ಕೆಜಿಎಫ್ 2 ಗೆ ಡಿಮ್ಯಾಂಡೋ ಡಿಮ್ಯಾಂಡು..! ‘ರಾಖಿ ಬಾಯ್’ ಖದರ್ ಮುಂದೆ ಬಾಲಿವುಡ್ ನಿಲ್..! ರೈಟ್ಸ್ ಗಾಗಿ ದುಂಬಾಲು ಬಿದ್ದ ಡಿಸ್ಟ್ರಿಬ್ಯೂಟರ್ಸ್..!
ಭಾರತೀಯ ಸಿನಿಮಾರಂಗ ಅಂದ್ರೆ ಬಾಲಿವುಡ್ ಅನ್ನೋ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದ್ದು ಬಾಹುಬಲಿ ಸಿನಿಮಾ.. ಆ ನಂತರ ಟಾಲಿವುಡ್, ಕಾಲಿವುಡ್ ಸಿನಿಮಾಗಳು ಮಾತ್ರ ಬಾಲಿವುಡ್ ಗೆ ಟಕ್ಕರ್ ಕೊಡಬಹುದು 100 ಕೋಟಿ ಕ್ಲಬ್ ಸೇರಬಹುದು ಎಂಬ ವಾಡಿಕೆಯಿತ್ತು. ಆದ್ರೆ ಈ ವಾಡಿಕೆಯನ್ನ ಬುಡಮೇಲು ಮಾಡಿ ಸ್ಯಾಂಡಲ್ ವುಡ್ ನ ಒಂದು ರೇಂಜ್ ಗೆ ತೆಗೆದುಕೊಂಡು ಹೋಗಿ ಬಾಲಿವುಡ್ ಮಂದಿ ಬಾಯ್ಮೇಲೆ ಬೆರಳಿಟ್ಟುಕೊಂಡು ಹುಬ್ಬೇರಿಸುವಂತೆ ಮಾಡಿದ್ದು ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್..
ರಾಖಿ ಬಾಯ್ ಖದರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಕನ್ನಡಿಗರಷ್ಟೇ ಅಲ್ಲ ಪರ ಬಾಷಾಭಿಮಾನಿಗಳು ರಾಖಿ ಬಾಯ್ ಉಘೇ ಉಘೇ ಅನ್ನುತ್ತಿದ್ದಾರೆ.. ಈಸಿನಿಮಾದ ಚಾಪ್ಟರ್ 2 ಗಂತೂ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ.. ರಿಲೀಸ್ ಗೂ ಮುನ್ನವೇ ಸರಣಿ ರೆಕಾರ್ಡ್ ಗಳ ಬ್ರೇಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿರುವ KGF ಚಾಪ್ಟರ್ 2 ಗಾಗಿ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.. ಸಿನಿಮಾದ ಡಬ್ಬಿಂಗ್ ರೈಟ್ಸ್ ಗೆ ಭಾರೀ ಡಿಮ್ಯಾಂಡ್ ಬಂದಿದೆ..
‘ವಿಕ್ರಾಂತ್ ರೋಣ’ನ ಜೊತೆ ‘ರಕ್ಕಮ್ಮ’ಳಾಗಿ ಬಂದ ಲಂಕಾ ಸುಂದರಿ..!
ಪ್ರಶಾಂತ್ ನೀಲ್ ಸಾರಥ್ಯದ , ಶ್ರೀನಿಧಿ ಶೆಟ್ಟಿ ನಾಯಕಿಯಾಗಿರುವ ಈ ಸಿನಿಮಾದ ಆಡೀಯೋವನ್ನ ಇತ್ತೀಚೆಗೆ ಲಹರಿ ಸಂಸ್ಥೆ ದುಬಾರಿ ಮೊತ್ತಕ್ಕೆ ಕೊಂಡುಕೊಂಡಿತ್ತು.. ಇದೀಗ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯ್ತಿರುವ ಸಿನಿಮಾಗೆ ಮತ್ತಷ್ಟು ಡಿಮ್ಯಾಂಡ್ ಹೆಚ್ಚಾಗಿದೆ.. ಬಿಗ್ ಬಜೆಟ್ ನಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ತೆಲುಗು , ತಮಿಳು , ಕನ್ನಡ , ಹಿಂದಿ , ಮಳಯಾಳಂನಲ್ಲಿ ಬರುತ್ತಿರುವುದು ಗೊತ್ತೇ ಇದೆ.. ಆದ್ರೆ ವಿಷ್ಯ ಏನೆಂದ್ರೆ ಒಡಿಯಾ ಭಾಷೆಯಲ್ಲಿ ಸಿನಿಮಾ ಡಬ್ಬಿಂಗ್ ರೈಟ್ಸ್ ಗಾಗಿ ಒಡಿಶಾ ಡಿಸ್ಟ್ರಿಬ್ಯೂಟರ್ ಕೆಜಿಎಫ್ ಚಾಪ್ಟರ್ ಹಿಂದೆ ದುಂಬಾಲು ಬಿದ್ದಿದ್ದಾರೆ.. ಒಡಿಶಾದ ಟಾಪ್ ವಿತರಕರು ಹೊಂಬಾಳೆ ಬ್ಯಾನರ್ ಅನ್ನ ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.. ಅದು ಅಲ್ದೇ ಬರೋಬ್ಬರಿ 1 ಕೋಟಿ ರೂಪಾಯಿಯ ಆಫರ್ ಕೊಟ್ಟಿದ್ದು, ಸಿನಿಮಾ ಬೇಕೇ ಬೇಕು ಅನ್ನೋ ಪಟ್ಟುಹಿಡಿದಿದ್ದಾರೆ ಅಂತ ಹೇಳಲಾಗ್ತಿದೆ..
ಇದೇನು ಬರಿ 1 ಕೋಟಿನಾ ಅನ್ನಿಸುವುದು ಸಹಜ.. ಆದ್ರೆ ಈ ವಿಚಾರದಲ್ಲೂ ರಾಖಿ ಬಾಯ್ ಅಭಿನಯದ KGF 2 ರೆಕಾರ್ಡ್ ಬ್ರೇಕ್ ಮಾಡಿದೆ.. ಹೌದು.. ಒಡಿಯಾ ಚಿಕ್ಕ ಸಿನಿಮಾರಂಗ. ಇದುವರೆಗೂ ಯಾವುದೇ ಭಾಷೆಯ ಚಿತ್ರಗಳು ಕೂಡ ಇಲ್ಲಿ ಇಷ್ಟು ದುಬಾರಿ ಮೊತ್ತಕ್ಕೆ ಸೇಲ್ ಆಗಿಲ್ಲ. ಬಾಲಿವುಡ್ ಸಿನಿಮಾಗಳು ಡಬ್ ಆಗಿ ರಿಲೀಸ್ ಆದ್ರೂ 50 ಲಕ್ಷಕ್ಕಿಂತ ಯಾವ ಸಿನಿಮಾ ಕೂಡ ಅಧಿಕ ರೇಟ್ ಗೆ ಮಾರಾಟವಾಗಿಲ್ಲ. ಅಮಿರ್ ಖಾನ್ ನಟನೆಯ ಪಿಕೆ ಸಿನಿಮಾ 50 ಲಕ್ಷಕ್ಕೆ ಸೇಲ್ ಆಗಿದ್ದು ಬಿಟ್ರೆ ಅಞ್ಟು ದೊಡ್ಡ ಮಟ್ಟಕ್ಕೆ ಯಾವ ಸಿನಿಮಾವೂ ಕೂಡ ಮಾರಾಟವಾಗಿಲ್ಲ. ಆದರೆ ಆ ರೆಕಾರ್ಡ್ ನೂ ಬ್ರೇಕ್ ಮಾಡಲು ಹೊರಟಿರೋದು ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ 2.
ಮಾಧ್ಯಮದವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿಲ್ಪಾ ಶೆಟ್ಟಿಗೆ ನ್ಯಾಯಾಲಯದಲ್ಲಿ ಮುಖಭಂಗ..!
“ಬಲವಂತವಾಗಿ ಕಿಸ್ ಮಾಡಲು ಬಂದ್ರು, ಹೆದರಿ ಬಾತ್ ರೂಮ್ ನಲ್ಲಿ ಬಚ್ಚಿಟ್ಟುಕೊಂಡಿದ್ದೆ” – ಕುಂದ್ರಾ ವಿರುದ್ಧ ಶರ್ಲಿನ್ ಆರೋಪ
133 ವರ್ಷದ ಹಳೆಯ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!