BIGGBOSS 8 – ದೊಡ್ಮನೆಯಲ್ಲಿ ಲೇಡಿ ಸ್ಪರ್ಧಿಗಳ ನಡುವೆ ಜಡೆ ಜಂಗಿ ಕುಸ್ತಿ..!
ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರ ಆರಂಭದ ದಿನಗಳಲ್ಲಿ ಮನೆಯಲ್ಲಿ ಹೆಚ್ಚಾಗಿ ಜಡೆ ಜಗಳ ನಡೆದಿದ್ದು ಅಂದ್ರೆ ನಿರ್ಮಲಾ ಚನ್ನಪ್ಪ ಹಾಗೂ ಚಂದ್ರಕಲಾ ಮೋಹನ್. ನಂತರ ಮಹಿಳಾ ಸ್ಪರ್ಧಿಗಳ ನಡುವೆ ಅಷ್ಟಾಗಿ ವೈಮಸ್ಸುಗಳಿದ್ರು ಜಗಳ ಮಾಡೋ ಹಂತಕ್ಕೆ ತಲುಪಿರುವುದು ತೀರಾನೇ ಕಡಿಮೆ. ಆದ್ರೆ ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ನಂತರ ಮತ್ತೆ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ನಡುವೆ ಜಂಗಿ ಕುಸ್ತಿ ಏರ್ಪಟ್ಟಿದೆ.
ಹೌದು.. ನಿಧಿ ಸುಬ್ಬಯ್ಯ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರುವ ಪ್ರಿಯಾಂಕಾ ತಿಮ್ಮೇಶ್ ಅವರ ನಡುವೆ ಮನಸ್ತಾಪವಾಗಿದೆ. ಇಬ್ಬರು ಟಾಸ್ಕ್ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ್ದಾರೆ. ಹಾಸ್ಟೆಲ್ ಟಾಸ್ಕ್ ವೇಳೆ ಪ್ರೇಮಪತ್ರವನ್ನು ಕೊಡಲು ಒಪ್ಪದಿದ್ದಕ್ಕೆ ನಿಧಿ ಸುಬ್ಬಯ್ಯ ಅವರು ಪ್ರಿಯಾಂಕಾಗೆ ಸ್ಟುಪ್ಪಿಡ್ ಅಂತ ಬೈಯ್ದಿದ್ದರು. ಪ್ರಿಯಾಂಕಾ ಹಾಗೂ ನಿಧಿ ನಡುವೆ ಸಣ್ಣ ಮನಸ್ತಾಪ ಆಗಲೇ ಶುರುವಾಗಿತ್ತು. ಈಗ ಟಾಸ್ಕ್ ವೇಳೆ ಹೆಚ್ಚಾಗಿದೆ. ಈ ಬಗ್ಗೆ ಪ್ರಿಯಾಂಕಾ ಹಾಗೂ ನಿಧಿ ಇಬ್ಬರೂ ಸಹ ಮನೆಯ ಬೇರೆ ಬೇರೆ ಸದಸ್ಯರ ಜೊತೆಗೆ ಮಾತನಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರಿಯಾಂಕಾ ಚಕ್ರವರ್ತಿ ಜೊತೆಗೆ ಮಾತನಾಡಿದ್ದು, ಗೇಮ್ ವಿಷಯ ಬಂದಾಗ ದಿವ್ಯಾ ಮತ್ತಿರರು ನಾನು ನಾನು ಅಂತ ಕೈ ಎತ್ತುತ್ತಾರೆ, ನಾನು ಗೇಮ್ ಆಡುತ್ತೇನೆ ಎಂದು ಹೇಳಿದರೆ, ಬೇರೆನೆ ಹೇಳುತ್ತಾರೆ. ನಾವು ಹಾಗಾದ್ರೆ ಸ್ಟ್ರಾಂಗ್ ಇಲ್ವಾ ಅದಕ್ಕೆ ನಾನು ಪ್ರಶ್ನೆ ಮಾಡಿದೆ. ಆಮೇಲೆ ಆಸಕ್ತಿಯೇ ಇಲ್ಲದಂತೆ ತೋರಿಸ್ತಾರೆ, ಆಗ ನಾನು ಏನು ಮಾಡಲಿ ಎಂದು ಹೇಳಿಕೊಂಡಿದ್ದಾರೆ. ಇತ್ತ ನಿಧಿ ಸುಬ್ಬಯ್ಯ ಸಹ ಈ ಬಗ್ಗೆ ದಿವ್ಯಾ ಉರುಡುಗ ಜೊತೆ ಚರ್ಚೆ ಮಾಡಿದ್ದಾರೆ. ಬೇಕು ಬೇಕು ಅಂತ ನನ್ನ ಜೊತೆ ಜಗಳ ಮಾಡೋದಾ. ವೈಲ್ಡ್ ಕಾರ್ಡ್ದೇ ಒಂದು ಉದ್ದೇಶ ಇರತ್ತೆ ಎಂದು ನಿಧಿ ಸುಬ್ಬಯ್ಯ ಅವರು ಹೇಳಿಕೊಂಡಿದ್ದಾರೆ.
ಇನ್ನೂ ಗೇಮ್ ನಲ್ಲಿ ಸ್ಟ್ರಾಂಗ್ ನಾನು ಆಡ್ತೇನೆ ಎಂದ್ರೆ ನಿಧಿ ಸ್ಟ್ರಾಂಗ್ ಇರುವವರು ಬೇಕು ಅನ್ನುತ್ತಾರೆ ಹಾಗಾದ್ರೆ ನಾನು ಸ್ಟ್ರಾಂಗ್ ಇಲ್ವಾ ಎಂದು ಪ್ರಿಯಾಂಕ ಬೇಸರ ಹೊರಹಾಕಿದ್ದಾರೆ. ಅಲ್ಲದೇ ಈ ಬಗ್ಗೆ ನಿಧಿ ಬಳಿಯೂ ಮಾತನಾಡಿದ ಪ್ರಿಯಾಂಕಾ ನಾನು ಸ್ಟ್ರಾಂಗ್ ಇಲ್ಲ ಅಂತಾ ಹೇಗೆ ಹೇಳುತ್ತೀರಾ. ನನ್ನ ಆಟದ ಬಗ್ಗೆ ನಿಮಗೆ ಗೊತ್ತಿಲ್ಲ ಅದಕ್ಕೆ ನಾನು ಆಡ್ತೀನಿ ಅಂತಾ ಹೇಳಿದೆ ಅಷ್ಟೇ ಅದನ್ನು ಬಿಟ್ಟು ನಾನು ಹೇಳುತ್ತಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ. ಇದಕ್ಕೆ ನಿಧಿ ಕೆಲ ಕಾರಣಗಳನ್ನೂ ನೀಡಿದ್ದರು. ಅದರೆ ಪ್ರಿಯಾಂಕ ಮಾತ್ರ ನಾನು ಜಗಳ ಆಡಲು ಆಗಲ್ಲ. ಹಾಗಾಗಿ ನಾನು ನನಗೆ ಅನ್ನಿಸಿದ್ದನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ. ಆದ್ರೆ ಇದು ಇಲ್ಲಿಗೆ ನಿಲ್ಲುವುದಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರಿನ ನಡುವಿನ ಜಗಳ ಎಷ್ಟು ತೀವ್ರತೆ ಪಡೆದುಕೊಳ್ಳಲಿದೆ ಅನ್ನೋದನ್ನೂ ಕಾದು ನೋಡಬೇಕಾಗಿದೆ.