ಅಶ್ಲೀಲ ವಿಡಿಯೋ ದಂಧೆ – 5 ತಿಂಗಳಲ್ಲಿ ಕುಂದ್ರಾ ಸಂಪಾದಿಸಿದ್ದು ಕೋಟಿ ಕೋಟಿ..!
ಮುಂಬೈ: ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, 14 ದಿನಗಳ ವರೆಗೂ ಮತ್ತೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.. ಆರಂಭದಿಂದಲೂ ಪ್ರಕರಣದಲ್ಲಿ ಹೊಸ ಹೊಸ ಸ್ಪೋಟಕ ವಿಚಾರಗಳು ಬಹಿರಂಗವಾಗ್ತಲೇ ಇದೆ.. ಇದೀಗ ಮತ್ತೊಂದು ಶಾಕಿಂಗ್ ವಿಚಾರ ಬಹಿರಂಗವಾಗಿದೆ..
ರಾಜ್ ಕುಂದ್ರಾ ಅನ್ನು ಬಂಧಿಸಿರುವ ಮುಂಬೈ ಪೊಲೀಸರು ಕುಂದ್ರಾರ ಬ್ಯಾಂಕ್ ಖಾತೆಗಳನ್ನು ಸಹ ಸೀಝ್ ಮಾಡಿದ್ದು ಅವುಗಳ ತನಿಖೆ ನಡೆಸಲೆಂದು ವಿಶೇಷ ಆಡಿಟರ್ ಅನ್ನು ನೇಮಿಸಿಕೊಂಡಿದ್ದಾರೆ. ವಿಶೇಷ ಆಡಿಟರ್ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ರಾಜ್ ಕುಂದ್ರಾ, ಅಶ್ಲೀಲ ವಿಡಿಯೋಗಳ ಮೂಲಕ ಕೇವಲ ಐದೇ ತಿಂಗಳಲ್ಲಿ 1.17 ಕೋಟಿ ರು. ಹಣ ಸಂಪಾದನೆ ಮಾಡಿದ್ದರಂತೆ. ಕಳೆದ ವರ್ಷ ಆಗಸ್ಟ್‌ನಿಂದ ಡಿಸೆಂಬರ್ ತಿಂಗಳಲ್ಲಿ ಭಾರಿ ದೊಡ್ಡ ಮೊತ್ತವನ್ನೇ ಕುಂದ್ರಾ ಈ ವಿಡಿಯೋಗಳಿಂದ ಸಂಪಾದನೆ ಮಾಡಿದ್ದಾರೆ.
ಹಣ ತೆತ್ತು ವಿಡಿಯೋ ನೋಡುತ್ತಿದ್ದರು ಕುಂದ್ರಾ ಒಡೆತನದ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ನಲ್ಲಿ ಲಭ್ಯವಿದ್ದು ಲಕ್ಷಾಂತರ ಮಂದಿ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ ಮತ್ತು ಚಂದಾದಾರರು ವಿಡಿಯೋಗಳನ್ನು ನೋಡುತ್ತಿದ್ದರು. ಇದರಿಂದಲೂ ದೊಡ್ಡ ಮೊತ್ತದ ಹಣವನ್ನು ಕುಂದ್ರಾ ಸಂಪಾದನೆ ಮಾಡುತ್ತಿದ್ದರು ಎಂಬ ವಿಚಾರ ತಿಳಿದುಬಂದಿದೆ.
ಇನ್ನೂ ರಾಜ್ ಕುಂದ್ರಾ ಅವರು 34 ಕೋಟಿ ಗಳಿಸುವ ಗುರಿ ಹೊಂದಿದ್ದರು ಎನ್ನಲಾಗಿದೆ.. 2023ರ ವೇಳೆಗೆ 34 ಕೋಟಿ ಲಾಭ ಪಡೆಯುವ ಗುರಿಯನ್ನು ರಾಜ್ ಕುಂದ್ರಾ ಹೊಂದಿದ್ದರು. ಪ್ರತಿದಿನ 6 ರಿಂದ 8 ಲಕ್ಷ ಹಣವನ್ನು ಕುಂದ್ರಾ ಗಳಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
BIGGBOSS 8 : ತನ್ನ ಮುಖವಾಡ ಕಳಚಿದ ಅರವಿಂದ್..!
ಅಶ್ಲೀಲ ವಿಡಿಯೋ ನಿರ್ಮಾಣ – ಪೂನಂ , ಶರ್ಲಿನ್ ಗೆ ನಿರೀಕ್ಷಣಾ ಜಾಮೀನು..!
ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ದಂಧೆ – “ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ಕೊಡುವುದಕ್ಕೆ ಆಗಲ್ಲ”..!