BIGGBOSS 8 : ‘ಶುಭಾ ಜೊತೆ ಮತ್ತೊಂದು ಮದ್ವೆ ಊಟ ಫಿಕ್ಸ್’..!
ಬಿಗ್ ಬಾಸ್ ಮನೆಯಲ್ಲಿ ಮಂಜು ದಿವ್ಯಾ ಸುರೇಶ್ ಹಾಗೂ ಶಮಂತ್ ನಡುವಿನ ಟ್ರಯಾಂಗಲ್ ಲವ್ ಸ್ಟೋರಿ ಚರ್ಚೆ ಬಳಿಕ ಇದೀಗ ಮತ್ತೊಂದು ಜೋಡಿಯ ನಡುವೆ ಲವ್ವಿ ಡವ್ವಿ ಶುರುವಾಗಿದೆ ಎಂದು ಮನೆ ಮಂದಿ ಮಾತನಾಡಿಕೊಳ್ತಿದ್ದಾರೆ.
ಅದ್ರಲ್ಲೂ ಬಿಗ್ ಬಾಸ್ ನೀಡಿದ್ದ ಜೋಡಿ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ ಅರವಿಂದ್ ಒಟ್ಟಿಗೆ ಆಡಿ ಗೆದ್ದ ಬಳಿಕ ಈ ಚರ್ಚೆ ಜೋರಾಗಿದೆ. ಈ ಕುರಿತು ಗೀತಾ ಹಾಗೂ ಪ್ರಶಾಂತ್ ಸಂಬರ್ಗಿ ಕೂಡ ಮಾತನಾಡಿಕೊಂಡಿದ್ದಾರೆ.
ಜೋಡಿ ಟಾಸ್ಕ್ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಲವ್ವಿ ಡವ್ವಿ ಶುರುವಾಗಿದೆ ಎಂದು ಚರ್ಚೆಗಳು ನಡೆಯುತ್ತಿವೆ.
ದಿವ್ಯ, ಅರವಿಂದ್ ಜೋಡಿ ಬಗ್ಗೆ ಪ್ರಶಾಂತ್ ಸಂಬರ್ಗಿ ಹಾಗೂ ಗೀತಾ ಮಾತನಾಡಿಕೊಂಡಿದ್ದಾರೆ. ಈ ಜೋಡಿ ಲವ್ ಮಾಡ್ತಿದ್ದಾರಾ ಎಂದು ನಾನು ದಿವ್ಯ ಬಳಿಯೇ ಹಲವು ಬಾರಿ ಪ್ರಶ್ನೆ ಮಾಡಿದ್ದೇನೆ. ಆದ್ರೆ ಜೋಡಿ ಟಾಸ್ಕ್ ಅಂತ ಒಟ್ಟಾಗಿ ಇದ್ದೇವೆ ಅಷ್ಟೇ ಎಂದು ದದಿವ್ಯಾ ಹೇಳಿಕೊಂಡಿದ್ದಾಗಿ ಗೀತಾ ಸಂಬರ್ಗಿ ಬಳಿ ಹೇಳಿದ್ದಾರೆ.
ಈ ವೇಳೆ ಅರವಿಂದ್ ಅವರು ದಿವ್ಯಾರನ್ನು ಲವ್ ಮಾಡುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಓಪನ್ ಆಗಿದ್ದಾರೆ ಎಂದು ಸಂಬರ್ಗಿ ಹೇಳಿದ್ದಾರೆ. ಸಂಬರ್ಗಿ ಮಾತಿಗೆ ದನಿಗೂಡಿಸಿದ ಗೀತಾ, ಶುಭಾ ಪೂಂಜಾ ಮದುವೆ ನಂತರದಲ್ಲಿ ಇನ್ನೊಂದು ಮದುವೆ ಊಟ ಸಿಗಬಹುದು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಜೋಡಿ ಟಾಸ್ಕ್ ಮುಗಿದು 2 ದಿನವಾದರೂ ಇವರಿಬ್ಬರು ಒಟ್ಟಾಗಿದ್ದಾರೆ ಅಂತ ಹೇಳಿಕೊಂಡು ಗೀತಾ, ಪ್ರಶಾಂತ್ ನಕ್ಕಿದ್ದಾರೆ.