BIGGBOSS 8 : ಎರಡನೇ ಇನ್ನಿಂಗ್ಸ್ – ದೊಡ್ಮನೆಯಿಂದ ಹೊರನಡೆದ 2ನೇ ಸ್ಪರ್ಧಿ ರಘು
ಲಾಕ್ ಡೌನ್ ಬಳಿಕ ಮತ್ತೆ ಪುನರಾರಂಭವಾಗಿರುವ ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ ನಲ್ಲಿ ಮೊದಲಿಗೆ ನಿಧಿ ಮನೆಯಿಂದ ಹೊರನಡೆದಿದ್ದರು.. ಇದೀಗ ರಘು ಔಟ್ ಆಗಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ರಘು ವೈನ್ ಸ್ಟೋರ್ ಎಂಬ ಖಾತೆಯ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ರಘು ಬಿಗ್‍ಬಾಸ್ ಮನೆಗೆ 13ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು..
ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಯಾರೊಂದಿಗೂ ಕಿರಿಕ್ ಮಾಡಿಕೊಳ್ಳದೇ ಉತ್ತ ಮ ಸಂಬಂಧ ಹೊಂದಿದ್ದರು. ಆದ್ರೂ ಅಷ್ಟಾಗಿ ಆಕ್ಟೀವ್ ಆಗಿರದೇ ಲೈಮ್ ಲೈಟ್ ನಿಂದ ದೂರವೇ ಇರುತ್ತಿದ್ದರು ರಘು.. ದೊಡ್ಮನೆಯಲ್ಲಿ ವೈಷ್ಣವಿಯವರ ಜೊತೆಗೆ ರಘು ಉತ್ತಮ ಸಂಬಂಧ ಹೊಂದಿದ್ದರು. ಸದ್ಯ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ..
ಇನ್ನೂ ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದ್ದು, ಸೋಲೋದ್ಯಾರು ಗೆಲ್ಲೋದ್ಯಾರು ಲೆಕ್ಕಾಚಾರಗಳು ಶುರುವಾಗಿವೆ.. ಅದ್ರಲ್ಲೂ ಶೋ ಅರ್ಧಕ್ಕೆ ನಿಂತು ಎಲ್ಲರೂ ಹೊರಗಡೆ ಹೋಗಿ ಮತ್ತೆ ದೊಡ್ಮನೆಗೆ ಮನೆಗೆ ಬಂದ ನಂತರ ಎಲ್ಲರೂ ಬದಲಾದ ವರಸೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಆಪ್ತರ ನಡುವೆ ಗಲಾಟೆಗಳು ಆಗಿರುವ ಉದಾಹರಣೆಗಳೂ ಇವೆ.