“ಬಿಗ್ ಬಾಸ್ ಗೆ ಬರುತ್ತೇನೆ… ಬೆತ್ತಲೆ ಯೋಗ ಮಾಡ್ತೇನೆ.. ದಿನಕ್ಕೆ 50 ಲಕ್ಷ ಕೊಡ್ತೀರಾ..?” – ಬೆತ್ತಲೆ ಬಾಬಾ ..!
ಬಾರತೀಯ ಕಿರುತೆರೆಯ ಜಗತ್ತಲ್ಲಿ ಯಾವುದೇ ಭಾಷೆಗಳಲ್ಲಿಯೂ ಅತಿ ಹೆಚ್ಚು ಪ್ರಸಿದ್ಧಿ ಗಳಿಸಿರುವ ರಿಯಾಲಿಟಿ ಶೋ ಬಿಗ್ ಬಾಸ್.. ಕನ್ನಡದಲ್ಲಿಯೂ ಬಿಗ್ ಬಾಸ್ ಗೆ ಅತಿ ಹೆಚ್ಚು ಫ್ಯಾನ್ಸ್ ಇದ್ದಾರೆ.. ಕನ್ನಡದಲ್ಲಿ ಈಗಾಗಲೇ 8ನೇ ಸೀಸನ್ ಮುಕ್ತಾಯ ಹಂತ ತಲುಪಿದೆ.. ಹಿಂದಿಯಲ್ಲಿ 14 ಸೀಸನ್ ಗಳು ಮುಗಿದು 15 ನೇ ಸೀಸನ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ.. ಕಂಟೆಸ್ಟೆಂಟ್ ಗಳ ಹುಡುಕಾಟದಲ್ಲಿ ಮೇಕರ್ಸ್ ಇದ್ದಾರೆ. ಈ ಬಾರಿ ಒಟಿಟಿಯಲ್ಲಿ ನಿರ್ಮಾಪಕ ಕರಣ್ ಜೋಹರ್ ಅವರು ನಿರೂಪಣೆ ಮಾಡಲಿದ್ದಾರೆ.,
ಆದ್ರೆ ಬಿಗ್ ಬಾಸ್ ಗೆ ಬೆತ್ತಲೆ ಗುರು ಎಂದೇ ಖ್ಯಾತಿ ಪಡೆದಿರುವ ವಿವೇಕ್ ಮಿಶ್ರಾ ಅನ್ನು ಒಟಿಟಿ ಬಿಗ್ಬಾಸ್ ಆಯೋಜಕರು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ. ಹೌದು ಆದ್ರೆ ಅದಕ್ಕೂ ಮೀರಿ ಆಶ್ಚರ್ಯದ ವಿಚಾರ ಎಂದ್ರೆ ಬಿಗ್ ಬಾಸ್ ನಲ್ಲಿ ಬಾಗವಹಿಸಲು ದಿನಕ್ಕೆ 50 ಲಕ್ಷ ರೂಪಾಯಿಗಳಿಗೆ ಬೆತ್ತಲೆ ಬಾಬಾ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ವಿವೇಕ್ ಮಿಶ್ರಾ, ಒಟಿಟಿ ಬಿಗ್ಬಾಸ್ ಆಯೋಜಕರು ನನ್ನನ್ನು ಸಂಪರ್ಕಿಸಿ ಶೋ ನಲ್ಲಿ ಭಾಗವಹಿಸುವಂತೆ ಕೇಳಿದರು. ಜೊತೆಗೆ ಶೋ ನಲ್ಲಿ ಬೆತ್ತಲೆ ಅಥವಾ ಅರೆಬೆತ್ತಲೆಯಾಗಿ ಯೋಗ ಮಾಡಲು ಸಹ ಹೇಳಿದರು. ಅವರ ಡಿಮ್ಯಾಂಡ್ ಕೇಳಿ ನನಗೆ ಆಶ್ಚರ್ಯವಾಯಿತು ಎಂದಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣ – ಪಶ್ಚಿಮ ಬಂಗಾಳ ಮಾಡೆಲ್ , ನಟಿ ಹಾಗೂ ಫೋಟೋಗ್ರಾಫರ್ ಬಂಧನ
ಅಲ್ಲದೇ ದಿನಕ್ಕೆ 50 ಲಕ್ಷ ಹಣ ಕೊಡುವುದಾದರೆ ಮಾತ್ರವೇ ನಾನು ಒಟಿಟಿ ಬಿಗ್ಬಾಸ್ನಲ್ಲಿ ಭಾವಹಿಸುತ್ತೇನೆ ಮತ್ತು ಶೋನಲ್ಲಿ ಬೆತ್ತಲೆ ಯೋಗ ಮಾಡುತ್ತೇನೆ ಎಂದು ನಾನು ಆಯೋಜಕರಿಗೆ ಹೇಳಿದ್ದೇನೆ. ನಾನು ಈಗಾಗಲೇ ಬಿಗ್ಬಾಸ್ನಲ್ಲಿ ಭಾಗವಹಿಸಿದ್ದೇನೆ, ಅಲ್ಲಿ ನನ್ನ ಪ್ರತಿಭೆ ಪ್ರದರ್ಶನ ಮಾಡಿದ್ದೇನೆ. ಹಾಗಾಗಿ ಈ ಆಫರ್ ನನಗೆ ಹೊಸದೇನೂ ಅಲ್ಲ ಎಂದಿದ್ದಾರೆ.
ಶೋ ನಡೆಯುವುದು ಸ್ಪರ್ಧಿಗಳಿಂದ, ನಿರೂಪಕರಿಂದ ಅಲ್ಲ, ಬಿಗ್ಬಾಸ್ ಶೋ ನಿರೂಪಕರ ಬಗ್ಗೆ ಮಾತನಾಡಿರುವ ವಿವೇಕ್. ಯಾವುದೇ ಶೋ ಅದರ ನಿರೂಪಕರಿಂದ ನಡೆಯುತ್ತದೆ ಎಂಬುದು ಸುಳ್ಳು. ಶೋ ನಡೆಯುವುದು ಸ್ಪರ್ಧಿಗಳಿಂದ ನಿರೂಪಕರು ಸ್ವಲ್ಪ ಯೋಗದಾನ ನೀಡುತ್ತಾರೆ ಅಷ್ಟೆ. ಸಲ್ಮಾನ್ ಖಾನ್, ಕರಣ್ ಜೋಹರ್, ಜೆನೀಫರ್ ಲೊಪೇಜ್ ಇರಲಿ ಅವರಿಂದಲೇ ಶೋ ನಡೆಯುತ್ತದೆ ಎಂದು ಹೇಳಲಾಗದು ಎಂದಿದ್ದಾರೆ.
ಇದೇ ವೇಳೆ ನಾನು ಈಗಾಗಲೇ ಬಿಗ್ಬಾಸ್ ನಲ್ಲಿ ಭಾಗವಹಿಸಿದ್ದೇನೆ. ಹಾಗಾಗಿ ಮತ್ತೊಮ್ಮೆ ನಾನು ಬಿಗ್ಬಾಸ್ಗೆ ಹೋಗಬೇಕೆಂದರೆ ನನಗೆ ದೊಡ್ಡ ಮೊತ್ತದ ಮೊತ್ತ ನೀಡಬೇಕು. ಇಲ್ಲವಾದರೆ ನಾನು ಹೋಗುವುದಿಲ್ಲ. ವರ್ಷಕ್ಕೊಂದು ಸಾಧಾರಣ ಪ್ರಾಜೆಕ್ಟ್ ಮಾಡುವುದಕ್ಕಿಂತಲೂ 5 ವರ್ಷಗಳಿಗೊಮ್ಮೆ ಒಳ್ಳೆಯ ಪ್ರಾಜೆಕ್ಟ್ ಮಾಡುವುದು ಉತ್ತಮ. ನಾನು ಈಗಾಗಲೇ ಕಾಮಿಡಿ ಪ್ರಾಜೆಕ್ಟ್ ಒಂದನ್ನು ಮಾಡುವ ಯೋಜನೆಯಲ್ಲಿದ್ದೇನೆ ಎಂದಿದ್ದಾರೆ.