ರಿಯಲ್ ಹೀರೋಗೆ 48ನೇ ವರ್ಷದ ಹುಟ್ಟುಹಬ್ಬ – ಅಭಿಮಾನಿಗಳ ಸಂಭ್ರಮ..!

1 min read
Sonu soodu

ರಿಯಲ್ ಹೀರೋಗೆ 48ನೇ ವರ್ಷದ ಹುಟ್ಟುಹಬ್ಬ – ಅಭಿಮಾನಿಗಳ ಸಂಭ್ರಮ..!

ಸೋನು ಸೂದ್… ಈ ಹೆಸರು ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತೇ ಗೊತ್ತಿರುತ್ತೆ.. ಪ್ರತಿಯೊಬ್ಬರ ಮನದಲ್ಲೂ ಸೋನು ಸೂದ್ ಅವರ ರಿಯಲ್ ಹೀರೋ ಇಮೇಜ್ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಸೋನು ಸೂದ್ ಅಭಿಮಾನಿಗಳು.. ಕೋಟ್ಯಾನು ಕೋಟಿ ಜನರ ಆರಾಧ್ಯ ದೈವವಾಗಿದ್ದಾರೆ ಸೋನು ಸೂದ್.. ಸೋನು ಸೂದ್ ಅಂದ್ರೆ ಬರಿ ಹೆಸರಲ್ಲ ಬಾಲಿವುಡ್ ಹೀರೋ ಮಾತ್ರ ಅಲ್ಲ. ಖಳನಾಯಕನಲ್ಲ ಬರಿ ಸೆಲೆಬ್ರಿಟಿ ಅಲ್ಲ. ಸೋನು ಜನರ ಪಾಲಿನ ರಕ್ಷಕ.. ಸಹೃದಯಿ , ಯುವಕರಿಗೆ ಮಾದರಿ. ಸೋನು ಸೂದ್ ಈ ಹೆಸರು ಕೇಳಿದ್ರೆ ಯಾರಾದ್ರೂ ಆಗ್ಲಿ ಬಾಲಿವುಡ್ ನಟ ಅನ್ನಲ್ಲ.. ಹಾ ಅವರೊಬ್ರು ಸೆಲೆಬ್ರಿಟಿ ಅನ್ನಲ್ಲ.. ರಿಯಲ್ ಹೀರೋ ಅಂತಾರೆ 2021ರಲ್ಲಿ ಸೋನು ಪರ್ವ ಹೇಗಿದೆ ಅಂದ್ರೆ ಚಿಕ್ಕ ಮಕ್ಕಳನ್ನೇ ಹೋಗಿ ಕೇಳಿ ಆ ಹೆಸರಿನ ಪವರ್ ಬಗ್ಗೆ ಹಾಡಿ ಹೊಗಳುತ್ತಾರೆ..  ಆ ಹೆಸರು ಹೇಳ್ತಿದ್ದಂತೆ ಹಲವರು ಪಕೈ ಮುಗಿದು ನಮಸ್ಕರಿಸುತ್ತಾರೆ..   

ಸಾಂಕ್ರಾಮಿಕ ಸಮಯದ ರಿಯಲ್ ಹೀರೋ ಸೋನು ಸೂದ್. ಸೋನು ಸೂದ್ ಅವರು ಎದುರು ಬಂದರೆ ಕೆಲವರು ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ.. ವಿಮಾನ ಮೇಲೆ ಸೋನು ಭಾವ ಚಿತ್ರ ಹಾಕಿ ರಿಯಲ್ ಹೀರೋ ಅನ್ನೋ ಟೈಟಲ್ ಕೊಟ್ಟು ಅವರನ್ನ ಶ್ಲಾಘಿಸಲಾಗಿದೆ. ಅಷ್ಟೇ ಅಲ್ಲ ಇಡೀ ಭಾರತವೇ ಕೊಂಡಾಡುತ್ತಿರುವ ರಿಯಲ್ ಹೀರೋ ಆಗಿದ್ದಾರೆ ‘ಅರುಂಧತಿ’ಯ ಪಶುಪತಿ.. 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಸೋನು ಸೂದ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೋನ್ ಸೂದ್ ಗೆ ವಿಶ್ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ರೀಲ್ ನಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದ ಸೋನು ಕಳೆದ ವರ್ಷ ಕೊರೊನಾ ಸಮಯದಿಂದ ರಿಯಲ್ ಹೀರೋ ಆಗಿ ಬದಲಾಗಿದ್ದಾರೆ.

ಕೊರೊನಾ ಅನ್ನುವ ಹೆಮ್ಮಾರಿ ಚೀನಾದಿಂದ ಭಾರತಕ್ಕೆ ಒಕ್ಕರಿಸಿ ಜನರ ಬದುಕನ್ನ ಮೂರಾಬಟ್ಟೆ ಮಾಡಿದೆ.. ಅನೇಕರ ಜೀವ ಹೋಗಿದೆ.. ಬಡವರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.. ಈ  ಹೀಗೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ಪಾಲಿಗೆ ದೇವರಾಗಿ ಬಂದಿದ್ದು, ಸೋನು ಸೂದ್.. ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಸೋನು ವಲಸೆ ಕಾರ್ಮಿಕರಿಗೆ ಊರುಗಳಿಗೆ ತೆರಳಲು ನೆರವಾಗುವುದರಿಂದ ಹಿಡಿದು, ಬಡ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿಗೆ ಸಹಾಯ ಮಾಡುವುದು , ರೈತರಿಗೆ ಟ್ರ್ಯಾಕ್ಟರ್ ಕೊಡುವುದರಿಂದ ಹಿಡಿದು , ಶಿಕ್ಷಣಕ್ಕೆ ಸಹಾಯ , ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹೋರಾಡುತ್ತಿದ್ದವರ ಪಾಲಿಗೆ ದೇವರಾಗಿ ಅವರಿಗೆ ಸಹಾಯ ಮಾಡಿ , ಕೊರೊನಾದಿಂದ ಎದುರಾಗಿದ್ದ ಆಕ್ಸಿಜನ್ ಸಮಸ್ಯೆ ನೀಗಿಸಲು ಕಷ್ಟ ಪಟ್ಟು , ಆಕ್ಸಿಜನ್ ಸಪ್ಲೈ ಮಾಡಿ , ಬೆಡ್ ಕೊಡಿಸುವ ವವರೆಗೂ ಲೆಕ್ಕವಿಲ್ಲದಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ, ಮಾಡುತ್ತಿದ್ದಾರೆ ಮುಂದೆಯೂ ಮಾಡಲಿದ್ದಾರೆ ನಮ್ಮ ಹೆಮ್ಮೆಯ ಸೋನು ಸೂದ್.. ಹೀಗೆ ಅವರ ಮಹಾನ್ ಕೆಲಸಗಳ ಜರ್ನಿ ಒಂದೂವರೆ ವರ್ಷದಿಂದ ನಿರಂತರವಾಗಿ ಸಾಗುತ್ತಾ ಬಂದಿದೆ.

‘ಸೋನು ಸೂದ್’ ಗೆ ಹುಟ್ಟುಹಬ್ಬದ ಸಂಭ್ರಮ – ‘ರೀಲ್’ ಜಗತ್ತಿನ ಖಳನಾಯಕ ‘ರಿಯಲ್ ಹೀರೋ’ ಆದ ವರೆಗಿನ ಜರ್ನಿಯ ಸಂಪೂರ್ಣ ಮಾಹಿತಿ..!

ಮಾಧ್ಯಮಗಳ ವಿರುದ್ಧ ತಿರುಗಿಬಿದ್ದ ಶಿಲ್ಪಾ ಶೆಟ್ಟಿ  – ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟಿ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd