BIGGBOSS 8 – ವೇಶ್ಯೆಯರ ಮನೆಯಲ್ಲಿ  ಹುಟ್ಟಿದ ಪ್ರೀತಿ ಭಯಾನಕ ಅಂತ್ಯ ಕಂಡ ಸತ್ಯ ಬಿಚ್ಚಿಟ್ಟ ಚಕ್ರವರ್ತಿ..!

1 min read

ವೇಶ್ಯೆಯರ ಮನೆಯಲ್ಲಿ  ಹುಟ್ಟಿದ ಪ್ರೀತಿ ಭಯಾನಕ ಅಂತ್ಯ ಕಂಡ ಸತ್ಯ ಬಿಚ್ಚಿಟ್ಟ ಚಕ್ರವರ್ತಿ..!

ಬಿಗ್ ಬಾಸ್ ಸೀಸನ್ 8 ರಲ್ಲಿ  ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಪಡೆದ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಸಿಕ್ಕಾಪಟ್ಟೆ ಲೈಮ್ ಲೈಟ್ ನಲ್ಲಿರುತ್ತಾರೆ. ಜಗಳ , ಗಲಾಟೆ , ನೇರ ನುಡಿ ಸ್ವಭಾವದಿಂದ  ಗುರುತಿಸಿಕೊಂಡಿದ್ದಾರೆ.

ಇದೀಗ ಚಕ್ರವರ್ತಿ ಮನೆ ಸದಸ್ಯರು ಹಾಗೂ ಪ್ರೇಕ್ಷಕರ ಮುಂದೆ ತಮ್ಮ ಜೀವನದ ಅತ್ಯಂತ ಭಯಾನಕ ಸತ್ಯ ಅಥವ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ.  ಹೌದು.. ಬಿಗ್ ಬಾಸ್ ಮನೆಯವರಿಗೆ ಕೊಟ್ಟಿದ್ದ ಟಾಸ್ಕ್ ನ ಅನ್ವಯ   ಸ್ಪರ್ಧಿಗಳು ತಮ್ಮ ಜೀವನದಲ್ಲಿ ಅನಿಭವಿಸಿದ ಕಹಿ ಘಟನೆಯನ್ನು ಹಂಚಿಕೊಳ್ಳಬೇಕಿತ್ತು.

ಟಾಸ್ಕ್ ನಲ್ಲಿ ಮಾತನಾಡಿದ ಚಕ್ರವರ್ತಿ  ತಾವು ಊಟ ಇಲ್ಲದೆ, ಹಸಿದು , ಕಷ್ಟ ಪಟ್ಟ , ಪ್ರೀತಿಯನ್ನ ಕಳೆದುಕೊಂಡ ನೋವನ್ನ ಬಿಚ್ಚಿಟ್ಟಿದ್ದಾರೆ. ನಾನು  ಚೆನ್ನೈ ರೈಲ್ವೆ ನಿಲ್ದಾಣದಲ್ಲಿದ್ದೆ. ಊಟ ಇಲ್ಲದೆ 3 ದಿನಗಳ ಕಾಲ ಹಸಿದುಕೊಂಡಿದ್ದೆ. ನಿಲ್ದಾಣದ ಕೆಳಗಡೆ ಇದ್ದ ಟೀ ಅಗಡಿ ಪಕ್ಕ ನಿರ್ಗತಿಕನಾಗಿ ಬೀಳಬೇಕಾದ ಪರಿಸ್ಥಿತಿ ಬಂದಿತ್ತು.

ಮನೆಯ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ನನಗೆ ಓರ್ವನ ಪರಿಚಯವಾಯಿತು. ಆತ ನನ್ನನ್ನು ವೇಶ್ಯೆಯರ ಮನೆಗೆ ಕೆಲಸಕ್ಕೆ ಬಿಟ್ಟ. ಅದು ನನ್ನ ಜೀವನದ ಅತ್ಯಂತ ಕ್ರೂರ ಸಂದರ್ಭ. ಆ ಮನೆಯಲ್ಲಿ 127 ಜನ ಇದ್ರು. ಅಲ್ಲಿ ಸುಮಾರು 14 ವರ್ಷದ ಹುಡುಗಿಯ ಪರಿಚಯವಾಯಿತು. ಆಕೆಯನ್ನ ಆಕೆಯ ಚಿಕ್ಕಪ್ಪ ಮಾರಿ ಹೋಗಿದ್ದ. ಅವಳ ನನ್ನ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು.

ಬಳಿಕ ಆಕೆ ನನ್ನನ್ನು ಇಲ್ಲಿಂದ  ಕರೆದುಕೊಂಡು ಹೋಗು ಎಂದಳು. ಬಳಿಕ  ನಾವಿಬ್ಬರು ಗಾರ್ಬೆಜ್ ವಾಹನದಲ್ಲಿ ತಪ್ಪಿಸಿಕೊಂಡು ಹೊರಟೆವು. ರೈಲ್ವೆ ನಿಲ್ದಾಣಕ್ಕೆ ಹೋದೆವು. ಆಗ ಹಣ ಕೂಡ ಇರಲಿಲ್ಲ. ಹೇಗೋ ಮಾಡಿ ಬೆಂಗಳೂರು ರೈಲು ಏರಿದೆವು. ಆದ್ರೆ ನಮ್ಮನ್ನ ಬಂಗಾರ ಪೇಟೆ ಬಳಿ ಅಡ್ಡಹಾಕಿ, ಇಬ್ಬರಿಗೂ ಚೆನ್ನಾಗಿ  ಹೊಡೆದರು. ಈ ಘಟನೆಯಲ್ಲಿ ಆಕೆ ಸತ್ತು ಹೋದಳು. ನಾನು ಬದುಕಿದೆ ಎಂದು ಚಕ್ರವರ್ತಿ ಭಾವುಕರಾಗಿದ್ದಾರೆ.

ಈ ವೇಳೆ ಪೊಲೀಸ್ ಒಬ್ಬರು ನನ್ನನ್ನು ಬದುಕಿಸಿದರು. ನಂತರ ನಾನು ನೇರವಾಗಿ ಹಿಮಾಲಯಕ್ಕೆ ಹೋದೆ. 2 ವರ್ಷ ಇದ್ದು, ಬೆಂಗಳೂರಿಗೆ ವಾಪಸ್ಸಾದೆ. ಬಳಿಕ ಪತ್ರಕರ್ತ, ಹೋರಾಟಗಾರನಾದೆ. ಇದೇ ವೇಳೆ ವೇಶ್ಯೆಯರಿಗೆ ಏನಾದರೂ ಮಾಡಬೇಕು ಅಂದುಕೊಂಡು ಸುಮಾರು 25 ಮಂದಿ ವೇಶ್ಯೆಯರನ್ನು ಸೇರಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕವಾಡಿಸಿದೆ ಎಂದು ತನ್ನ ಜೀವನದ ಕಹಿ ಘಟನೆಯನ್ನು ಚಕ್ರವರ್ತಿ ಹೇಳಿಕೊಂಡರು. ಇನ್ನೂ ಚಕ್ರವರ್ತಿಯ  ಮಾತು ಕೇಳಿ ಬಿಗ್ ಬಾಸ್ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಪ್ರೇಕ್ಷಕರು ಸಹ ಚಕ್ರವರ್ತಿಯ ಅನುಭವ ಕೇಳಿ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಆರಂಭಿಸಿದ್ದಾರೆ.

ಕೇಂದ್ರದ ವಿರುದ್ಧ ಮಾತನಾಡಿದ ಸಿದ್ಧಾರ್ಥ್‍ಗೆ ಜೀವ ಬೆದರಿಕೆ

ಕೊರೊನಾ ಸಂಕಷ್ಟ – ಬೆಂಗಳೂರಿಗರ ನೆರವಿಗೆ ಧಾವಿಸಿದ ಕನ್ನಡಿಗ ಸುನಿಲ್ ಶೆಟ್ಟಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd