KGF 2 ಆಯ್ತು… ಮುಂದೆ ಯಶ್ ಕಥೆ ಏನು..?
KGF 2 ಸಿನಿಮಾ ಇಷ್ಟು ದೊಡ್ಡ ಮಟ್ಟದ ಹೈಪ್ ಪಡೆದುಕೊಂಡಿರೋದಕ್ಕೆ ಕಾರಣ ಸಿನಿಮಾದ ಸ್ಟೋರಿ ಲೈನ್, ಅದ್ಧೂರಿ ಸೆಟ್, ಬಿಜಿಎಂ, ಡೈಲಾಗ್ಸ್, ಆಕ್ಷನ್ ಸೀನ್ಸ್, ಥ್ರಿಲ್ಲಿಂಗ್ ಎಲಿಮೆಂಟ್ಸ್. ಆದ್ರೆ ಇವೆಲ್ಲದಕ್ಕಿಂತ ಮಿಗಿಲಾಗಿ ಪ್ರಶಾಂತ್ ನೀಲ್ ಹಾಗೂ ಡೇರಿಂಗ್ ಆಕ್ಟರ್ ರಾಕಿಂಗ್ ಸ್ಟಾರ್ ಯಶ್ ರ ಕಾಂಬೋ… ಈ ಕಾಂಬಿನೇಶನ್ ನ ಕ್ರೇಜ್ ಸಿನಿಮಾದ ಮೇಲೆ ಮೇಜರ್ ಎಫೆಕ್ಟ್ ಬೀರಿದೆ. ಜೊತೆಗೆ ಕೆಜಿಎಫ್ 2 ಕ್ಲೈಮ್ಯಾಕ್ಸ್ ನಲ್ಲಿ ಗರುಡನ ಸಾವಿನ ಬಳಿಕ ಮುಂದೇನಾಗುತ್ತೆ.. ಎಲ್ಡೊರಾಡೋದ ಸಸ್ಪೆನ್ಸ್ ಬಗ್ಗೆ ಕ್ಯೂರಿಯಾಸಿಟಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅದ್ರಲ್ಲೂ ಇತ್ತೀಚೆಗೆ ರಿಲೀಸ್ ಆದ ಟೀಸರ್ ವಿಶ್ವಮಟ್ಟದಲ್ಲಿ ದಾಖಲೆಗಳ ಧೂಳಿಪಟ ಮಾಡಿದೆ. ಸಿನಿಮಾ ಜುಲೈ 16 ಕ್ಕೆ ರಿಲೀಸ್ ಆಗಿ ಕಲೆಕ್ಷನ್ ಸೇರಿ ಇನ್ನೂ ಹಲವು ವಿಚಾರಗಳಲ್ಲಿ ಬಾಹುಬಲಿ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ್ರೂ ಅಚ್ಚರಿಯಿಲ್ಲ.
ಇನ್ನೂ ಕನ್ನಡ ಅಷ್ಟೇ ಅಲ್ದೇ ತಮಿಳು, ಮಳಯಾಳಂ, ಹಿಂದಿ , ತೆಲುಗು ಬಾಷೆಗಳಲ್ಲೂ ಯಶ್ ಅವರು ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ಧಾರೆ. ಪರ ಭಾಷೆಗಳಲ್ಲಿ ಯಶ್ ಕ್ರೇಜ್ ನೋಡಿ ಇತ್ತೀಚೆಗೆ ಯಶ್ ರ 7 ವರ್ಷಗಳ ಹಿಂದಿನ ಹಳೆಯ ಸಿನಿಮಾ ಗಜಕೇಸರಿಯನ್ನ ತೆಲುಗಿನಲ್ಲೂ ರೀ ರಿಲೀಸ್ ಮಾಡಲಾಗಿತ್ತು. ಆದ್ರೆ ಪ್ರಸ್ತುತ ಎದ್ದಿರುವ ಪ್ರಶ್ನೆ ಎಂದ್ರೆ ಭಾರತೀಯ ಸಿನಿಮಾರಂಗದ ಬಿಗ್ ಸ್ಟಾರ್ ಆಗಿರುವ ಯಶ್ ಅಪ್ ಕಮಿಂಗ್ ಸಿನಿಮಾ ಯಾವುದು. ಯಾವ ಸಿನಿಮಾದಲ್ಲಿ ಯಾವ ಪ್ರೊಡಕ್ಷನ್ ಹೌಸ್ ನಲ್ಲಿ ಯಾವ ನಿರ್ದೇಶಕನ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಕಥೆ ಹೇಗಿರಲಿದೆ. ಈ ಎಲ್ಲಾ ಪ್ರಶ್ನೆಗಳು ಯಶ್ ಅಭಿಮಾನಿಗಳಲ್ಲಿ ಮೂಡಿದೆ. ಹೌದು ಯಶ್ ಹೊಂಬಾಳೆ ಫಿಲ್ಮ್ಸ್ಂ ಬಿಟ್ಟು ಬೇರೆ ಬ್ಯಾನರ್ ನಡಿ ಸಿನಿಮಾ ಮಾಡ್ತಾರಾ… ಅಥವಾ ಮುಂದಿನ ಸಿನಿಮಾ ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಅವರೊಂದಿಗೇನಾ ಹೀಗೆಲ್ಲಾ ಪ್ರಶ್ನೆಗಳು ಎದ್ದಿವೆ.
ಇನ್ನೂ ಮೂಲಗಳ ಪ್ರಕಾರ ನೋಡೋದಾದ್ರೆ ಯಶ್ ಅವರ ಜೊತೆಗೆ ತೆಲುಗು ,ತಮಿಳು ಭಾಷೆಗಳ ನಿರ್ಮಾಪಕರು ನಿರ್ದೇಶಕರು ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎಂದೂ ಕೂಡ ಹೇಳಲಾಗ್ತಿದೆ. ಬಟ್ ಯಶ್ ಯಾವ ಸಿನಿಮಾ ಮಾಡುತ್ತಾರೆ .. ಯಾಕಂದ್ರೆ ಕೆಜಿಎಫ್ ನ ರೇಂಜ್ ಗೆ ಯಶ್ ಸಿನಿಮಾ ಮಾಡಬೇಕಾಗುತ್ತೆ. ಯಾಕಂದ್ರೆ ಕೆಜಿಎಫ್ ನಿಂದ ಯಶ್ ಭಾರತದ ಒನ್ ಆಫ್ ದ ಬಿಗ್ ಸ್ಟಾರ್ ಎನಿಸಿಕೊಂಡಿದ್ದಾರೆ. ಮುಂದೆಯೂ ಅವರು ಅಂತಹದ್ದೇ ಸ್ಟೋರಿ ಲೈನ್, ಮಾಸ್, ಪ್ಯಾನ್ ಇಂಡಿಯಾ ಸ್ಟೋರಿ ಹಾಗೂ ಬಿಗ್ ಬಜೆಟ್ ಸಿನಿಮಾದಲ್ಲೇ ನಟಿಸಬೇಕು. ಕೆಜಿಎಫ್ ನಂತಹ ಸಿನಿಮಾ ಆದ್ಮೇಲೆ ಅದಕ್ಕಿಂತಲೂ ಎಕ್ಸ್ಟ್ರೀಮ್ ಆಗಿಯೇ ರಾಜಾಹುಲಿ ಕಾಣಿಸಿಕೊಳ್ಳಬೇಕು. ರಾಖಿ ಭಾಯ್ ಇಮೇಜ್ ಗೆ ಅವರ ಅಪ್ ಕಮಿಂಗ್ ಸಿನಿಮಾ ಸ್ಯೂಟ್ ಆಗ್ಬೇಕು ಅಂತ ಜನ ಎಕ್ಸ್ ಪೆಕ್ಟ್ ಮಾಡ್ತಾರೆ.ಇಲ್ಲ ಅಂದ್ರೆ ಪ್ರಭಾಸ್ ಅವರ ಸಾಹೋ ರೀತಿ ಆಗುತ್ತೆ.
ಬಾಹುಬಲಿ ಅಂತಹ ದೊಡ್ಡ ಸಿನಿಮಾ ಮೂಲಕ ಯಶ್ ಅವರ ರೇಂಜ್ ಬದಲಾಗಿದೆ. ಆದ್ರೆ ಅವರು ಅದಾದ ನಂತರ ಸಾಹೋ ಸಿನಿಮಾದಲ್ಲಿ ಕಾಣಿಸಿಕೊಂಡ್ರು. ಆದ್ರೆ ಬಹುತೇಕ ಆ ಸಿನಿಮಾ ಜನರಿಗೆ ಇಷ್ಟ ಆಗಲಿಲ್ಲ. ಪ್ರಭಾಸ್ ಮೇಲಿನ ನಿರೀಕ್ಷೆ ಮಟ್ಟವನ್ನ ಸಿನಿಮಾ , ಕಥೆ ರೀಚ್ ಆಗಿರಲಿಲ್ಲ ಅನ್ನೋ ಅಸಮಾಧಾನ ಜನರಲ್ಲಿ ಮೂಡಿತ್ತು. ಸೋ ಯಶ್ ಅವರ ಮುಂದಿನ ಸಿನಿಮಾಗಳಲ್ಲು ಇದೇ ರೀತಿಯಾದ ಎಫೆಕ್ಟ್ ಬೀಳಬಹುದು.
ಇನ್ನೂ ಹೊಂಬಾಳೆ ಫಿಲ್ಮ್ಸ್ ಅಥವ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಮಾಡೋ ವಿಚಾರವಾಗಿ ಬಂದ್ರೆ…. ಸದ್ಯಕ್ಕಂತೂ ಬಹುತೇಕ ಡೌಟೇ… ಕಾರಣ ಎಲ್ರಿಗೂ ಗೊತ್ತೇ ಇದೆ. ಪ್ರಶಾಂತ್ ನೀಲ್ ಸದ್ಯಕ್ಕೆ ಮತ್ತೊಬ್ಬ ಬಿಗ್ ಸ್ಟಾರ್ ಬಾಹುಬಲಿ ಜೊತೆ ಹೈ ಓಲ್ಟೇಜ್ ಪ್ಯಾನ್ ಇಂಡಿಯಾ ಸಿನಿಮಾವಾದ ಸಲಾರ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಹೊರತಾಗಿ ಅವರು ಅಲ್ಲು ಅರ್ಜುನ್ , ರಾಮ್ ಚರಣ್, ಜ್ಯೂನಿಯರ್ NTR ಜೊತೆ ಸಂಪರ್ಕದಲ್ಲಿದ್ದು, ಈ ಸ್ಟಾರ್ ಗಳ ಪೈಕಿ ಯಾರಿಒಂದಿಗಾದ್ರೂ ಸಿನಿಮಾ ಮಾಡೋದು 100ಕ್ಕೆ 100 % ಕನ್ ಫರ್ಮ್.. ಇನ್ನೂ ಹೊಂಬಾಳೆ ಫಿಲಮ್ಸ್ ವಿಚಾರಕ್ಕೆ ಬಂದ್ರೆ ಪ್ರಸ್ತುತ ಸಲಾರ್ ನ ನಿರ್ಮಾಣ ಮಾಡುತ್ತಿರುವ ಈ ಪ್ರೊಡಕ್ಷನ್ ಹೌಸ್ ಮತ್ತೆ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಜೊತೆಗೆ ಹೊಸ ಪ್ರಾಜೆಕ್ಸ್ ಗೆ ಕೈಹಾಕಿದೆ.
ಹೀಗಾಗಿ ಯಶ್ ಹೊಂಬಾಳೆ ಫಿಲಮ್ಸ್ ಬ್ಯಾನರ್ ನ ಅಡಿ , ಪ್ರಶಾಂತ್ ನೀಲ್ ಅವರ ಡೈರೆಕ್ಷನ್ ನಲ್ಲಿ ಸದ್ಯಕ್ಕಂತೂ ಸಿನಿಮಾ ಮಾಡೋದು ಡೌಟ್.. ಕೆಲ ಬಲ್ಲ ಮೂಲಗಳ ಪ್ರಕಾರ ಯಶ್ ಅವರು ಪರ ಬಾಷೆಗಳ ಸಿನಿಮಾ ಮೇಕರ್ಸ್ ನಿರ್ದೇಶಕರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇನ್ನೂ ಯಶ್ ಅವರು ಅರ್ಧಕ್ಕೆ ನಿಲ್ಲಿಸಿದ್ದ ಮೈ ನೇಮ್ ಈಸ್ ಕಿರಾತಕ ಕೈಗೆತ್ತುಕೊಳ್ಳು ಸಾಧ್ಯತೆಯೂ ಇದೆ. ಹೌದು ಯಶ್ ಜೊತೆಗೆಡ ಹಲವಾರು ಸಿನಿಮಾಗಳನ್ನ ಮಾಡಿರೋ ಜಯಣ್ಣ-ಬೋಗೇಂದ್ರ ಜೊತೆ ಸಿನಿಮಾ ಮಾಡಬಹುದು ಎಂದು ಚರ್ಚೆಯಾಗ್ತಿದೆ. ಈ ಹಿಂದೆಯೇ ಈ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿದೆ. ಈಗ ಮತ್ತೆ ಸಿನಿಮಾ ಮಾಡ್ತಾರೆ ಎನ್ನಲಾಗಿದೆ. ಆದ್ರೆ ಸ್ಟೋರಿ ಅದೇ ಇರುತ್ತಾ ಅಥವ ಪ್ರಸ್ತುತ ಯಶ್ ಗೆ ಇರುವ ಕ್ರೇಜ್ ಗೆ ತಕ್ಕಂತೆ ಸಿನಿಮಾ ಕಥೆ ರೆಡಿ ಮಾಡಲಾಗುತ್ತಾ ಈ ಕ್ಯೂರಿಯಾಸಿಟಿಯೂ ಇದೆ.
ತನ್ನದೇ ಹಳೆಯ ದಾಖಲೆ ಮುರಿದು ಹೊಸ ದಾಖಲೆ ಬರೆದ ಕಂಬಳದ ಉಸೇನ್ ಬೋಲ್ಟ್
ನೆಹ್ವಾಲ್ ಅವರ ನೈಜ ಆಟದ ಚಿತ್ರಣ ‘ಸೈನಾ’ ಚಿತ್ರದಲ್ಲಿಲ್ಲ !
ಮುಂಬೈ ರೆಸ್ಟೋರೆಂಟ್ ನಲ್ಲಿ ರಶ್ಮಿಕಾ – ವಿಜಯ್ ಡಿನ್ನರ್ ಪಾರ್ಟಿ..!