‘ಗೌಳಿ’ಯಲ್ಲಿ ಶ್ರೀನಗರ ಕಿಟ್ಟಿಗೆ ನಾಯಕಿಯಾದ ಪಾವನಾ ಗೌಡ..!
ಶ್ರೀನಗರ ಕಿಟ್ಟಿ ಅವರು ಸಖತ್ ಟೆರರ್ ಆಗಿ ಕಾಣಿಸಿಕೊಳ್ತಿರುವ , ಪಕ್ಕಾ ಕಮರ್ಷಿಯಲ್ , ಥ್ರಿಲ್ಲರ್ , ಆಕ್ಷನ್ ಸಿನಿಮಾವಾಗಿರು ಗೌಳಿ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ.
ಶ್ರೀನಗರ ಕಿಟ್ಟಿ ನಟನೆಯ ಸೂರ ನಿರ್ದೇಶನದ ಬಹುನಿರೀಕ್ಷೆಯ ಗೌಳಿ ಚಿತ್ರದಲ್ಲಿ ಪಾವನಾ ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ಗೌಳಿ ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿಯ ಟೆರರ್ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದರು.
ಸಿನಿಮಾ ಆಗಸ್ಟ್ ನಲ್ಲಿ ಸೆಟ್ಟೇರಲಿದೆ ಎನ್ನಲಾಗ್ತಿದೆ. ಈ ಸಿನಿಮಾಗೆ ರಘು ಸಿಂಗಮ್ ಬಂಡವಾಳ ಹೂಡುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪಾವನಗೌಡ ನಾಯಕಿಯಾಗಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ನೀಡಿದ್ದಾರೆ.
ಅಶ್ಲೀಲ ವಿಡಿಯೋ ನಿರ್ಮಾಣ – ಪೂನಂ , ಶರ್ಲಿನ್ ಗೆ ನಿರೀಕ್ಷಣಾ ಜಾಮೀನು..!