biggboss 8 kannada
BIGGBOSS 8 : ದೊಡ್ಮನೆಯಲ್ಲಿ ಸೀರಿಯಸ್ ಲವ್ ಸ್ಟೋರಿ – ಚಂದ್ರಕಲಾ ಹೇಳಿದ್ದು ಯಾವ ಜೋಡಿ ಬಗ್ಗೆ..?
ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ , ಪ್ರೇಮ ಕಹಾನಿ ಅನ್ನೋ ಬಗ್ಗೆ ಮಾತನಾಡುದ್ರೆ ನಮ್ಮ ಮೈಂಡ್ ಗೆ ಬರೋದು ಲ್ಯಾ ಮಂಜು ದಿವ್ಯಾ ಸುರೇಶ್ , ಅರವಿಂದ್ ದಿವ್ಯಾ ಉರುಡುಗ. ಆದ್ರೆ ಇತ್ತೀಚೆಗೆ ಅದ್ರಲ್ಲೂ ಜೋಡಿ ಟಾಸ್ಕ್ ಆದ್ಮೇಲೆ ಸಿಕ್ಕಾಪಟ್ಟೆ ಲೈಮ್ ಲೈಟ್ ಬಂದಿರುವ ಜೋಡಿ ಟಾಕ್ ಆಫ್ ಹೌಸ್ ಆಗಿರುವ ಪ್ರಣಯ ಪಕ್ಷಿಗಳು ದಿವ್ಯಾ ಉರುಡುಗ ಅರವಿಂದ್. ಸದಾ ಜೊತೆಜೊತೆಯಾಗಿ ಕಾಣಿಸಿಕೊಳ್ತಿರುವ ಈ ಜೋಡಿ ಪಕ್ಕಾ ಲವ್ ನಲ್ಲಿ ಬಿದ್ದಿದೆ ಅಂತಲೇ ಎಲ್ಲರೂ ಮಾತನಾಡಿಕೊಳ್ತಿದ್ದಾರೆ.
ಈ ನಡುವೆ ಬಿಗ್ ಬಾಸ್ ಮನೆಯಿಂದ 3ನೇ ವಾರ ಹೊರ ನಡೆದಿರುವ ಚಂದ್ರಕಲಾ ಮೋಹನ್ ಅವರು ಈ ಕುರಿತಾಗಿ ಮಾತನಾಡಿದ್ದು, ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಹೌದು ಅರವಿಂದ್ ಹಾಗೂ ಉರುಡುಗ ಇಬ್ಬರು ಸೀರಿಯಸ್ ಆಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಿಸುತ್ತಿದೆ ಎಂದು ಚಂದ್ರಕಲಾ ಹೇಳಿಕೊಂಡಿದ್ದಾರೆ.
ನಾನು ಗಮನಿಸುರುವ ಪ್ರಕಾರ ಅವರಿಬ್ಬರು ಪಕ್ಕಾ ಲವ್ ಮಾಡ್ತಾಯಿದ್ದಾರೆ. ಅವರಿಬ್ಬರು ಒಬ್ಬರನ್ನ ಒಬ್ಬರು ತುಂಬಾನೆ ಕೇರ್ ಮಾಡ್ತಾರೆ. ಅವರಿಬ್ಬರ ಬಾಂಡಿಂಗ್ ತುಂಬಾನೆ ಬಲವಾಗಿದೆ ಎಂದಿದ್ದಾರೆ. ಅವರು ನಡೆದುಕೊಳ್ಳುವ ರೀತಿ, ಹೊಂದಾಣಿಕೆ, ಕೇರ್ ಮಾಡುವ ಪರಿ, ಅರ್ಥಮಾಡಿಕೊಂಡಿರುವುದನ್ನ ನೋಡಿದ್ರೆ ಪಕ್ಕಾ ಅವರಿಬ್ಬರು ಪ್ರೀತಿಸುತ್ತಿದ್ದಾರೆ ಅನ್ನಿಸುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲ ಇಬ್ಬರು ಸಹ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಹೋಲಿಸಿದ್ರೆ ತುಂಬಾನೆ ಪ್ರಾಮಾಣಿಕರು ಎನ್ನಿಸುತ್ತೆ ಎಂದು ಅಭಿಪ್ರಾಯವನ್ನ ಹೊರಹಾಕಿದ್ದಾರೆ.
KGF 2 ಆಯ್ತು… ಮುಂದೆ ಯಶ್ ಕಥೆ ಏನು..?
ನೆಹ್ವಾಲ್ ಅವರ ನೈಜ ಆಟದ ಚಿತ್ರಣ ‘ಸೈನಾ’ ಚಿತ್ರದಲ್ಲಿಲ್ಲ !
biggboss 8 kannada