BIGGBOSS 8 – ಡೇಂಜರ್ ಝೋನ್ ನಲ್ಲಿ ಐವರು ಸದಸ್ಯರು… 5ನೇ ವಾರ ಮನೆಯಿಂದ ಆಚೆ ಹೋಗೋದ್ಯಾರು..!
ಬಿಗ್ ಬಾಸ್ 8 ನೇ ಆವೃತ್ತಿಯ 4 ವಾರುಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 5ನೇ ವಾರಕ್ಕೆ ಕಾಲಿಟ್ಟಿದೆ. 5 ನೇ ವಾರ ಎಲಿಮೇಶನ್ ಗೆ ನಾಮಿನೇಶನ್ ಪ್ರಕ್ರಿಯೆಯೂ ಮುಗಿದಿದ್ದು, 5 ನೇ ಮನೆಯಿಂದ ಆಚೆ ಯಾರು ಹೋಗಲಿದ್ದಾರೆ ಎಂಬ ಆತಂಕ ಗೊಂದಲಗಳು ಮನೆಮಂದಿಯನ್ನ ಕಾಡುತ್ತಿದೆ.
ಅಂದ್ಹಾಗೆ ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ ಚೆನ್ನಪ್ಪ, 3ನೇ ವಾರ ಗೀತಾ ಭಾರತಿ ಭಟ್, 4ನೇ ವಾರ ಚಂದ್ರಕಲಾ ಮೋಹನ್ ಅವರು ಹೊರಗಡೆ ಹೋಗಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಅಂದ್ರೆ ಮನೆಯಿಂದ ಇಲ್ಲಿಯವರೆಗೂ ಹೊರ ಹೋಗಿರುವ 4 ಸ್ಪರ್ಧಿಗಳು ಸಹ ಮಹಿಳೆಯರೇ ಇದೇ ವಿಚಾರಕ್ಕೆ ಇತ್ತೀಚೆಗೆ ಶುಭಾ ಹಾಗೂ ನಿಧಿ ಮಾತುಕತೆ ವೇಳೆ ಬೇಸರವನ್ನೂ ಹೊರಹಾಕಿದ್ದರೂ.
ಈ ಬಾರಿ ಪುರುಷ ಸ್ಪರ್ಧಿ ಹೊರಹೋಗ್ತಾರೋ ಅಥವ ಮಹಿಳಾ ಸ್ಪರ್ಧಿ ಆಚೆ ಹೋಗ್ತಾರಾ ಕಾದು ನೋಡ್ಬೇಕು. ಅಂದ್ಹಾಗೆ 5 ನೇ ವಾರ ನಾಮಿನೇಟ್ ಆಗಿರುವ ಸ್ಪರ್ಧಿಗಳು…
ನಿಧಿ ಸುಬ್ಬಯ್ಯ , ಅರವಿಂದ್, ಶುಭಾ ಪೂಂಜಾ, ಶಂಕರ್ ಅಶ್ವತ್ಥ್, ಪ್ರಶಾಂತ್ ಸಂಬರಗಿ
ಇನ್ನೂ ದಿವ್ಯಾ ಸುರೇಶ್ ಅವರನ್ನು ಈ ವಾರದ ಕ್ಯಾಪ್ಟನ್ ಆಗಿರುವ ವಿಶ್ವನಾಥ್ ನಾಮಿನೇಶನ್ ತೂಗುಗತ್ತಿಯಿಂದ ಬಚಾವ್ ಮಾಡಿದ್ದಾರೆ.