BIGGBOSS 8 – ಪ್ರಿಯಕರನ ಧ್ವನಿ ಕೇಳಿ ಕುಣಿದು ಕುಪ್ಪಳಿಸಿದ ಶುಭಾ..!
ಬಿಗ್ ಬಾಸ್ 8 ನೇ ಆವೃತ್ತಿಯ 4 ನೇ ವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಶನಿವಾರ ಮನೆ ಮಂದಿ ಜೊತೆಗೆ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚಿನ ಜೊತೆ ಸಂಚಿಕೆಯೂ ಮುಗಿಒದಿದ್ದು, ಈ ಸಂಚಿಕೆಯಲ್ಲಿ ಎಂದಿನಂತೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಕಾಲೆಳೆದರು, ಕಾಮಿಡಿ ಮಾಡಿ ಪ್ರೇಕ್ಷಕರು ಮನೆಯ ಸದಸ್ಯರನ್ನ ಸಿಕ್ಕಾಪಟ್ಟೆ ಎಂಟರ್ ಟೈನ್ ಮಾಡಿದ್ರು. ಬುದ್ಧಿವಾದ ಹೇಳಿದ್ರು.
ಇನ್ನೂ ಈ ವೇಳೆ ಶುಭಾ ಪುಂಜಾಗೆ ಆಕೆಯ ಪ್ರಿಯಕರ ಕರೆ ಮಾಡಿ ಪ್ರೀತಿಯ ಮಾತುಗಳನ್ನ ಆಡಿದ್ದಾರೆ. ಪ್ರಿಯಕರನ ಮಾತು ಕೇಳಿ ಸದಾ ನಗುತ್ತಲೇ ಇರುವ ಶುಭಾ ಗಳಗಳನೆ ಅತ್ತಿದ್ದಾರೆ. ಶುಭಾಗೆ ಮೊದಲಿಗೆ ಕರೆ ಬಂದಾಗ ಧ್ವನಿ ಯಾರದು ಎಂದು ಎಂದು ಗೊತ್ತಾಗುವುದಿಲ್ಲ. ಸ್ವಲ್ಪ ಹೊತ್ತು ವಾಯ್ಸ್ ಕೇಳಿಸಿಕೊಂಡು ಹಾಗೆಯೇ ಕುಳಿತಿರುತ್ತಾರೆ. ನಂತರ ತನ್ನ ಹುಡುಗ ಗೊತ್ತಾಗ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ.
ಶುಭಾ ಪ್ರಿಯಕರ ಮಾತನಾಡಿ ,ನೀನು ಬಿಗ್ಬಾಸ್ ಹೋಗುತ್ತಿದ್ದಾಗ ಸ್ವಲ್ಪ ದಿನ ಆರಾಮ್ ಆಗಿರಬಹುದು ಎಂದು ಕೊಂಡಿದ್ದೆ. ಆದ್ರೆ ನಿನ್ನ ಎಷ್ಟು ಮಿಸ್ ಮಾಡಿಕೊಳ್ತಿದ್ದೇನೆ ಎಂದು ನೀನು ಹೋದ ಮರುದಿನವೇ ಗೊತ್ತಾಯಿತ್ತು. ನಾನು ನಿನಗೆ ಯಾವತ್ತು ಹೇಳಿರದ ಒಂದು ಮಾತನ್ನು ಹೇಳುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಪರವಾಗಿಲ್ಲ ಇನ್ನಷ್ಟು ದಿನ ನಿನ್ನನ್ನು ಮಿಸ್ ಮಾಡಿಕೊಳ್ಳಲು ಸಿದ್ದವಾಗಿದ್ದೇನೆ. ಚೆನ್ನಾಗಿ ಆಟ ಆಡಿ ಇನ್ನಷ್ಟು ದಿನ ಇದ್ದು ಬಾ. ಮನೆಯಲ್ಲಿ ಹಠ ಮಾಡುವ ಮಗು ಇಲ್ಲ, ಬೆಸ್ಟ್ ಫ್ರೆಂಡ್ ಇಲ್ಲ, ಪರ್ಸನಲ್ ಎಂಟಟೈನರ್ ಇಲ್ಲ ಎಂದು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.
ಈ ವೇಳೆ ಶುಭಾ ಬಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಐ ಮಿಸ್ ಯೂ ಟು ಚಿನ್ನಿ ಬಾಂಬ್. ನಾನು ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸ್ವಲ್ಪ ತಿಂಗಳ ಕಾಲ ವೈಟ್ ಮಾಡು ಎಂದು ಹೇಳಿದ್ದಾರೆ.
‘ದಾಸ’ನ ‘ರಾಬರ್ಟ್’ ವಿಜಯ ಯಾತ್ರೆ ಬಂದ್… ಕಾರಣ..?
ಸಲ್ಮಾನ್- ಶಾರುಖ್ ಜಗಳದ ನಂತರ ಚಲ್ತೆ ಚಲ್ತೆ ಚಲನಚಿತ್ರದಲ್ಲಿ ಐಶ್ವರ್ಯಾ ಬದಲಿಗೆ ರಾಣಿ ಆಯ್ಕೆಯಾದ ಬಳಿಕ ಏನೇನಾಯಿತು ?
90 ರ ದಶಕದ ಮಾದಕ ನಟಿ ಶಕೀಲಾ ರಾಜಕೀಯಕ್ಕೆ ಎಂಟ್ರಿ..!
ತೆಲುಗು ರಾಜ್ಯಗಳಲ್ಲಿ ಕನ್ನಡ ಸ್ಟಾರ್ ಗಳ ಅಬ್ಬರ..! ತೆಲುಗಿನಲ್ಲಿ ಕೋಟಿಗೊಬ್ಬ 3..!