೀರು ಕುಡಿಸು ಅಂತ ಅರವಿಂದ್ ಅವರು ಮಂಜು ಬಳಿ ಹೇಳಿದ್ದಾರೆ. ಆಗ ದಿವ್ಯಾಗೆ ಉಗಿದುಬಿಡು ಅಂತ ಹೇಳಿದ್ದರು.
ದಯವಿಟ್ಟು ಒಬ್ಬರು ಮಾತನಾಡಿಕೊಂಡು ಆಟ ನಿಲ್ಲಿಸಿಬಿಡಿ ಅಂತ ಮಂಜು ಹೇಳಿದ್ದರು. ನೀರು ಕುಡಿಸಲು ಮಂಜು ಬಂದಾಗ ದಿವ್ಯಾ ಸುರೇಶ್ ನೀರು ಕುಡಿಸಿದ ನಂತರದಲ್ಲಿ ಮಂಜು ಮುಖಕ್ಕೆ ಉಗಿದಿದ್ದಾರೆ. ಪಾಪ ಅಂತ ನೀರು ಕುಡಿಸಿದರೆ ಉಗಿದ್ರು ಅಂತ ಮಂಜು ಹೇಳಿದ್ದರು. ಈ ವೇಳೆ ದಿವ್ಯಾ ಉರುಡುಗ ಮಂಜು ನೀನು ಅವರಿಗೆ ತೊಂದರೆ ಮಾಡಬೇಡಾ ಬಾ ಎಂದು ಕರೆದಿದ್ದಾರೆ. ಆಗ ಮಂಜು ನನಗೆ ಇವರು ಮುಖಕ್ಕೆ ನೀರು ಉಗಿದದ್ದು ಗೊತ್ತಾಗಲಿಲ್ಲ ಅಲ್ಲವಾ ಎಂದು ಹೇಳಿದ್ದಾರೆ.
ಆದ್ರೆ ಇದನ್ನ ಮಂಜು ಹಾಗೂ ದಿವ್ಯಾ ತಮಾಷೆಯಾಗಿ ತೆಗೆದುಕೊಂಡಿದ್ದಾರೋ ಅಥವಾ ಗಂಭೀರವಾಗಿ ತೆಗೆದುಕೊಮಡಿದ್ದಾರೋ ಅನ್ನೋದು ಸ್ವಲ್ಪ ಗೊಂದಲವಾಗಿಯೇ ಇದೆ..
ಅಂತರಾಷ್ಟ್ರೀಯ ಬ್ರ್ಯಾಂಡ್ ಗೆ ಅಂಬಾಸಿಡರ್ ಆದ ‘ಕಿರಿಕ್ ರಾಣಿ’..!