BIGGBOSS 8 : ತನ್ನ ಮುಖವಾಡ ಕಳಚಿದ ಅರವಿಂದ್..! ‘
ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ಪರ್ಧಿಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ.. ಮನೆಯಲ್ಲಿ ಆರಂಭದಿಂದಲೂ ಒಂದೇ ರೀತಿಯಲ್ಲೇ ಇರುವ ಅರವಿಂದ್ , ಈ ವಿಚಾರಕ್ಕೆ ಸ್ಪರ್ಧಿಗಳ , ಕಿಚ್ಚ ಸುದೀಪ್ ಅವರ ಮೆಚ್ಚುಗೆಯನ್ನೂ ಕೂಡ ಗಳಿಸಿದ್ದಾರೆ.. ಆದ್ರೆ ಇದೀಗ ಅವರೇ ತಾವು ಮುಖವಾಡ ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ..
ಹೌದು..ಗಾರ್ಡನ್ ಏರಿಯಾದಲ್ಲಿ ಶುಭಾ ಪೂಂಜಾ, ಮಂಜು, ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಈ ವೇಳೆ ಶುಭಾ ಮಂಜುಗೆ ನೀನು ಗೋಂಗ್ರು ಕಪ್ಪೆ ತರ ಇದ್ಯಾ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನಮ್ಮ ಊರಿನಲ್ಲಿ ಅದನ್ನು ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ ಎಂದು ಹೇಳಿತ್ತಾರೆ. ಈ ವೇಳೆ ಸ್ವಿಮಿಂಗ್ ಪೂಲ್‍ನಲ್ಲಿ ಈಜುತ್ತಿದ್ದ ಅರವಿಂದ್‍ಗೆ ಶುಭಾ, ಇಲ್ಲಿ ನೋಡು ಅರವಿಂದ್ ನಾನು ಏನಾದರೂ ಹೇಳಿದರೆ ನಮ್ಮ ಊರಿನಲ್ಲಿ ಹೀಗೆ, ಹಾಗೆ ಅಂತಾಳೆ ಎಂದು ಕಂಪ್ಲೇಂಟ್ ಮಾಡುತ್ತಾರೆ. ನಿಜವಾಗಿಯೂ ನಮ್ಮ ಕಡೆ ದಪ್ಪಗಿರುವ ಕಪ್ಪೆಗೆ ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ. ಸರಿ ಕಪ್ಪೆ ಇನ್ನೂ ಚಿಕ್ಕದಾಗಿರುವಾಗ ಅದಕ್ಕೆ ಏನೆಂದು ಕರೆಯುತ್ತಾರೆ ಎಂದು ದಿವ್ಯಾ ಉರುಡುಗ ಮಂಜುಗೆ ಕೇಳುತ್ತಾರೆ.
ಇದಕ್ಕೆ ಮಂಜು ನಮ್ಮ ಕಡೆ ಆ ಕಪ್ಪೆಗೆ ದಿವ್ಯಾ ಉರುಡುಗ ಎಂದು ಕರೆಯುತ್ತೇವೆ ಎನ್ನುತ್ತಾರೆ. ಈ ವೇಳೆ ಅರವಿಂದ್ ಚಪ್ಪಾಳೆ ತಟ್ಟುತ್ತಾ ನಗುತ್ತಾರೆ. ಆಗ ದಿವ್ಯಾ ಉರುಡುಗ ನನ್ನನ್ನು ಕಪ್ಪೆ ಅಂದಿದ್ದಕ್ಕೆ ಸೆಲೆಬ್ರೇಟ್ ಮಾಡುತ್ತಿದ್ದಾರಾ ಎಂದಿದ್ದಾರೆ. ಬಳಿಕ ಮಂಜು, ಸತ್ಯ ಹೇಳಿದರೆ ನಮ್ಮ ಹುಡುಗ ತುಂಬಾ ಎಕ್ಸೈಟ್ ಆಗಿಬಿಡುತ್ತಾನೆ. ಸತ್ಯ ಅವನ ಮನಸ್ಸಿನಲ್ಲಿಯೂ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಅವನು ಎಷ್ಟು ದಿನ ಅಂತ ಕಂಟ್ರೋಲ್ ಮಾಡುತ್ತಾನೆ. 107 ದಿನಗಳಲ್ಲಿ ಇಷ್ಟು ಯಾವತ್ತು ಅರವಿಂದ್ ನಕ್ಕಿರಲಿಲ್ಲ ಎಂದು ಮಂಜು ಹೇಳುತ್ತಾರೆ.
ಈ ವೇಳೆ ಅರವಿಂದ್ ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ ಎಂದು ಹೇಳುತ್ತಾರೆ. ಈ ವೇಳೆ ಎಲ್ಲರೂ ಜೋರಾಗಿ ನಗುತ್ತಾರೆ.. ಅವರ ಜೊತೆಗೆ ದಿವ್ಯಾ ಶಾಕ್ ಆಗಿ ನಗುತ್ತಾರೆ. ನಂತರ ಮಂಜು ನೀನು ಕೆ ಎಂದು ಕರೆಯುವುದು ಕಪ್ಪೆ ಅಂತ ನಾ, ಅಯ್ಯೋ ನನಗೆ ಇಷ್ಟು ದಿನ ಗೊತ್ತೆ ಆಗಲಿಲ್ವಾಲ್ಲ, ಓ’ಕೆ’ ಕಪ್ಪೆ ಎಂದು ದಿವ್ಯಾ ಅವರನ್ನು ಆಡಿಕೊಳ್ತಾರೆ..