BIGGBOSS 8 – ‘ನೀನು ಮುಂದಿನ ವಾರವೇ ಎಲಿಮಿನೇಟ್ ಆಗು’… ಶಮಂತ್ ಗೆ ಶಾಪ ಕೊಟ್ಟಿದ್ದೇಕೆ ಪ್ರಿಯಾಂಕಾ..?

1 min read

BIGGBOSS 8 – ‘ನೀನು ಮುಂದಿನ ವಾರವೇ ಎಲಿಮಿನೇಟ್ ಆಗು’… ಶಮಂತ್ ಗೆ ಶಾಪ ಕೊಟ್ಟಿದ್ದೇಕೆ ಪ್ರಿಯಾಂಕಾ..?

ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಪ್ರಿಯಾಂಕಾ ತಿಮ್ಮೇಶ್, ತಮ್ಮದೇ ಒಂದು ವಿಭಿನ್ನ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ. ಶಮಂತ್ , ಸಂಬರಗಿ , ಚಕ್ರವರ್ತಿ ಜೊತೆಗೆ ಸ್ಪಲ್ಪ ಸನಿಹವಾಗಿದ್ದಾರೆ. ನೇರ ನುಡಿ , ಹೆಚ್ಚಿನವರ ಜೊತೆಗೆ ಬೆರೆಯದೇ ಆಟದಲ್ಲಿಯೂ ಅಷ್ಟೇ ಸ್ಟ್ರಾಂಗ್ ಆಗಿ ಆಡುವ ಪ್ರಿಯಾಂಕಾ ಇತ್ತೀಚೆಗೆ ಟಾಸ್ಕ್ ನಲ್ಲಿ  ಮಂಜು ಪಾವಗಡ ಅರವಿಂದ್ ಮೋಸದಾಟ ಆಡಿದ್ದಾರೆಂದು ತಿರುಗಿಬಿದ್ದಿದ್ದರು. ಪ್ರಿಯಾಂಕ ಹಟದಿಂದ ಸ್ಪರ್ಧಿಗಳು ಹಸಿವಿನಿಂದ ಒದ್ದಾಡುವಂತಾಗಿತ್ತು.

ಇಷ್ಟೆಲ್ಲಾ ಆದ ನಂತರ ಎಂದಿನಂತೆ ಈ ವಾರವೂ ಕಳಪೆ ಬೋರ್ಡ್ ಯಾರಿಗೆ ನೀಡುವುದು ಎಂಬ ಬಗ್ಗೆ ಮನೆ ಸದಸ್ಯರು ಚರ್ಚೆ ಮಾಡಿದ್ದಾರೆ. ಅಂತಿಮವಾಗಿ ಎಲ್ಲರೂ ಪ್ರಿಯಾಂಕಾಗೆ ಈ ಪಟ್ಟಿ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.   ಪ್ರಿಯಾಂಕಾ ಜೈಲಿಗೆ ತೆರಳಿದ ನಂತರ ಅವರ ಬಳಿ ಶಮಂತ್ ಮಾತನಾಡಲು ಹೋಗಿದ್ದಾರೆ. ಈ ವೇಳೆ ಪ್ರಿಯಾಂಕಾ ಶಮಂತ್ ಗೆ ನೀನು ಮುಂದಿನ ವಾರವೇ ಎಲಿಮಿನೇಟ್ ಆಗು ಎಂದು ಶಾಪ್ ಹಾಕಿದ್ದಾರೆ. ಯಾಕಂದ್ರೆ ಪ್ರಿಯಾಂಕಾಗೆ ಕಳಪೆಗಾಗಿ ವೋಟ್ ಮಾಡಿದ್ದವರ ಪೈಕಿ ಶಮಂತ್ ಕೂಡ ಒಬ್ಬರು.. ಆದ್ರೆ ಮನೆ ಮಂದಿಯೆಲ್ಲರ ಸಿಟ್ಟನ್ನ ಪ್ರಿಯಾಂಕಾ ಶಮಂತ್ ಒಬ್ಬರ ಮೇಲೆಯೇ ತೀರಿಸಿಕೊಂಡಿದ್ದಾರೆ.

ಶಮಂತ್ ಜೈಲಿನಲ್ಲಿ ಪ್ರಿಯಾಂಕಾ ಬಳಿ ಮಾತನಾಡಲು ಹೋದಾಗ – ಬೇಜಾರಾಗಬೇಡಿ ಎಂದಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ನಾನಿಲ್ಲಿಂದ ಹೊರಗೆ ಬಂದಮೇಲೆ, ನಿನ್ನ ಜೊತೆ ನಯಾಪೈಸೆಯೂ ಸೇರುವುದಿಲ್ಲ. ಯಾಕೆಂದರೆ, ನನಗೆ ಇಷ್ಟಬಂದವರ ಜೊತೆಗೆ ನಾನು ಸೇರುತ್ತೇನೆ. ನಾನಿಲ್ಲಿಗೆ ಸಂಬಂಧಗಳನ್ನು ಹುಟ್ಟುಹಾಕೋಕೆ, ಎಲ್ಲರೊಂದಿಗೆ ಬೆರೆಯುವುದಕ್ಕೆ ಬಂದಿಲ್ಲ. ನಾನು ಆಟ ಆಡಬೇಕು, ನಾನೇನೂ ಅಂತ ಸಾಬೀತು ಮಾಡಬೇಕು ಎಂದಿದ್ದಾರೆ.

ಬಳಿಕ ಯಾರ ಜೊತೆಗೂ ಮಾತಾಡಲ್ವಾ ಎಂದು ಶಮಂತ್ ಪ್ರಶ್ನಿಸಿದ್ದಾರೆ.  ಆಗ ಉತ್ತರಿಸಿದ ನಾನಾಗಿಯೇ ಮಾತನಾಡಲ್ಲ. ಮಾತಾಡಿದ್ರೆ, ಮಾತಾಡಿಸ್ತೀನಿ. ಅವರಿಗೂ ನನ್ನ ಜೊತೆ ಮಾತನಾಡಬೇಕು ಅಂತ ಇರಬೇಕಪ್ಪ. ಇಲ್ಲಿಂದ ಹೊರಗೆ ಹೋದಮೇಲೆಯೂ ನೀನೊಬ್ಬ ಬೆಸ್ಟ್ ಫ್ರೆಂಡ್ ಆಗ್ತೀಯಾ ಅಂತ ನಾನು ಅಂದ್ಕೊಂಡಿದ್ದೆ. ಇನ್ನೊಬ್ಬರ ಜೊತೆ ಇನ್ವಾಲ್ಮೆಂಟ್ ಇಲ್ಲ ನೀನು ಯಾಕ್ ಯೋಚನೆ ಮಾಡ್ತೀಯಾ. ನಿನ್ನ ಜೊತೆ ನಾನು ಮಾತಾಡಲ್ವಾ? ಹೇಳು ಎಂದು ಪ್ರಿಯಾಂಕ ಶಮಂತ್‍ಗೆ ಹೇಳಿದ್ದಾರೆ. ಬಿಗ್‍ಬಾಸ್ ಹತ್ರ ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ಶಮಂತ್ ಹೇಳಿದ್ದಾರೆ.Bro Gowda

ಇದೇ ವೇಳೆ ಮುಂದಿನ ವಾರವೇ ಈ ಮನೆಯಿಂದ ಹೊರಗೆ ಹೋಗು ನೀನು. ನಂದೇ ಶಾಪ. ನಾಚಿಕೆ ಆಗ್ಬೇಕು. ಕಳಪೆ ಅಂತ ಹೇಳಿಬಿಟ್ಟು, ಕಳಪೆ ಜಾಗದಲ್ಲಿ ಬಂದು ಮಾತಾಡ್ತಾ ಇದಿಯಲ್ಲ. ನೀನು ಬಂದು 10 ವಾರ ಆಗಿದೆ. ಈಗ ಇನ್ನೊಬ್ಬರ ಬಾಯಲ್ಲಿ ಇವಾಗ ಚೆನ್ನಾಗಿ ಆಡ್ತಾ ಇದ್ದಾನೆ ಪರವಾಗಿಲ್ಲ ಅಂತ ಅನ್ನಿಸ್ಕೋತಿಯಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ.

ಅಂದ್ರೆ ಇವಾಗಲೇ ಬಿಗ್ ಬಾಸ್ ಕಪ್ ಕೊಟ್ಟು ಕಳಿಸಬೇಕಾಗಿತ್ತಾ.  ಎಂದು ಶಮಂತ್ ಹೇಳಿದ್ದಾರೆ. ಅದಕ್ಕೆ 3 ವಾರದಲ್ಲೇ ನಿನ್ನನ್ನ ನೀನು ಸಾಬೀತು ಮಾಡ್ಕೋಬೇಕಿತ್ತು. 10 ವಾರದವರೆಗೂ ಕಾಯಬೇಕಿತ್ತಾ. ಅದೇನು ಮಾಡುತ್ತೀಯಾ ನಾನು ನೋಡುತ್ತೇನೆ ಎಂದು ಪ್ರಿಯಾಂಕ ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd