‘ಸೌತ್ ಇಂಡಿಯಾ’ದಲ್ಲಿ  ಇನ್ಮುಂದೆ  ‘ಡಾಲಿ’ ಧಮಾಕ..!

1 min read

‘ಸೌತ್ ಇಂಡಿಯಾ’ದಲ್ಲಿ  ಇನ್ಮುಂದೆ  ‘ಡಾಲಿ’ ಧಮಾಕ..!

ಕನ್ನಡ ಸಿನಿಮಾರಂಗ ಅಷ್ಟೇ ಅಲ್ದೇ ತೆಲುಗು ಸಿನಿಮಾರಂಗದಲ್ಲಿಯೂ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿರುವ ಮಿಂಚುತ್ತಿರುವ , ಪ್ರತಿಭಾನ್ವಿತ ನಟ ಡಾಲಿ ಧನಂಜಯ್.. ಪಾತ್ರ ಯಾವುದೇ ಇರಲಿ ಆ ಪಾತ್ರಕ್ಕೆ ತಾನೇ ಸರಿಯಾದ ಆಯ್ಕೆ ಅನ್ನುವಂತೆ ಪಾತ್ರಗಳಿಗೆ ಜೀವ ತುಂಬುವ ಡಾಲಿ ಖಳನಾಯನಾದ್ರೂ ಅದೇ ಖದರ್ , ಹೀರೋ ಆದ್ರೂ ಆದೇ ರೇಂಜ್ ಗೆ ತಕ್ಕಂತೆ ನಟನೆ ಮಾಡುತ್ತಾ ಸಾಕಷ್ಟು ಅಭಿಮಾನಿಗಳನ್ನ ಸಂಪಾದನೆ ಮಾಡಿರುವ ಕನ್ನಡದ ಬ್ಯುಸಿಯೆಸ್ಟ್ ನಟರಲ್ಲಿ ಒಬ್ಬರಾಗಿದ್ದಾರೆ..

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ  ಡಾಲಿ ನಟಿಸಿದ್ದ ಧ್ರುವ ಅಭಿನಯದ ಪೊಗರು ಸಿನಿಮಾ ಇದೇ ವರ್ಷದ ಆರಂಭದಲ್ಲಿ  ತೆರೆಕಂಡಿತ್ತು.. ನಂತರ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನದಲ್ಲೂ ಡಾಲಿ ಕಾಣಿಸಿಕೊಂಡಿದ್ದರೂ.. ಈ ಎರಡೂ ಚಿತ್ರಗಳಲ್ಲೂ ಪ್ರೇಕ್ಷಕರು ಧನಂಜಯ್‌  ಅಭಿನಯಕ್ಕೆ ಜನರು ಫಿದಾ ಆಗಿದ್ರೂ.. ಈ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು..dolly dhananjay

ಇದೀಗ  ಡಾಲಿ ಧನಂಜಯ್ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ.. ಧನಂಜಯ್‌ ಅಭಿನಯಿಸಿರುವ, ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ  ಬಿಗ್‌ ಬಜೆಟ್‌ ಚಿತ್ರ ಸಲಗತೆರೆಗೆ ಬರಲು ರೆಡಿಯಾಗುತ್ತಿದೆ.  ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.. ಆದ್ರೆ ಕೊರೊನಾ ಹಾವಳಿ ಹೀಗೆ ಮುಂದುವರೆದರೆ, ಥೀಯೇಟರ್ ಗಳಲ್ಲಿ 100 % ಬದಲಾಗಿ 50 % ಸೀಟಿಂಗ್ ಗೆ ಅನುಮತಿ ಇದ್ರೆ ಮತ್ತೆ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ ಆದ್ರೂ ಅಚ್ಛರಿ ಪಡಬೇಕಿಲ್ಲ.

ಇನ್ನೂ ಇವುಗಳನ್ನ ಹೊರತು ಪಡಿಸಿದ್ರೆ , ಜಗ್ಗೇಶ್ ಅಭಿನಯದ ‘ತೋತಾಪುರಿ’ಯೂ ಇನ್ನೇನು ಕೊನೆ ಹಂತ ತಲುಪಿದೆ. ‘ಭೈರಾಗಿ’, ತೆಲುಗಿನ ‘ಪುಷ್ಪಾ’ ಚಿತ್ರದಲ್ಲೂ ಡಾಲಿ ಬಣ್ಣ ಹಚ್ಚಿದ್ದು,   ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಲ್ಲದೇ ಡಾಲಿ ನಾಯಕನಾಗಿ ಕಾಣಿಸಿಕೊಳ್ತಿರುವ  ‘ರತ್ನನ್‌ ಪ್ರಪಂಚ’,  ‘ಹೆಡ್‌ ಅಂಡ್ ಬುಷ್‌’ ‘ಮಾನ್ಸೂನ್ ರಾಗ’, ‘ಡಾಲಿ’ ಚಿತ್ರದ ಕೆಲಸಗಳು ಕೂಡ ಬಿರುಸಿನಿಂದ ಸಾಗಿದೆ.. ಒಟ್ನಲ್ಲಿ ಒಂದಲ್ಲಾ ಎರೆಡೆಲ್ಲಾ ಸಾಲು ಸಾಲು ಸಿನಿಮಾಗಳಲ್ಲಿ ಡಾಲಿ ಬ್ಯುಸಿಯಾಗಿದ್ದು, ಸ್ಯಾಂಡಲ್ ವುಡ್ ಮೋಸ್ಟ್ ಬ್ಯುಸಿಯೆಸ್ಟ್ ನಟರಲ್ಲಿ ಒಬ್ಬರಾಗಿದ್ದಾರೆ…

‘KGF-2’ ಚಿತ್ರದಿಂದ ‘ಅಧೀರ’ನ ಪೋಸ್ಟರ್ ಬಿಡುಗಡೆ – ಸಂಜು ಬಾಬಾಗೆ ಬರ್ತ್ ಡೇ ಗಿಫ್ಟ್..!

ಅಶ್ಲೀಲ ವಿಡಿಯೋ ದಂಧೆ – 5 ತಿಂಗಳಲ್ಲಿ ಕುಂದ್ರಾ ಸಂಪಾದಿಸಿದ್ದು ಕೋಟಿ ಕೋಟಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd