“ಬಲವಂತವಾಗಿ ಕಿಸ್ ಮಾಡಲು ಬಂದ್ರು, ಹೆದರಿ ಬಾತ್ ರೂಮ್ ನಲ್ಲಿ ಬಚ್ಚಿಟ್ಟುಕೊಂಡಿದ್ದೆ” – ಕುಂದ್ರಾ ವಿರುದ್ಧ ಶರ್ಲಿನ್ ಆರೋಪ

1 min read

“ಬಲವಂತವಾಗಿ ಕಿಸ್ ಮಾಡಲು ಬಂದ್ರು, ಹೆದರಿ ಬಾತ್ ರೂಮ್ ನಲ್ಲಿ ಬಚ್ಚಿಟ್ಟುಕೊಂಡಿದ್ದೆ” – ಕುಂದ್ರಾ ವಿರುದ್ಧ ಶರ್ಲಿನ್ ಆರೋಪ

ಮುಂಬೈ: ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, 14 ದಿನಗಳ ವರೆಗೂ ಮತ್ತೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.. ಈ ನಡುವೆ ಶಿಲ್ಪಾ ಶೆಟ್ಟಿ , ಮಾಡೆಲ್ ಗೆಹನಾ , ಕಾಮಸೂತ್ರ 3ಡಿ ಸಿನಿಮಾ ಖ್ಯಾತಿಯ ನಟಿ ಶೆರ್ಲಿನ್ ಚೋಪ್ರಾ, ಪೂನಂ  ಪಾಂಡೆಗೂ ಸಂಕಷ್ಟ ಎದುರಾಗಿದೆ.. ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾಗೆ ಬಂಧನದ ಭೀತಿ ಎದುರಾಗಿದ್ದು, ಮುಂಬೈ ಸೆಷನ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.  ಆದ್ರೆ ಶರ್ಲಿನ್  ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ.

ತೆಲುಗು ಸಂದರ್ಶನದಲ್ಲಿ ‘ರಾಖಿ ಭಾಯ್’ ಕೊಂಡಾಡಿದ  ವಸಿಷ್ಠ ಸಿಂಹ..!

ಇನ್ನೂ ಪ್ರಕರಣದಲ್ಲಿ ಶರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಕುಂದ್ರ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ.. ಈ ನಡುವೆ ಶರ್ಲಿನ್ ಚೋಪ್ರಾ ಮತ್ತೊಂದು ಶಾಕಿಂಗ್ ವಿಚಾರವನ್ನ ಬಹಿರಂಗ ಪಡಿಸಿದ್ಧಾರೆ.. ಜುಲೈ 27 ರಂದು ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು. ರಾಜ್ ಕುಂದ್ರಾ ಕೇಸ್‌ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಸೂಚಿಸಿದ್ದರು. ‘ರಾಜ್ ಕುಂದ್ರಾ ನನ್ನನ್ನು ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು, ನನಗೆ ಲೈಂಗಿಕ ಕಿರುಕುಳ ಕೊಡಲು ಪ್ರಯತ್ನಿಸಿದರು’ ಎಂದು ಶೆರ್ಲಿನ್ ದೂರಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

133 ವರ್ಷದ ಹಳೆಯ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!

ಕಳೆದ ಏಪ್ರಿಲ್ ತಿಂಗಳಲ್ಲೇ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಈ ದೂರಿನಲ್ಲಿ ರಾಜ್ ಕುಂದ್ರಾ ನನ್ನ ಮೇಲೆ ಲೈಂಗಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 2019ರಲ್ಲಿ ಬಿಸಿನೆಸ್ ಆಪ್ ಸಂಬಂಧ ನನ್ನನ್ನು ಮೀಟಿಂಗ್‌ ಗೆ ಕರೆದಿದ್ದ ರಾಜ್ ಕುಂದ್ರಾ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರ ಬಹಿರಂಗವಾಗಿದೆ. ಮೀಟಿಂಗ್ ಎಂದು ಕರೆದು ನನ್ನನ್ನ ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು. ಇದಕ್ಕೆ ನಾನು ವಿರೋಧಿಸಿದೆ. ಆಗ ನಮ್ಮಿಬ್ಬರ ನಡುವೆ ಜಗಳ ಶುರುವಾಯಿತು. ನನ್ನನ್ನು ಎಳೆದಾಡಿದರು. ಭಯದಿಂದ ನಾನು ಕೇಳಿಕೊಂಡೆ. ಆದರೂ ರಾಜ್ ಕುಂದ್ರಾ ಸುಮ್ಮನಾಗಲಿಲ್ಲ. ಅವರಿಂದ ತಪ್ಪಿಸಿಕೊಳ್ಳಲು ನಾನು ಬಾತ್‌ ರೂಂನಲ್ಲಿ ಅಡಗಿ ಕುಳಿತಿದ್ದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಜನ ಬಯಸಿದರೆ ಚುನಾವಣೆಗೆ ಸ್ಪರ್ಧಿಸ್ತೀನಿ : ಅಭಿ

ರಿಯಲ್ ಹೀರೋಗೆ 48ನೇ ವರ್ಷದ ಹುಟ್ಟುಹಬ್ಬ – ಅಭಿಮಾನಿಗಳ ಸಂಭ್ರಮ..!

ಮಾಧ್ಯಮಗಳ ವಿರುದ್ಧ ತಿರುಗಿಬಿದ್ದ ಶಿಲ್ಪಾ ಶೆಟ್ಟಿ  – ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟಿ

ಈ ವರ್ಷವೂ ರಿಲೀಸ್ ಆಗಲ್ಲಾ ರಾಧೆಶ್ಯಾಮ್ – ಹೊಸ ಬಿಡುಗಡೆ ದಿನಾಂಕ ಘೋಷಣೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd