BIGGBOSS 8 : ದಿವ್ಯಾ ಉರುಡುಗಾಗೆ ಬಿಗ್ ಬಾಸ್ ಕೊಟ್ಟ ಗಿಫ್ಟ್ ಎಲ್ರನ್ನೂ ಭಾವುಕರಾಗುವಂತೆ ಮಾಡಿತ್ತು..!
ಬಿಗ್ ಬಾಸ್ 8 ನೇ ಆವೃತ್ತಿಯ 4 ನೇ ವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಶನಿವಾರ ಮನೆ ಮಂದಿ ಜೊತೆಗೆ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚಿನ ಜೊತೆ ಸಂಚಿಕೆಯೂ ಮುಗಿಒದಿದ್ದು, ಈ ಸಂಚಿಕೆಯಲ್ಲಿ ಎಂದಿನಂತೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಕಾಲೆಳೆದರು, ಕಾಮಿಡಿ ಮಾಡಿ ಪ್ರೇಕ್ಷಕರು ಮನೆಯ ಸದಸ್ಯರನ್ನ ಸಿಕ್ಕಾಪಟ್ಟೆ ಎಂಟರ್ ಟೈನ್ ಮಾಡಿದ್ರು. ಬುದ್ಧಿವಾದ ಹೇಳಿದ್ರು.
ಈ ವೇಳೆ ದಿವ್ಯಾ ಉರುಡುಗಾಗೆ ಅವರ ತಾಯಿ ಫೋನ್ ಕಾಲ್ ವಿಶ್ ಮಾಡಿದ್ದಾರೆ. ಹೌದು ಮೊದಲಿಗೆ ಶಿಲೆಗಳು ಸಂಗೀತವ ಹಾಡಿದೆ ಎಂಬ ಹಾಡನ್ನ ಹಾಡಿದ ದಿವ್ಯಾ ತಾಯಿ ಹಾಯ್ ಪುಟ್ಟಿ ನಾವು ದಿನ ಟಿವಿಯಲ್ಲಿ ನಿನ್ನ ನೋಡಲು 9.30 ಯಾವಾಗ ಆಗುತ್ತೆ ಅಂತ ಕಾಯುತ್ತಾ ಇರುತ್ತೇವೆ. ಈ ಬಾರಿ ಸಿದ್ಧಪುರ ಮಾರಿಕಾಂಬ ಜಾತ್ರೆ 30ನೇ ತಾರೀಖಿನಿಂದ ಆರಂಭವಾಗುತ್ತಿದ್ದು, ಅದಕ್ಕೆ ನಿನ್ನ ತಮ್ಮ ದರ್ಶನ್, ಅಕ್ಕ ಇಲ್ಲ.
ಆದ್ದರಿಂದ ನಾನು ಬರುವುದೇ ಇಲ್ಲ ಎಂದು ಹೇಳುತ್ತಿದ್ದಾನೆ. ಆದರೂ ಕೂಡ ಹೋಗಲೆಬೇಕು. ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಸ್ಕೂಲ್ನಲ್ಲಿ ನೀನು ಸ್ಪೋಟ್ರ್ಸ್ ನಲ್ಲಿರುವಾಗ ಒಂದು ಬಾರಿಯೂ ನಾವು ಮಿಸ್ ಮಾಡದೇ ಬಂದು ನಿನಗೆ ಸಪೋರ್ಟ್ ಮಾಡುತ್ತಿದ್ದೇವು. ಆ ಹಳೆಯ ನೆನಪುಗಳನ್ನು ನೀನು ಮತ್ತೆ ಬಿಗ್ಬಾಸ್ ವೇದಿಕೆಯ ಮೂಲಕ ತರಿಸುತ್ತಿದ್ದಿಯಾ. ನಾವು ಮಾತನಾಡಿದಷ್ಟು ಮಾತು ಮುಂದುವರೆಯುತ್ತಲೇ ಇರುತ್ತದೆ. ಮಾತನಾಡಲು ಬಹಳ ಇದೆ. ಸದ್ಯಕ್ಕೆ ನಿನ್ನನ್ನು ಫಿನಾಲೆನಲ್ಲಿ ನೋಡಬೇಕು ಎಂಬ ಆಸೆ ಇದೆ. ಚೆನ್ನಾಗಿ ಆಡು ಎಂದಿದ್ದಾರೆ.
ಅಮ್ಮನ ಮಾತು ಕೇಳಿ ದಿವ್ಯಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸಂತೋಷಕ್ಕೆ ಅತ್ತಿದ್ದಾರೆ. ಇತ್ತ ದಿವ್ಯಾ ಸಂತಸ , ಅಮ್ಮನ ಮಾತುಗಳನ್ನ ಕೇಳಿ ಮನೆಮಂದಿಯೂ ಕೂಡ ಭಾವುಕರಾಗಿದ್ದಾರೆ. ಚಪ್ಪಾಳೆ ತಟ್ಟಿ ದಿವ್ಯಾಳನ್ನ ನಗಿಸುವ ಪ್ರಯತ್ನ ಮಾಡಿದ್ದಾರೆ. ಇನ್ನೂ ದಿವ್ಯಾ ಫುಲ್ ಖುಷ್ ಆಗಿ ಕ್ಯಾಮರಾ ಮುಂದೆ ಬಂದು ಬಿಗ್ ಬಾಸ್ ಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.
BIGGBOSS 8 – ಪ್ರಿಯಕರನ ಧ್ವನಿ ಕೇಳಿ ಕುಣಿದು ಕುಪ್ಪಳಿಸಿದ ಶುಭಾ..!
‘ದಾಸ’ನ ‘ರಾಬರ್ಟ್’ ವಿಜಯ ಯಾತ್ರೆ ಬಂದ್… ಕಾರಣ..?
ಸಲ್ಮಾನ್- ಶಾರುಖ್ ಜಗಳದ ನಂತರ ಚಲ್ತೆ ಚಲ್ತೆ ಚಲನಚಿತ್ರದಲ್ಲಿ ಐಶ್ವರ್ಯಾ ಬದಲಿಗೆ ರಾಣಿ ಆಯ್ಕೆಯಾದ ಬಳಿಕ ಏನೇನಾಯಿತು ?
90 ರ ದಶಕದ ಮಾದಕ ನಟಿ ಶಕೀಲಾ ರಾಜಕೀಯಕ್ಕೆ ಎಂಟ್ರಿ..!
ತೆಲುಗು ರಾಜ್ಯಗಳಲ್ಲಿ ಕನ್ನಡ ಸ್ಟಾರ್ ಗಳ ಅಬ್ಬರ..! ತೆಲುಗಿನಲ್ಲಿ ಕೋಟಿಗೊಬ್ಬ 3..!