‘ಸೋನು ಸೂದ್’ ಗೆ ಹುಟ್ಟುಹಬ್ಬದ ಸಂಭ್ರಮ – ‘ರೀಲ್’ ಜಗತ್ತಿನ ಖಳನಾಯಕ ‘ರಿಯಲ್ ಹೀರೋ’ ಆದ ವರೆಗಿನ ಜರ್ನಿಯ ಸಂಪೂರ್ಣ ಮಾಹಿತಿ..!
ಕೊರೊನಾ ವಾರಿಯರ್ಸ್ ಗೆ ತಮ್ಮ ಹೋಟೆಲ್ ಬಾಗಿಲು ತೆರೆದ ಸೋನು
ಹಸಿದವರ ಪಾಲಿನ ಅನ್ನದಾತರಾದ ಸೋನು
ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಸ್ಕಾಲರ್ ಶಿಪ್..!
ಸೋನು ಸೂದ್… ಈ ಹೆಸರು ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತೇ ಗೊತ್ತಿರುತ್ತೆ.. ಪ್ರತಿಯೊಬ್ಬರ ಮನದಲ್ಲೂ ಸೋನು ಸೂದ್ ಅವರ ರಿಯಲ್ ಹೀರೋ ಇಮೇಜ್ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಸೋನು ಸೂದ್ ಅಭಿಮಾನಿಗಳು.. ಕೋಟ್ಯಾನು ಕೋಟಿ ಜನರ ಆರಾಧ್ಯ ದೈವವಾಗಿದ್ದಾರೆ ಸೋನು ಸೂದ್..
ಸೋನು ಸೂದ್ ಅಂದ್ರೆ ಬರಿ ಹೆಸರಲ್ಲ ಬಾಲಿವುಡ್ ಹೀರೋ ಮಾತ್ರ ಅಲ್ಲ. ಖಳನಾಯಕನಲ್ಲ ಬರಿ ಸೆಲೆಬ್ರಿಟಿ ಅಲ್ಲ. ಸೋನು ಜನರ ಪಾಲಿನ ರಕ್ಷಕ.. ಸಹೃದಯಿ , ಯುವಕರಿಗೆ ಮಾದರಿ. ಸೋನು ಸೂದ್ ಈ ಹೆಸರು ಕೇಳಿದ್ರೆ ಯಾರಾದ್ರೂ ಆಗ್ಲಿ ಬಾಲಿವುಡ್ ನಟ ಅನ್ನಲ್ಲ.. ಹಾ ಅವರೊಬ್ರು ಸೆಲೆಬ್ರಿಟಿ ಅನ್ನಲ್ಲ.. ರಿಯಲ್ ಹೀರೋ ಅಂತಾರೆ 2021ರಲ್ಲಿ ಸೋನು ಪರ್ವ ಹೇಗಿದೆ ಅಂದ್ರೆ ಚಿಕ್ಕ ಮಕ್ಕಳನ್ನೇ ಹೋಗಿ ಕೇಳಿ ಆ ಹೆಸರಿನ ಪವರ್ ಬಗ್ಗೆ ಹಾಡಿ ಹೊಗಳುತ್ತಾರೆ.. ಆ ಹೆಸರು ಹೇಳ್ತಿದ್ದಂತೆ ಹಲವರು ಪಕೈ ಮುಗಿದು ನಮಸ್ಕರಿಸುತ್ತಾರೆ..
ಸಾಂಕ್ರಾಮಿಕ ಸಮಯದ ರಿಯಲ್ ಹೀರೋ ಸೋನು ಸೂದ್. ಸೋನು ಸೂದ್ ಅವರು ಎದುರು ಬಂದರೆ ಕೆಲವರು ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ.. ವಿಮಾನ ಮೇಲೆ ಸೋನು ಭಾವ ಚಿತ್ರ ಹಾಕಿ ರಿಯಲ್ ಹೀರೋ ಅನ್ನೋ ಟೈಟಲ್ ಕೊಟ್ಟು ಅವರನ್ನ ಶ್ಲಾಘಿಸಲಾಗಿದೆ. ಅಷ್ಟೇ ಅಲ್ಲ ಇಡೀ ಭಾರತವೇ ಕೊಂಡಾಡುತ್ತಿರುವ ರಿಯಲ್ ಹೀರೋ ಆಗಿದ್ದಾರೆ ‘ಅರುಂಧತಿ’ಯ ಪಶುಪತಿ..
ಕೊರೊನಾ ಅನ್ನುವ ಚೀನಾದಿಂದ ಹೆಮ್ಮಾರಿ ಭಾರತಕ್ಕೆ ಒಕ್ಕರಿಸಿ ಜನರ ಬದುಕನ್ನ ಮೂರಾಬಟ್ಟೆ ಮಾಡಿದೆ.. ಅನೇಕರ ಜೀವ ಹೋಗಿದೆ.. ಬಡವರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.. ಈ ಹೀಗೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ಪಾಲಿಗೆ ದೇವರಾಗಿ ಬಂದಿದ್ದು, ಸೋನು ಸೂದ್.. ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಸೋನು ವಲಸೆ ಕಾರ್ಮಿಕರಿಗೆ ಊರುಗಳಿಗೆ ತೆರಳಲು ನೆರವಾಗುವುದರಿಂದ ಹಿಡಿದು, ಬಡ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿಗೆ ಸಹಾಯ ಮಾಡುವುದು , ರೈತರಿಗೆ ಟ್ರ್ಯಾಕ್ಟರ್ ಕೊಡುವುದರಿಂದ ಹಿಡಿದು , ಶಿಕ್ಷಣಕ್ಕೆ ಸಹಾಯ , ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹೋರಾಡುತ್ತಿದ್ದವರ ಪಾಲಿಗೆ ದೇವರಾಗಿ ಅವರಿಗೆ ಸಹಾಯ ಮಾಡಿ , ಕೊರೊನಾದಿಂದ ಎದುರಾಗಿದ್ದ ಆಕ್ಸಿಜನ್ ಸಮಸ್ಯೆ ನೀಗಿಸಲು ಕಷ್ಟ ಪಟ್ಟು , ಆಕ್ಸಿಜನ್ ಸಪ್ಲೈ ಮಾಡಿ , ಬೆಡ್ ಕೊಡಿಸುವ ವವರೆಗೂ ಲೆಕ್ಕವಿಲ್ಲದಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ, ಮಾಡುತ್ತಿದ್ದಾರೆ ಮುಂದೆಯೂ ಮಾಡಲಿದ್ದಾರೆ ನಮ್ಮ ಹೆಮ್ಮೆಯ ಸೋನು ಸೂದ್.. ಹೀಗೆ ಅವರ ಮಹಾನ್ ಕೆಲಸಗಳ ಜರ್ನಿ ಒಂದೂವರೆ ವರ್ಷದಿಂದ ನಿರಂತರವಾಗಿ ಸಾಗುತ್ತಾ ಬಂದಿದೆ.
ಕೊರೊನಾ ವಾರಿಯರ್ಸ್ ಗೆ ತಮ್ಮ ಹೋಟೆಲ್ ಬಾಗಿಲು ತೆರೆದ ಸೋನು
ಸರ್ಕಾರ ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆ ಮಾಡಿದ ನಂತರ ಜನರು ಸಾಕಷ್ಟು ತೊಂದರೆಗಳನ್ನ ಅನುಭವಿಸುವಂತಾಗಿತ್ತು.. ವೈದ್ಯರು , ಪೊಲೀಸರು ಹಗಲಿರುಳು ಕಷ್ಟ ಪಡುವಂತಾಯಿತು.. ಆಗ ಸೋನು ಸೂದ್ ಅವರು ಮೊದಲಿಗೆ ಸಹಾಯಾಸ್ತ ಚಾಚಿ ಇಡೀ ದೇಶದ ಜನರ ಗಮನ ಸೆಳೆದಿದ್ದರು.. ಹೌದು ಆಗ ಆರೋಗ್ಯ ಕಾರ್ಯಕರ್ತರಿಗೆ ವಾಸ್ತವ್ಯ ಹೂಡುವುದಕ್ಕಾಗಿ ತಮ್ಮ ಮುಂಬೈನ ಜುಹು ಹೋಟೆಲ್ ಗೆ ಆಹ್ವಾನ ನೀಡಿದರು ಸೋನು. ಇಲ್ಲಿಂದಲೇ ಆರಂಭವಾಗಿದ್ದು ಸೋನು ಪರ್ವ.
ಕೇವಲ ಸಹಾಯ ಮಾಡಿ ಅಷ್ಟೇ ಅಲ್ಲ ಸೋನು ತಮ್ಮ ನಡೆ ನುಡಿಯಿಂದಲೂ ಜನರ ಮನ ಗೆದ್ದಿದ್ದಾರೆ.. ಅವರು ಎಷ್ಟು ಸರಳ ಜೀವಿ ಅನ್ನುವುದಕ್ಕೆ ಅನೇಕ ನಿದರ್ಶನಗಳೂ ಇವೆ.. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋನು ವೈದ್ಯರು ಈ ಸಾಂಕ್ರಾಮಿಕದಲ್ಲಿ ಲಕ್ಷಾಂತರ ಜೀವ ಉಳಿಸುದಕ್ಕಾಗಿ ಹಗಲು ರಾತ್ರಿ ಎನ್ನದೇ ಕಷ್ಟ ಪಡುತ್ತಿದ್ದಾರೆ.. ಅಂತವರಿಗೆ ಸಹಾಯ ಮಾಡುವ ಅವಕಾಶ ನನಗೆ ಸಿಕ್ಕಿದೆ. ಕೊರೊನಾ ವಾರಿಯರ್ಸ್ ಗಾಗಿ ನನ್ನ ಹೋಟೆಲ್ ನ ಬಾಗಿಲು ಸದಾ ತೆರೆದಿರುತ್ತೆ. ನಾನು ನನ್ನ ಕೈಲಾದಷ್ಟು ಸಹಾಯ ಮಾಡ್ತೇನೆ ಎಂದಿದ್ದರು..
ಹಸಿದವರ ಪಾಲಿನ ಅನ್ನದಾತರಾದ ಸೋನು
ವೈದ್ಯರಿಗೆ ಸಹಾಯ ಮಾಡಿದ ನಂತರ ಸೋನು ಮುಂದೆ ಹಸಿದವರಿಗೆ ಆಹಾರ ಒದಗಿಸುವವ ಪುಣ್ಯ ಕೆಲಸಕ್ಕೆ ಮುಂದಾದರು.. ಲಾಕ್ ಡೌನ್ ನಿಂದಾಗಿ ಕೂಲಿ ಕಾರ್ಮಿಕರು ತೊಂದರೆ ಅನುಭವಿಸಿದ್ರು.. ಮಕ್ಕಳು ಸೇರಿ ಸಾವಿರಾರು ಜನ ಹೊಟ್ಟೆಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು.. ಈ ವೇಳೆ ಹಸಿದವರ ಪಾಲಿನ ಅನ್ನದಾತರಾದವರು ಸೋನು. ಮುಂಬೈನಲ್ಲಿ ಪ್ರತಿದಿನ ಕನಿಷ್ಠ 45,000 ಜನರಿಗೆ ಆಹಾರವನ್ನು ನೀಡುವ ಉದ್ದೇಶದಿಂದ ಸೋನು ತನ್ನ ದಿವಂಗತ ತಂದೆ ಶಕ್ತಿ ಸಾಗರ್ ಸೂದ್ ಹೆಸರಿನಲ್ಲಿ ಶಕ್ತಿ ಅನ್ನದಾನವನ್ನು ಪ್ರಾರಂಭಿಸಿದರು.
ವಲಸೆ ಕಾರ್ಮಿಕರಿಗೆ ನೆರವಾದ ನಟ
ಕರೋನವೈರಸ್ ಸಾಂಕ್ರಾಮಿಕ ರೋಗ ಹರಡಿದಾಗಿನಿಂದಸಾವಿರಾರು ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಊರುಗಳಿಗೆ ತೆರಳುಲು ಸೋನು ಸಹಾಯ ಮಾಡಿದ್ರು. ಇತರೇ ರಾಜ್ಯಗಳ ನಾಯಕರನ್ನ ಸಂಪರ್ಕಿಸಿ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ತಲುಪಿಸಲು ಸಸೋನು ನೆರವಾದರು. ವಲಸೆ ಕಾರ್ಮಿಕರನ್ನ ಸುರಕ್ಷಿತವಾಗಿ ವಿಮಾನಗಳು , ರೈಲುಗಳು , ಬಸ್ ಗಳ ಮೂಲಕ ಊರುಗಳಿಗೆ ತಲುಪಿಸಲಾಗಿತ್ತು.. ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಭಾರತದಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಲು ಸೋನು ಸೂದ್ ‘ಪ್ರವಾಸಿ ರೋಜಗಾರ್’ ಹೆಸರಿನ ಪ್ಲಾಟ್ ಫಾರ್ಮ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ರು.
ಅಷ್ಟೇ ಅಲ್ಲದೇ ಕೆಲಸ ಒದಗಿಸುವ ಜೊತೆಗೆ ವಾಸ್ತವ್ಯಕ್ಕೂ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು ಸೋನು ಸೂದ್.
ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಸ್ಕಾಲರ್ ಶಿಪ್..!
“ ಹಿಂದೂಸ್ತಾನ್ ಬಡೇಗಾ ತಭೀ , ಜಬ್ ಪಡೇಗಾ ಸಭೀ “ ಎಂಬ ಘೋಷ ವಾಕ್ಯದ ಮೂಲಕ ಎಲ್ಲರೂ ಓದಿದಾಗ ವಿದ್ಯಾವಂತರಾಗಿದ್ದಾಗ ಮಾತ್ರವೇ ಹಿಂದೂಸ್ತಾನ ಅಭಿವೃದ್ಧಿಯಾಗುವುದು ಎಂದು ಶಿಕ್ಷಣದ ಮಹತ್ವ ಸಾರಿದ್ದರು ಸೋನು.. ತನ್ನ ತಾಯಿ ಪ್ರೊ. ಸರೋಜ್ ಸೂದ್ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಸ್ಕಾಲರ್ ಶಿಪ್ ನೀಡುವ ಯೋಜನೆ ತಂದರು ಸೋನು.. ಬೆಳೆಯುವ ಹಾದಿಯಲ್ಲಿ ಆರ್ಥಿಕ ತೊಂದರೆ ಯಾವತ್ತೂ ಕೂಡ ಸವಾಲಾಗಬಾರದು. scholarships@sonusood.me ಗೆ ಡೀಟೇಲ್ಸ್ ಕಳುಹಿಸಿ 10 ದಿನಗಳ ಒಳಗಡೆ ಅರ್ಹರನ್ನ ಸಂಪರ್ಕಿಸುವುದಾಗಿ ಭರವಸೆ ನೀಡಿದ್ರು.
IAS ಆಕಾಂಕ್ಷಿಗಳಿಗೆ ನೆರವು
ಸೋನು ಅವರು ತಮ್ಮ ತಾಯಿಯ ಪುಣ್ಯ ಸ್ಮರಣೆಯ ಪ್ರಯುಕ್ತ IAS ಆಕಾಂಕ್ಷಿಗಳಿಗೆ ನೆರವಾಗುವುದಾಗಿಯೂ ಘೋಷಣೆ ಮಾಡಿದರು.
ಪ್ರೊ. ಸರೋಜ್ ಸೂದ್ ಸ್ಕಾಲರ್ ಶಿಪ್ ನೀಡಿ ಸಹಾಯ ಮಾಡುವ ಮೂಲಕ IAS ಆಕಾಂಕ್ಷಿಗಳು ತಮ್ಮ ಗುರಿ ಮುಟ್ಟಲು ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ರು.
ಸಣ್ಣ ಉದ್ಯಮಿಗಳಿಗೆ – ಉಚಿತ ಈ ರಿಕ್ಷಾ
ಒದಗಿಸಿದ ಸೋನು ಸಣ್ಣ ಉದ್ಯಮಿಗಳಿಗೆ ಸ್ವಾವಲಂಭನೆಯಿಂದ ಬದುಕಲು ನೆರವಾದ ಸೋನು ಉಚಿತ ಈ ರಿಕ್ಷಾಗಳನ್ನೂ ಕೂಡ ನೀಡಿದ್ದರು..
ಬಡ ವಿದ್ಯಾರ್ಥಿಗಳಿಗೆ ಉಚಿ ಮೊಬೈಲ್..!
ಲಾಕ್ ಡೌನ್ ನಲ್ಲಿ ಆನ್ ಲೈನ್ ಕ್ಲಾಸ್ ಗಳಲ್ಲಿ ಪಾಠ ಕೇಳುವುದಕ್ಕೆ ಸ್ಮಾರ್ಟ್ ಫೋನ್ ಗಳು ಇಲ್ಲದೇ ಎಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ರು.. ಆದ್ರೆ ಆಗ ಸೋನು ಅನೇಕರಿಗೆ ಉಚಿತವಾಗಿ ಮೊಬೈಲ್ ನೀಡಿ ನೆರವಾದರು.
ವಿದೇಶದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾದ ಸೋನು
ವಿದೇಶಗಳಲ್ಲಿ ಸಿಲುಕಿ ಪರದಾಡ್ತಿದ್ದ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ಬರುವ ವ್ಯವಸ್ಥೆ ಮಾಡಿದ್ದರು. ಕಿರ್ಗಿಸ್ತಾನ್, ಕಝಾಕಿಸ್ತಾನ್, ತಜಕಿಸ್ತಾನ್, ಜಾರ್ಜಿಯಾ, ಫಿಲಿಪೈನ್ಸ್ , ರಷ್ಯಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ನೆರವಾಗಿ ಅವರೆಲ್ಲರಿಗಾಗಿ ವಿಮಾನದ ವ್ಯವಸ್ಥೆಯನ್ನೂ ಮಾಡಿಸಿದ್ದರು.
ಅದ್ರಲ್ಲೂ 2ನೇ ಅಲೆ ವೇಳೆ ಬೆಡ್, ಆಕ್ಸಿಜನ್ ಕೊರತೆ ಎದುರಾಗಿದ್ದಾಗ ಸೋನು ಅಗತ್ಯವಿರುವ ಎಲ್ಲರಿಗೂ ಆಸ್ಪತ್ರೆಯ ಹಾಸಿಗೆಗಳು, ಔಷಧಗಳು, ಆಮ್ಲಜನಕವನ್ನು ಒದಗಿಸಲು ಅಭಿಯಾನವನ್ನೇ ಆರಂಭಿಸಿದ್ದರು. ಅಗತ್ಯ ವಿರುವಂತಹವರ ಮನೆ ಬಾಗಿಲಿಗೆ ಆಕ್ಸಿಜನ್ ಪೂರೈಕೆ ಮಾಡಿ ಮಾದರಿಯಾಗಿದ್ದರು ಸೋನು.
ಕರ್ನಾಟಕ , ಬೆಂಗಳೂರು , ತಮಿಳುನಾಡು ಹೀಗೆ ಬೇರೆ ರಾಜ್ಯಗಳಿಗೂ ಭಾಷೆ , ನೆಲದ ಬೇಧವಿಲ್ಲದೆ ಸಹಾಯಾಸ್ತ ಚಾಚಿರುವ ಸೋನು, ಜನ ಯಾರೇ ಇರಲಿ , ಎಲ್ಲೇ ಇರಲಿ , ಶ್ರೀಮಂತರಿರಲಿ , ಬಡವರಿರಲಿ , ನೆರವಿನ ನಿರೀಕ್ಷೆಯಲ್ಲಿ ಬಂದವರು ಎಂಥವರೇ ಇರಲಿ ಅವರಿಗೆ ಆಸರರೆಯಾಗುತ್ತಾರೆ.. ಹೀಗಾಗಿಯೇ ಸೋನು ಇಂದು ಭಾರತೀಯರ ಪಾಲಿನ ರಿಯಲ್ ಹೀರೋ ಆಗಿದ್ದಾರೆ.. ಬಡವರ ಪಾಲಿನ ದೇವರಾಗಿರುವ ರಿಯಲ್ ಹೀರೋ ಸೋನು ಅವರಿಗೆ ಹುಟ್ಟುಹಬ್ಬದ ಶುಬಾಷಯಗಳು ಹ್ಯಾಪಿ ಬರ್ತ್ ಡೇ ರಿಯಲ್ ಸೋನು..