ತೆಲುಗು ಸಂದರ್ಶನದಲ್ಲಿ ‘ರಾಖಿ ಭಾಯ್’ ಕೊಂಡಾಡಿದ ವಸಿಷ್ಠ ಸಿಂಹ..!
ಸ್ಯಾಮಡಲ್ ವುಡ್ ಟಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ಕನ್ನಡದ ಕಂಚಿ ಕಂಠದ ನಟ ವಸಿಷ್ಠ ಸಿಂಹ ತೆಲುಗಿನ ಸಂದರ್ಶನದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರನ್ನ ಹಾಡಿ ಹೊಗಳಿದ್ದಾರೆ. ನಟ ವಿಕ್ಟರಿ ವೆಂಕಟೇಶ್ ಅಭಿನಯದ ‘ನಾರಪ್ಪ’ ಸಿನಿಮಾದದಲ್ಲಿ ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವಸಿಷ್ಠನ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ ವಸಿಷ್ಠ ಸಿಂಹ. ಆದ್ರೆ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಟ ಯಶ್ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ತೆಲುಗಿನಲ್ಲೂ ಬ್ಯುಸಿಯಾಗಿರುವ ವಸಿಷ್ಠ ಬಹುನಿರೀಕ್ಷೆಯ KGF 2 ಸಿನಿಮಾದಲ್ಲೂ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.. ಹೀಗಾಗಿ ಸಹವಾಗಿ ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಶ್ನೆ ಕೇಳೋದು ಸಹಜ.. ಅದೇ ರೀತಿ KGF 2 ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವಾಗ ಕೆಜಿಎಫ್ ಚಾಪ್ಟರ್ 1 ಹತ್ತು ರೂಪಾಯಿ ಆದರೆ, ಚಾಪ್ಟರ್ 2 ನೂರು ರೂಪಾಯಿ ಅಥವಾ ಸಾವಿರ ರೂಪಾಯಿ ಇದ್ದಂತೆ. ಈಗ ಬೇರೆ ಏನೂ ಹೇಳಲು ಸಾಧ್ಯವಿಲ್ಲ. ಇಡೀ ಭಾರತ ಕಾಯುತ್ತಿದೆ. ದೊಡ್ಡ ಸರ್ಪ್ರೈಸ್ ಅದು. ಕಾದು ಸಿನಿಮಾ ನೋಡಿ ಎಂದಿದ್ದಾರೆ.
ಮಾಧ್ಯಮಗಳ ವಿರುದ್ಧ ತಿರುಗಿಬಿದ್ದ ಶಿಲ್ಪಾ ಶೆಟ್ಟಿ – ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟಿ
ಇದೇ ವೇಳೆ ಯಶ್ ಬಗ್ಗೆ ಮಾತನಾಡಿ , ನನಗೆ ಮೊದಲು ಬ್ರೇಕ್ ಸಿಕ್ಕ ಸಿನಿಮಾ ರಾಜಾಹುಲಿ. ಅದರಲ್ಲೂ ಯಶ್ ನಾಯಕ. ಅಲ್ಲಿಂದ ಯಶ್ ಅವರನ್ನು ನೋಡ್ತಿದ್ದೇನೆ. ಅವರಲ್ಲಿ ನಾನು ಯಾವ ವ್ಯತ್ಯಾಸ ನೋಡಿಲ್ಲ. ಪ್ರತಿಯೊಂದು ಸಿನಿಮಾಗೂ ಶ್ರಮ ಹಾಕ್ತಾರೆ. 5 ವರ್ಷದ ಹಿಂದೆ ಹೇಳಿದ ಮಾತು ಈಗ ನಿಜ ಆಗ್ತಿದೆ ಎನ್ನುವ ಮಟ್ಟಕ್ಕೆ ಕೆಲಸ ಮಾಡ್ತಾರೆ. ಅವರೊಬ್ಬ ಗಟ್ಟಿ ಮನುಷ್ಯ ಎಂದು ತೆಲುಗು ನಾಡಲ್ಲಿ ರಾಖಿ ಭಾಯ್ ಅವರನ್ನ ಕೊಂಡಾಡಿದ್ದಾರೆ.
‘ಸೋನು ಸೂದ್’ ಗೆ ಹುಟ್ಟುಹಬ್ಬದ ಸಂಭ್ರಮ – ‘ರೀಲ್’ ಜಗತ್ತಿನ ಖಳನಾಯಕ ‘ರಿಯಲ್ ಹೀರೋ’ ಆದ ವರೆಗಿನ ಜರ್ನಿಯ ಸಂಪೂರ್ಣ ಮಾಹಿತಿ..!
ಈ ವರ್ಷವೂ ರಿಲೀಸ್ ಆಗಲ್ಲಾ ರಾಧೆಶ್ಯಾಮ್ – ಹೊಸ ಬಿಡುಗಡೆ ದಿನಾಂಕ ಘೋಷಣೆ