ಈ ವರ್ಷವೂ ರಿಲೀಸ್ ಆಗಲ್ಲಾ ರಾಧೆಶ್ಯಾಮ್ – ಹೊಸ ಬಿಡುಗಡೆ ದಿನಾಂಕ ಘೋಷಣೆ
ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ರಾಧೆಶ್ಯಾಮ್ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ. ಇದೀಗ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯುಂಟಾಗಿದೆ..
ರಾಧೆ ಶ್ಯಾಮ್ ಸಿನಿಮಾ ತಂಡವು ಹೊಸ ರಿಲೀಸ್ ದಿನಾಂಕ ಘೋಷನೆ ಮಾಡಿದೆ.. ಹೌದು ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಟೀ ಸೀರೀಸ್ ಬ್ಯಾನರ್ ನ ಅಡಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ರಾಧೆ ಶ್ಯಾಮ್ ಚಿತ್ರವನ್ನು ಮುಂದಿನ ವರ್ಷ ಜನವರಿ 14ರಂದು ಬಿಡುಗಡೆ ಮಾಡಲಿರೋದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದೆ.. ಇನ್ನೂ ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ ಜುಲೈ 30ರಂದು ಈ ಸಿನಿಮಾ ತೆರೆಮೇಲೆ ಬರುತ್ತಿತ್ತು. ಆದ್ರೆ ಕೊರೊನಾ ಕಾರಣದಿಂದ ಮುಂದೂಡಲಾಗಿದ್ದು, ಇದೀಗ ಹೊಸ ದಿನಾಂಕ ಘೋಷಣೆಯಾಗಿದ್ದು, ಅಭಿಮಾನಿಗಳಿಗೆ ಕೊಂಚ ನಿರಾಸೆಯುಂಟಾಗಿದೆ.
ಯುವಿ ಕ್ರಿಯೇಷನ್ಸ್ ಹಾಗೂ ಟಿ ಸಿರೀಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ನಮ್ಮ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇನ್ನೂ ಪ್ರಭಾಸ್ ಅವರು ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರ ಜೊತೆಗೆ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಿದ್ದು, ಉಗ್ರಂ ಮತ್ತು ಕೆಜಿಎಫ್ ನ ವೈಬ್ಸ್ ನೀಡುತ್ತಿದೆ.. ಇದರ ಜೊತೆಗೆ ಆದಿಪುರುಷ್ ನಲ್ಲೂ ಪ್ರಭಾಸ್ ನಿರತಾರಿದ್ದು, ಇನ್ನೂ ಸಾಲು ಸಾಲು ಆಫರ್ ಗಳು , ಪ್ರಾಜೆಕ್ಟ್ ಗಳು ಅವರ ಕೈಯಲ್ಲಿವೆ.