‘KGF-2’ ಚಿತ್ರದಿಂದ ‘ಅಧೀರ’ನ ಪೋಸ್ಟರ್ ಬಿಡುಗಡೆ – ಸಂಜು ಬಾಬಾಗೆ ಬರ್ತ್ ಡೇ ಗಿಫ್ಟ್..!
ಬಹುನಿರೀಕ್ಷೆಯ KGF 2 ಚಿತ್ರದಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿರುವುದು ಅಧೀರನ ಪಾತ್ರ.. ಬಾಲಿವುಡ್ ನ ಸ್ಟಾರ್ ನಟ ಸಂಜಯ್ ದತ್ ಅಧೀರನಾಗಿ ಟೆರರ್ ಲುಕ್ ನಲ್ಲಿ ಕಾಣಿಸಿಕೊಳ್ತಾಯಿದ್ದಾರೆ.. ಅಧ್ಯಾಯ 2ರಲ್ಲಿ ರಾಖಿ ಬಾಯ್ ಜೊತೆಗೆ ಭಯಂಕರ ಅಧೀರ ಮುಖಾಮುಖಿಯಾಗಲಿದ್ದಾನೆ..
ಇದೇ ಅಧೀರನ ಪಾತ್ರಕ್ಕೆ ಸಿಕ್ಕಾಪಟ್ಟೆ ಕ್ರೇಜ್ ಇದೆ.. ಇದೀಗ KGF 2 ಸಿನಿಮಾ ತಂಡ ಅಧೀರನ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ.. ಇಂದು ಸಂಜಯ್ ದತ್ ಗೆ 62ನೇ ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಸಂಜು ಬಾಬಾ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ವಿಶೇಷ ಎಂದರೆ ಸಂಜಯ್ ದತ್ ಹುಟ್ಟುಹಬ್ಬಕ್ಕೆ ಬಹುನಿರೀಕ್ಷೆಯ ಕೆಜಿಎಫ್-2 ಸಿಮಿಮಾದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಸಂಜಯ್ ದತ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ನಿಂದ ವಿಶೇಷ ಉಡುಗೊರೆ ಸಿಗಲಿದೆ ಎಂದು ಅಭಿಮಾನಿಗಳು ತಿಂಗಳಿಂದ ಕಾಯುತ್ತಿದ್ದರು. ಅದರಂತೆ ಕೆಜಿಎಫ್-2 ತಂಡ ಪೋಸ್ಟರ್ ಬಿಡುಗಡೆ ಮಾಡಿದೆ.
ಸಂಜಯ್ ದತ್ ಭಯಾನಕ ಲುಕ್ ಅಭಿಮಾನಿಗಳನ್ನು ಬೆಚ್ಚಿಬೀಳಿಸುವಂತಿದೆ. ಖಡ್ಗ ಹಿಡಿದು ಎಂಟ್ರಿ ಕೊಟ್ಟಿರುವ ಪೋಸ್ಟರ್ ಇದಾಗಿದೆ.. ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾ ತಂಡ “ಯುದ್ಧವು ಪ್ರಗತಿಗಾಗಿ ಆಗಿದೆ. ಇದನ್ನು ರಣಹದ್ದುಗಳು ಸಹ ನನ್ನೊಂದಿಗೆ ಅಪ್ಪುತ್ತವೆ” ಎಂದು ಕ್ಯಾಪ್ಷನ್ ನೀಡಿದ್ದಾರೆ. ದತ್ ಹೊಸ ಪೋಸ್ಟರ್ ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.
ಇನ್ನು ಈ ಪೋಸ್ಟರ್ ಅನ್ನು ನಟ ಸಂಜಯ್ ದತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. “ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯಲು ಯೋಗ್ಯವಾಗಿರುತ್ತದೆ” ಎಂದು ಹೇಳಿದ್ದಾರೆ.
ಅಶ್ಲೀಲ ವಿಡಿಯೋ ದಂಧೆ – 5 ತಿಂಗಳಲ್ಲಿ ಕುಂದ್ರಾ ಸಂಪಾದಿಸಿದ್ದು ಕೋಟಿ ಕೋಟಿ..!