“ನಿಮಗೆ ಒಳ್ಳೆಯದಾಗಲಿ ಮಮಾ” ನೂತನ ಸಿಎಂ ಬೊಮ್ಮಾಯಿಗೆ ಕಿಚ್ಚನ ಅಭಿನಂದನೆ..!
ಬೆಂಗಳೂರು : ಸಿಎಂ ಬಿ ಎಸ್ ಯಡಿಯೂರಪ್ಪನವರು ಸಿಎಂ ಸ್ತಾನಕ್ಕೆ ರಾಜೀನಾಮೆ ನೀಡಿದ ಬಳಿಕ , ಈ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿಗೆ ಅನೇಕ ರಾಜಕೀಯ ಮುಖಂಡರು , ಗಣ್ಯರು , ಪ್ರಧಾನಿ ಮೋದಿ ಕೂಡ ಶುಭಾಷಯಗಳನ್ನ ತಿಳಿಸಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ನೂತನ ಸಿಎಂ ಬೊಮ್ಮಾಯಿಗೆ ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ‘ಸರಳತೆಯನ್ನು ನೋಡಿ ಬೆಳೆದವನು ನಾನು. ನನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅವರು ನನಗೆ ವೈಯಕ್ತಿಕವಾಗಿ ನನಗೆ ದೊಡ್ಡ ಬೆಂಬಲ ನೀಡಿದ್ದಾರೆ. ನಿಮಗೆ ಒಳ್ಳೆಯದಾಗಲಿ ಮಮಾ’ ಎಂದು ಹೇಳಿದ್ದಾರೆ.
‘ಗೌಳಿ’ಯಲ್ಲಿ ಶ್ರೀನಗರ ಕಿಟ್ಟಿಗೆ ನಾಯಕಿಯಾದ ಪಾವನಾ ಗೌಡ..!
ಇನ್ನೂ ಕಿಚ್ಚ ಸುದೀಪ್ ಅವರು ಸದ್ಯ ಬಹುನಿರೀಕ್ಷೆಯ ವಿಕ್ರಾಂತ್ ರೋಣದಲ್ಲಿ ಬ್ಯುಸಿಯಾಗಿದ್ದಾರೆ.. ಅವರ ಅಭಿನಯದ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಜೊತೆಗೆ ವಿಕ್ರಾಂತ್ ರೋಣ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗ್ತಿದೆ.. ಅಲ್ಲದೇ ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪೈಕಿ ಟಾಪ್ ಸ್ತಾನದಲ್ಲಿ ವಿಕ್ರಾಂತ್ ರೋಣ ಟ್ರೆಂಡ್ ಆಗ್ತಾ ಇದೆ.. ಕೋಟಿಗೊಬ್ಬ-3 ಬಿಡುಗಡೆ ದಿನಾಂಕ ಸದ್ಯದಲ್ಲೇ ಬಹಿರಂಗವಾಗಲಿದೆ. ಇನ್ನು ವಿಕ್ರಾಂತ್ ರೋಣ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಇತ್ತೀಚಿಗಷ್ಟೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣ ಸಿನಿಮಾದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.